Thursday, November 01, 2007

ಕುವೆಂಪು ಎಂಬ ಹಕ್ಕಿ

ಕಾಜಾಣ ಹಕ್ಕಿ ಓ ಜಾಣ ಹಕ್ಕಿ, ಎಲ್ಲಿಂದ ಬಂದೆ ಹೇಳೇ?
ಮಲೆನಾಡ ಕಾಡ ಒಳಲಾಳದಿಂದ ಗಂಧದ ಗೂಡಿನಿಂದ
ಮಲೆನಾಡ ಹಕ್ಕಿ ಎಲೆ ನಾಡ ಹಕ್ಕಿ, ಅಲ್ಲೇನು ಕಂಡೆ ಹೇಳೆ?
ಕುಪ್ಪಳ್ಳಿಸುತ್ತ ಕುಪ್ಪಳಿಸುತ್ತ ಹತ್ತಿ ಕವಿಶೈಲದ ಮೇಲೆ

ಸುತ್ತಲು ಕಂಡೆ ಸೂರ್ಯೆಂಬೊ ದೊರೆಯ, ಸಾವಿರ ರಾಜ್ಯದ ಸಿರಿಯ
ಮರ ಮಣ್ಣು ಕಲ್ಲು ಮಾಮನ ಬಿಲ್ಲು, ಹಾಡೆಂದು ನೀಡಿದ ಕರೆಯ
ಕಾಡಿನ ತುಂಬ ದೇವರ ಬಿಂಬ ಸುತ್ತೆಲ್ಲ ಹಸುರಿನ ಹಾಡು
ಹೂವರಳುವ ಸದ್ದು ತುಂಗೆಯ ಮುದ್ದು ತೆರೆದಾವೊ ಹಾಡಿನ ಜಾಡು

ನನಕಾಡುವಕ್ಕಿ ಏ ಹಾಡುವಕ್ಕಿ, ಇಲ್ಲೇಕೆ ಬಂದೆ ಹೇಳು?
ಮೈಸೂರಿನೊಳಗೆ ಶಿವಮೊಗ್ಗೆ ಅದಲಿ (?) ಗಮನಿದ್ದ(?) ಕನಸಾಯ್ತು ಕೇಳು
ಪುಟ್ಟ ಕೊರಲಲ್ಲಿ ಇಷ್ಟೊಂದು ಹಾಡು ಇಟ್ಟವರ್ಯಾರು ಹೇಳೆ?
ಹಾಡಿನ ಕಣಿವೆ ಕೊಳಲಾದಮೇಲೆ ಬಾಳಿಗೆ ರಾಗದ ಲೀಲೆ

ಆಕಾಶ ಅಲೆವ ಹಸ್ತಗಳ ರೆಕ್ಕೆ ಎಲ್ಲಿತ್ತು ಹೇಳೆ ಹಕ್ಕಿ?
ಕಣ್ಣಲ್ಲಿ ಹೊಳೆವ ಕೋಲ್ಮಿಂಚು ಬಳ್ಳಿ ಎಲ್ಲಿತ್ತೆ ಕನ್ನಾಡ ಹಕ್ಕಿ?
ನಾನಾನ ಕಂಡೆ ಬಾಯೆಂದು ಕರೆದೆ ಬಂದಾನೊ ಈ ರೆಕ್ಕೆ ಹಕ್ಕಿ
ರೆಕ್ಕೆಯ ಬಿಚ್ಚಿ ನನ್ನ ಕೊರಳಸುತ್ತಿ ಬಂದೇನೊ ಚಂದ್ರನ ಹುಡುಕಿ

ಕರುನಾಡವಕ್ಕಿ ಇನಿವಾಡ ಹಕ್ಕಿ, ಎಲ್ಲಾಯ್ತೆ ನಿನ್ನೊಂದು ಬೀಡು?
ಹಾಡಾಡೊವೆದೆಗೆ ಬೀಡಿನ ಹಂಗೆ ಬಾನಬಯಲೇ ನಿನ್ನ ಗೂಡು
ಕನ್ನಡವಕ್ಕಿ ಹೊನ್ನಾಡವಕ್ಕಿ ನೀನೆಲ್ಲಿ ಹಾರಿಹೋದೆ?
ಬಯಲಿಗು ಭುವಿಗೂ ಬೆಳಕಿನ ಗೆರೆಯ ನಿನಹಾಡಿನಲ್ಲೇ ಎಳೆದೆ

ನೀಹೀಗೆ ಎದೆಗೆ ನೀಹಾರಿ ಹೋದೆ ಬಾಯಲ್ಲಿ ಹಾಡಿನ ಎಡೆಗೆ
ನೀನಿಲ್ಲ ನಿನ್ನ ಹಾಡಿನ ಹೆಜ್ಜೆ ನಿಂತಿಲ್ಲ ಈ ಮಣ್ಣಿನಲ್ಲಿ
ಉಸಿರಾಡುವನಕ ಈನಾಡ ಮಂದಿ, ಹೇಗಿರುವೆ ನಮ್ಮ ಜೊತೆಯಲ್ಲಿ
ಕನ್ನಡವಕ್ಕಿ ಹೊನ್ನಾಡವಕ್ಕಿ ನೀನೆಲ್ಲಿ ಹಾರಿಹೋದೆ? ನೀನೆಲ್ಲಿ ಹಾರಿ ಹೋದೆ??

ಇದು ನಾನು ಬರೆದದ್ದಲ್ಲ, ನನಗಷ್ಟೊಂದು ತಾಕತ್ತೂ ಇಲ್ಲ! ಇದು ಕಳೆದ ಶನಿವಾರ ಕಸ್ತೂರಿ ವಾಹಿನಿಯಲ್ಲಿ ಪ್ರೊ. ಕೃಷ್ಣೇಗೌಡ ಅವರು ಪ್ರಸ್ತುತ ಪಡಿಸಿದ ಭಾವಗೀತೆಗಳ ಕಾರ್ಯಕ್ರಮದಲ್ಲಿ ಕು.ವೆಂ.ಪು. ಅವರ ಬಗ್ಗೆ ಅವರು ನಿಧನರಾದಾಗ ಅವರು ಬರೆದ ಒಂದು ಹಾಡು. ಹಾಗೆಂದು ಅವರೇ ಹೆಳಿ, ಹಾಡಿದರು. ನನಗೆ ಅವರ ಹಾಡಿನಲ್ಲಿ ಕು.ವೆಂ.ಪು.ಅವರನ್ನು ಒಂದು ಹಕ್ಕಿಗೆ ಹೋಲಿಸಿ ಬರದಿರುವ ಶೈಲಿ ತುಂಬಾ ಹಿಡಿಸಿತು. ಅದಕ್ಕೆ ಅದನ್ನ ಇಲ್ಲಿ ಇಳಿಸಿದ್ದೇನೆ - ಕೃಷ್ಣೇಗೌಡರ ಒಪ್ಪಿಗೆ ಇಲ್ಲದೆ. ತಪ್ಪುಗಳಿದ್ದಲ್ಲಿ (ಹಲವಾರು ತಪ್ಪುಗಳಿವೆ ಎಂದು ನನಗೆ ಗೊತ್ತು) ದಯವಿಟ್ಟು ನನಗೆ ತಿಳಿಸಿ, ಸರಿಪಡಿಸುತ್ತೇನೆ.

ಇದನ್ನ ಕಳೆದ ವಾರವೇ ಬ್ಲಾಗಿಸಬೇಕೆಂದಿದ್ದೆ ಆದರೆ ಆಗಲಿಲ್ಲ. ಕೊನೆಗೆ ಕನ್ನಡ ರಾಜ್ಯೋತ್ಸವದ ರಜೆಯೇ ಬೇಕಾಯ್ತು. :)

Sunday, October 21, 2007

ಆಯುಧಪೂಜೆಯ ಹಳೆಯ ನೆನಪು

“ಎಲ್ಲಿಹೋಗಿದ್ಯೊ ಇಷ್ಟ್‍ಹೊತ್ತು?”
ಅಮ್ಮನ ಒಳಶುಂಠಿ ಬಿಗಿಯಾಗುತ್ತಿತ್ತು. ಅದರ ನೋವು, ಉರಿ ಕಣ್ಣಲ್ಲಿ ನೀರು ಬರಿಸಿತ್ತು. ನಿಧಾನ ವಾಗಿ ಬಾಯಿಬಿಟ್ಟೆ “ಲಾರಿನಲ್ಲಿ ಹೋಗಿದ್ದೆ”
“ಎಲ್ಲಿಗೆ? ಯಾರ್ಜೊತೆ?”
“ಎದುರುಗಡೆ ಮನೆ ಅಣ್ಣಾಜಿ ಅವರ ಲಾರಿಲಿ, ತಣ್ಣೀರ್ಹಳ್ಳ ತಂಕ. ನಾನು ಮಧು ಇಬ್ಬರೂ ಇದ್ವಿ”
“ನಾವೆಲ್ಲಾ ಎಷ್ಟು ಯೋಚಿಸಿದ್ವಿ ಎಲ್ಲಿ ಹೋಗಿದ್ರಿ ಅಂತ, ಅದರ ಬಗ್ಗೆ ಯೇನಾದ್ರು ಇದ್ಯ ನಿಮ್ಗೆ?
ನನಗೆ ಏನೂ ಹೇಳೋಕೆ ಗೊತ್ತಾಗಲಿಲ್ಲ. ಸುಮ್ಮನಿದ್ದೆ. “ಇನ್ನೊಂದುಸಲ ಹೀಗೆ ಮಾಡಲ್ಲಮ್ಮ!” ಅಂತಷ್ಟೇ ಹೊರಗೆ ಬಂದದ್ದು.

ಅವತ್ತು ವಿಜಯದಶಮಿ. ದಸರ ಹಬ್ಬಕ್ಕೆ ಶಾಲೆಗೆ ರಜ ಬಂದಾಗ ನನ್ನ ತಾತನ ಮನೆ ಹಾಸನಕ್ಕೆ ಯಾವಾಗಲೂ ಹೋಗ್ತಿದ್ವಿ. ಆ ವರ್ಷನೂ ಹೋಗಿದ್ವಿ. ನಮ್ಮ ಮನೆಯ ಮುಂದೆ ಅಣ್ಣಾಜಿ ಅನ್ನುವವರು ತುಂಬಾ ಲಾರಿ ಇಟ್ಟುಕೊಂಡಿದ್ದರು. ವಿಜಯದಶಮಿಯ ದಿನ ಬಂತೆಂದ್ರೆ, ನಮ್ಮ ರಸ್ತೆಯ ಉದ್ದಕ್ಕೂ ಲಾರಿಗಳೇ – ಸುಮಾರು ಹದಿನೈದು ಇರಬಹುದು. ನಾನಾಗ ಎರಡನೆ ಅಥವ ಮೂರನೇ ತರಗತಿಯಲ್ಲಿದ್ದಿರಬಹುದು. ಅಷ್ಟೊಂದು ಲಾರಿಗಳನ್ನ ಒಟ್ಟಿಗೆ ನೋಡೋದೇ ಹಬ್ಬ ನನಗೆ. ಲಾರಿಯ ಮುಂಭಾಗ ಪೂರ ಬಣ್ಣ-ಬಣ್ಣದ ಹೂವುಗಳಿಂದ ಅಲಂಕಾರ ಮಾಡುತ್ತಿದ್ದರು. ಜೊತೆಗೆ ಅವತ್ತು ಅದರಲ್ಲಿ ಎಲ್ಲರನ್ನೂ ಸುಮಾರು ದೂರ ಕರೆದುಕೊಂಡು ಹೋಗುತ್ತಿದ್ದರು. ಸುಮಾರು ಜನ ಅದರಲ್ಲಿ ಹತ್ತಿದ್ದರು. ನಾನು ಮತ್ತು ನನ್ನ cousin ಇಬ್ಬರೂ ಚಿಕ್ಕವರು – ಇವೆಲ್ಲಾನೋದು ಖುಷಿಯಿಂದ ಎಲ್ಲಾ ಜನರಜೊತೆ ಹೊರಟೆವು. ನಾವಿದ್ದ ಲಾರಿಗಳು ಊರ ಹೊರಗಿನ ತಣ್ಣೇರ್ ಹಳ್ಳ ಅನ್ನೋಜಾಗಕ್ಕೆ ಕರೆದು ಕೊಂಡು ಬಂತು. ಅಲ್ಲಿ ಯೇನು ಮಾಡಿದರು ಅನ್ನೋದು ನನಗೆ ಜ್ಞ್ನಾಪಕವಿಲ್ಲ. ಅಲ್ಲಿಂದ ಮನೆಗೆ ಬಂದಾಗ ಸಂಜೆ ಕತ್ತ್ಲಾಗಿತ್ತು. ಮನೆಗೆ ಬಂದತಕ್ಷಣ ಮನೆಯವರಿಂದ ಒಂದು ಸುತ್ತು ಚೆನ್ನಾಗಿ ಪೂಜೆ ನಡೀತು.

ನಮಗೆ ದೊಡ್ಡವರ ಗಾಬರಿ ಹೇಗೆ ಅರ್ಥವಾಗುತ್ತೆ ಹೇಳಿ. ಆದರೆ ತುಂಬಾ ನಿಧಾನವಾದಾಗ ಮನೆಯಲ್ಲಿ ಬೈಗುಳ ನೆನಪಿಸಿಕೊಂಡು ಇಬ್ಬರೂ ಹೆದರಿದ್ದೇನೊ ಹೌದು!

***

ನಮ್ಮ ತಾತ ಸತ್ತ ಮೇಲೆ ನಾನು ನನ್ನ ಮಾವನ ಮನೆಗೆ ದಸರ ರಜೆಯಲ್ಲಿ ಹೋಗೋದು ವಾಡಿಕೆಯಾಯ್ತು. ಪ್ರತೀ ವರ್ಷವೂ ನನ್ನ ಮಾವನಮನೆಗೇ ರಜ ಬಂದ ಒಂದೆರಡು ದಿನದಲ್ಲಿ ಹಾಜರ್! ನನ್ನ ಮಾವನ ಹತ್ರ Bajaj Super ಸ್ಕೂಟರ್ ಇತ್ತು. ಆಯುಧಪೂಜೆಯಂದು ಅದಕ್ಕೆ ಪೂಜೆ! ಅದಾದಮೇಲೆ ನನ್ನ ಮಾವ ಅದರಲ್ಲಿ ಒಂದು round ಕರೆದು ಕೊಂಡು ಹೋಗುತ್ತಿದ್ದರು. ನನ್ನ ಹಳ್ಳಿಯಲ್ಲಿ ಯಾವ ವಾಹನ ಲಾಭವೂ ನನಗಾಗುತ್ತಿರಲಿಲ್ಲ ವಾದ್ದರಿಂದ ಅದಕ್ಕೆ ಕಾಯ್ದು ಕೂತಿರ್ತಿದ್ದೆ. ಸ್ಕೂಟರ್ಗೆ ಮಂಗಳಾರತಿ ಆದತಕ್ಷಣ ಯಾವಾಗ ನನ್ನ ಮಾವ ’ಕೂತ್ಕೊ’ ಅಂತ ಹೇಳ್ತಾರೋ ಅಂತ ಒಂಟಿಕಾಲಲ್ಲಿ ಕಾಯ್ತಿರ್ತಿದ್ದೆ. ಅವರು ಕರೆದು ಕೊಂಡು ಹೊರತಾಗ ನಾನೇ ರಾಜ ಅನ್ನೋಥರ ಅನುಭವ! ಕಾದದ್ದಕ್ಕೊ ಒಳ್ಳೆ ಫಲಿತಾಂಶ! ಆದ್ರೆ ಒಂದುಬಾರಿ ಮಾತ್ರ ಪೂಜೆ ಯಾದ ತಕ್ಷಣ ಮಾವ ಸ್ಕೂಟರ್ ಹೊರಗೆ ತೆಗೆಯಲಿಲ್ಲ. ಆದ್ರೆ ಕೇಳೋ ಧೈಯನೂ ಇಲ್ಲ. ಒಳಗೊಳಗೇ ’ಯಾಕೆ ನಮ್ಮನ್ನ ಕರೆದುಕೊಂಡು ಹೋಗ್ತಿಲ್ಲ. ಕರೆದುಕೊಂಡು ಯೋಗಕ್ಕೇನು?’ ಅನ್ನಿಸಿತ್ತು. ಮತ್ತೆ ಹೋಗಿ ಅಮ್ಮನಹತ್ರ ಪಿಸಿಮಾತಲ್ಲಿ ’ಮಾವಂಗೆ ಸ್ಕೂಟರ್ನಲ್ಲಿ ಕರೆದುಕೊಂಡು ಹೋಗಕ್ಕೇಳಮ್ಮ’ ಅಂತ ಬೇರೆ ಶಿಫಾರಸ್ ಮಾಡೋಕೂ ಪ್ರಯತ್ನ ಮಾಡಿದ್ದೆ. ಆದರೆ ಅದು ಸಂಜೆ ವರೆಗೂ ನಡೆದಿರಲಿಲ್ಲ! ಕೊನೆಗೆ ಸಂಜೆ ದೊಡ್ಡ round ಸಿಕ್ಕಿತ್ತು. ಅದರ ಖುಷಿ ಈಗ ನನ್ನ ಲಕ್ಷಗಟ್ಟಲೆ ಕೊಟ್ಟು ತಗೊಂಡಿರೋ carನಲ್ಲಿ ಹೋದಾಗ್ಲೂ ಇಲ್ಲರಿ!!

***

ಪ್ರತೀ ವಿಜಯದಶಮಿಯಂದು ನನಗೆ ರಾಮ-ರಾವಣ, ಮಹಿಷಾಸುರ-ಚಾಮುಂಡೇಶ್ವರಿ, ಪಾಂಡವರು-ಕೌರವರು ನೆನಪಿಗೆ ಬರುತ್ತಾರೋ ಇಲ್ಲವೊ, ಈ ಎರಡೂ ಘಟನೆಗಳು ನೆನಪಿಗೆ ಬರುತ್ತೆ. ನೆನಪಿಸಿಕೊಳ್ಳದ ವರ್ಷವೇ ಇಲ್ಲ! ಮುಂಚೆ ಕಾರಣ ಯಾವುದೇ ಇರಲಿ, ಇರುತ್ತಿದ್ದ ಆಸೆ, ಆ ಸಂಭ್ರಮ ಈಗ ಇಲ್ಲ. ಪೂಜೆ ಮಾಡಬೇಕು ಅಂತ ದೊಡ್ಡವರು ಹೇಳಿದ್ದಾರೆ. ನವಮಿಯಲ್ಲಿ ಆಯುಧಪೂಜೆ ಮಾಡಬೇಕು, ಮಾಡುತ್ತೇವೆ. ಆದ್ರೆ, ನನಗೇಕೋ ಹಿಂದಿದ್ದ ಖುಶಿ ಕಾಣುತ್ತಿಲ್ಲ. :(

ಏನೇ ಆಗಲಿ, ವಾಹನಗಳ ಪೂಜೆ, ಕಡ್ಲೆಪುರಿ, ಅದಾದಮೇಲೆ ಹೊರಗೆ ಹೋಗೋದು ಇವೆಲ್ಲಾ ಈಗಿನ ಚಿಕ್ಕಮಕ್ಕಳಿಗೂ ಅದೇ ಸಂಭ್ರಮ ತರುತ್ತೆ ಅಂತ ಅಂದ್ಕೊತೀನಿ.
ಬನ್ನಿ, ಈ ನವರಾತ್ರಿಯ ಸಂದರ್ಭದಲ್ಲಿ ಎಲ್ಲರಿಗೂ ಶಾಂತಿ, ಶಕ್ತಿ, ಸಂಯಮ, ಸಮ್ಮಾನ, ಸರಳತೆ, ಸಫಲತೆ, ಸಮೃದ್ಧಿ, ಸಂಸ್ಕಾರ ಹಾಗೂ ಸ್ವಾಸ್ಥ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ (ಇದು ನನ್ನ ಚಿಕ್ಕಪ್ಪನಿಂದ ಇವತ್ತು ಬಳಗ್ಗೆ ಬಂದ ಎಸ್ಸೆಮ್ಮೆಸ್!!).

Monday, October 08, 2007

ಕೋಪ...

ಮೊನ್ನೆ ಮನೆಯಲ್ಲಿ ಯಾವುದೋ ವಿಷಯಕ್ಕೆ ಕೋಪಿಸಿಕೊಂಡು ನನ್ನ ಸ್ನೇಹಿತನಜೊತೆ ಹೊರಗೆ ಹೋಗಿದ್ದೆ. ಅಲ್ಲಿ ಅವನಜೊತೆ ಏನೇನೋ ತಿನ್ನುವಾಗ, ಒಂದೆರಡು ಜೋಡಿಗಳು ಬಂದು ತಿನ್ನುತ್ತಿದ್ದುದು ಕಣ್ಣಿಗೆ ಬಿತ್ತು. ನನ್ನ ಸ್ನೇಹಿತನ ಜೊತೆ ಖುಷಿಯಾಗಿ ತಿನ್ನುತ್ತಿರೋಹಾಗೆ ಸುಳ್ಳು ಸೋಗೆ ಮುಖದಲ್ಲಿ ಹಾಕಿದ್ದರೂ, ಒಳಗಿದ್ದ ನೋವು ನನಗೆ ಮಾತ್ರ ಗೊತ್ತಿತ್ತು. ನಾನಂದುಕೊಂಡೆ - ನಾನೂ ಸಹ ನನ್ನ ಹೆಂಡತಿ ಜೊತೆ ಇಲ್ಲಿ ಅವರಹಾಗೇನೇ ತಿನ್ನುತ್ತಿದ್ದರೆ ಹೇಗಿತ್ತು ಅಂತ. ಖುಷಿಯಾಗಿ ಅವಳಜೊತೆ ತಿನ್ನುವ ಆನಂದವೇ ಬೇರೆ! ಆದ್ರೆ ಇದ್ದ ಕೋಪ?!! ಸರಿ, ಅವನೊಂದಿಗೆ ತಿಂದು ಎಷ್ಟೋ ಆನಂದಿಸಿ ಹೊರಟೆ. ಸ್ವಲ್ಪ ಹೊತ್ತು ಹೊರಗೆ ಸುತ್ತಾಡಿ ನಂತರ ಮನೆ!

ನಾನು ಬಹಳಬಾರಿ ಯೋಚಿಸಿದ್ದೇನೆ. ನಾವೇಕೆ ಕೋಪಿಸಿಕೊಳ್ಳುತ್ತೇವೆ? ಅದರಲ್ಲೂ ನಾವು ಇಷ್ಟಪಡುವವರ ಮೇಲೆಯೇ? ನಾನು ಗಮನಿಸಿರೋ ಹಾಗೆ ಹೆಚ್ಚಾಗಿ ನಾನು ಕೋಪಿಸಿಕೊಳ್ಳೋದು ಅಮ್ಮನಮೇಲೆ. ಯಾಕೇಂದ್ರೆ ಅವರೇ ತಾನೆ ಸುಲಭವಾಗಿ ಮಕ್ಕಳಿಗೆ ಸಿಗೋರು! ಮತ್ತೆ ಅಷ್ಟೇಬೇಗ ಅದು ಹೋಗುತ್ತೆ. ಬೇಜಾರಾಗುತ್ತೆ, ನಂತರ ಪಶ್ಚಾತ್ತಾಪ. ಅದು ಅಮ್ಮಂದಿರಿಗೂ ಗೊತ್ತು ಅನ್ನಿಸುತ್ತೆ. ಅದಕ್ಕೇ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಆವರಿಗೂ ಗೊತ್ತು, ನಾನು ಇಷ್ಟವಿಲ್ಲದೆ ಬಯ್ಯುತ್ತಿಲ್ಲ, ಕೇವಲ ಕ್ಷಣಿಕ ಕೋಪ. ಅದೇನೇ ಆಗಲಿ, ಕೋಪ ಕೋಪವೇ ಅಲ್ಲವೇ? ಆದು ಒಳ್ಳೆಯದಲ್ಲ ಅಂತ ನನಗೆ ಗೊತ್ತಿದೆ. ಆದರೂ ಯಾಕೆ ಅದನ್ನ ಸರಿ ಪಡಿಸಿಕೊಂಡಿಲ್ಲ? ಸಂಯಮ ಏಕೆ ಕಂಡು ಬರುತ್ತಿಲ್ಲ? ಅದರಲ್ಲೇ ಗೊತ್ತಾಗುತ್ತೆ ನಾನಿನ್ನೂ ಪಕ್ವವಾಗಿಲ್ಲ ಅಂತ :( ಒಮ್ಮೆ ಕೋಪಿಸಿಕೊಂಡು ಅದರ ಬಗ್ಗೆ ಪಶ್ಚಾತಾಪ ಪಟ್ಟಮೇಲೂ ಅದನ್ನು ಸಂಪೂರ್ಣವಾಗಿ ಬಿಟ್ಟಿಲ್ಲ ಅಂದ್ರೇನರ್ಥ??

ನನ್ನನ್ನ ಬಹಳವರ್ಷ ನೋಡಿದ ನನ್ನ ಸ್ನೇಹಿತ ಒಮ್ಮೆ ನನ್ನ ಕೋಪ ನೋಡಿ ಹೇಳಿದ - ’ನೀನು ಇಷ್ಟು ಕೋಪ ಮಾಡಿಕೊಂಡಿದು ನಾನು ನೋಡಿಲ್ಲ. controlಮಾಡಿರ್ತಿಯ ಆದ್ರೆ ಈಗೀಗ ಯಾಕೆ ಹೇಗಾಗಿದ್ದೀಯ?’ ಅಂತ. ಅದಕ್ಕೆ ಉತ್ತರ ನನ್ನಲ್ಲಿರಲಿಲ್ಲ. ನಾನು ಕಂಡಂತೆ ನಾನು ಕಿಂಚಿತ್ತು ಸಂಯಮ ಗಳಿಸಿದ್ದೇನೆ (ಪ್ರಯತ್ನಿಸಿದ್ದೇನೆ ಅನೋದು ಸರಿಯಿರಬಹುದು). ಬೇಗ ಕೋಪಿಸಿಕೊಳ್ಳೋದಿಲ್ಲ. ತಕ್ಷಣ ಬಂದ ಕೋಪನ ತಡೆಯುತ್ತೀನಿ. ಕೋಪ ಬಂದಾಗ ಮೂಲ ಯೋಚನೆಗೆ ತದ್ವಿರುದ್ಧವಾಗಿ ಯೋಚಿಸಲು ಪ್ರಾರಂಭಿಸಿತ್ತೀನಿ. ಆಗ ನನಗೆ ಹಿಂದಿನ ಅನಿಸಿಕೆ ತಪ್ಪು ಅನ್ನಿಸೋಕೆ ಶುರುವಾಗತ್ತೆ. ಆಗ ಅಂದುಕೋತಿನಿ - ನಾನು ಯಾರು ತಪ್ಪು ಅಂತ ತಿಳ್ಕೊಂಡು ಕೋಪಮಾಡಿಕೊಂಡಿದ್ದೆ ಅದು ಅವರಕಡೆಯಿಂದ ತಪ್ಪಲ್ಲ. ಹಾಗೇ ಒಂದುವೇಳೆ ಅಲ್ಲದಿದ್ದರೆ, ನನಗನ್ನಿಸಿದುದನ್ನು ಸರಿಯಾದ ರೀತಿಯಲ್ಲಿ ಹೇಳಬೇಕು (ನಾನು ಹಾಗೆ ಅಂದುಕೊಂಡು ಮತ್ತೆ ನನ್ನ ಸೌಮ್ಯಕ್ಕೇಏಟುಬಿದ್ದು ಕೋಪಿಸಿಕೊಂಡ ಸಮಯಗಳಿವೆ). ನನಗೆ ಕೋಪಬಂದಾಗ ಬೇರೇ ರೀತಿಯಲಿ ಯೋಚಿಸಕ್ಕೆ ಪ್ರಯತ್ನ ಪಾಡುತ್ತೇನೆ. ಏನೇಆದ್ರೂ ನಾವು ನಮ್ಮ ಕೋಪ ತಡಿಯದೆ ಏನೇನೋ ಮಾತಾಡಿ ನಂತರ ಪಶ್ಚಾತಾಪಪಟ್ಟರೆ ಅದು ಎಷ್ಟು ಸಮ? ಅದು ಯಾವರೀತಿಯಲ್ಲೂ ಸಹಾಯ ಮಾಡುವುದಿಲ್ಲ. ’ಕೋಪದಲ್ಲಿ ಕುಯ್ದ ಮೂಗು ಮತ್ತೆ ಶಾಂತವಾದಾಗ ಬರುವುದಿಲ್ಲ’ ಅನ್ನೋ ಮಾತು ನಿಜ! ಕೋಪದಲ್ಲಿ ನಾವಾಡುವ ಮಾತು ತುಂಬಾ ನೋವುಂಟುಮಾಡುತ್ತದೆ. ಅದಕ್ಕೇ ಏನೇ ಮಾತಾಡುವಾಗಲೂ ಅದು ಬೇರೆಯವರಿಗೆ ಎಂಥಹ ಪರಿಣಾಮಬೀರಬಹುದು ಅಂತ ಸ್ವಲ್ಪ ಯೋಚಿಸಿದರೆ ಉತ್ತಮ. ಹೀಗೇ ಯೋಚಿಸಲು ಪ್ರಾರಂಭಿಸಿದರೆ, ಆ ಸಮಯದಲ್ಲೀ ಬಹಳಷ್ಟು ವೇಳೆ ನಮ್ಮ ಕೋಪ ತಣ್ಣಾಗಾಗಬಹುದು. ಮುಂದಾಗುವ ಹಾನಿಯನ್ನು ತಡೆಯಬಹುದು. ಇಲ್ಲಾ, ’ಮೌನೇ ಕಲಹಂ ನಾಸ್ತಿ’ ಅನ್ನೋ ಸಂಸ್ಕೃತದ ನುಡಿಯನ್ನ ಪಾಲಿಸಬೇಕು.

ನಾನು ಗಮನಿಸಿರೋ ಮತ್ತೊಂದು ವಿಷಯ ಅಂದ್ರೆ, ಮನೆಯವರ ಮೇಲೆ ಬೇಗ ಕೋಪಿಸಿಕೊಳ್ಳುವ ಎಷ್ಟೋಮಂದಿ ಮನೆಯ ಹೊರಗಿನವರ ಮೇಲೆ ಮಾಡೊದಿಲ್ಲ. ಅಲ್ಲಿ ಬಹಳಷ್ಟು ಸಮಾಧಾನವಾಗಿ ಮಾತಾಡುತ್ತಾರೆ. ಒಂದು t-shirtನ ಮೇಲೆ ಓದಿದ ನೆನಪು: "you always hurt the ones you love" ಅಂತ! :) ಹಾಂ! ಬೇರೆಯವರ ಬಗ್ಗೆ ತಲೆಯಾಕೆ ಕೆಡಿಸಿಕೊಳ್ಳೊಡು ಉಅಂತಿರ್ಬೇಕು ಅಲ್ವೆ? ಅವರು ಏನು ಮಾಡಿದರೆ ನನಗೇನು, ಸರಿಯಾದ್ರೂ ಆಗ್ಲಿ, ತಪ್ಪಾದ್ರು ಆಗ್ಲಿ.. ಅದೇ ಮನೆಯವರಲ್ಲಿ/ಗೊತ್ತಿರುವವರಲ್ಲಿ??? ಇನ್ನೊಂದು ಸಾಲು ನೆನಪಿಗೆ ಬರುತ್ತಿದೆ ’ಪ್ರೀತಿಯಿದ್ದಲ್ಲಿ ಕೋಪವಿರುತ್ತೆ’ ಅಂತ!! ಅಥವ ಇದೊಂದು ಕೇವಲ ಕೋಪಮಾಡಿಕೊಳ್ಳೋದಕ್ಕೆ ಕೊಡೊ excuseಏ?

ನಾವೆಷ್ಟೇ ಓದಿರಲಿ, ಏನೆಲ್ಲಾ ಸಾಧಿಸಿರಬಹುದು, ಆದ್ರೆ ಕೋಪ ನಿಗ್ರಹಮಾಡಿರದೆದ್ದಲ್ಲಿ ಏನು ಪ್ರಯೋಜನ. ಯಾವುದಾದರೊಮ್ಮೆ, ಬಂದ ಕೋಪ ಅದೆಲ್ಲವನ್ನೂ ನೀರಿನ ಮೇಲೆ ಹೋಮ ಮಾಡಿದಂತೆ ಮಾಡುತ್ತದೆ. ನೀವು ಯಾರಿಗೇ ಎಷ್ಟೇ ಸಹಾಯ ಮಾಡಿರಿ, ಒಂದು ಕೋಪದ ಮಾತು ಅದೆಲ್ಲವನ್ನೂ ಬೆಲೆಯಿಲ್ಲದಂತೆ ಮಾಡುತ್ತದೆ. ನಮ್ಮ ಸಮಾಧಾನ ಎಲ್ಲರಲ್ಲಿ ಒಳ್ಳೆಯ ಅಭಿಪ್ರಾಯ ತರುತ್ತೆ.

ತುಂಬಾಜನ ’ನಾನು ಅವನನ್ನು ನೋಡಿಲ್ಲ, ಮಾತಾಡಿಸಿಲ್ಲ, ಆದ್ರೂ ಯಾಕೋ ಅವನ್ನ ಕಂಡ್ರೆ ನಂಗೆ ಕೋಪಬರುತ್ತೆ’ ಅಂತ ಹೇಳೋದು ಕೇಳಿದ್ದೀನಿ. ಯಾರೋ ಯಾಕೆ, ನಾನೇ ಹಾಗೆ ಹೇಳಿರೋದು (ಹಲವು ಹರ್ಷಗಳ ಹಿಂದೆ) ನೆನಪಿದೆ. ಅದಕ್ಕೆ ಕಾರಣ, ನಾವು ಅವರ ಬಗ್ಗೆ ನಮಗಿಷ್ಟವಿಲ್ಲದ, ಕೋಪಬರಿಸುವ ಗುಣಹೋದಿರೋರು ಅಂತಷ್ಟೇ ನಮ್ಮ ಮನಸ್ಸಿನಲ್ಲಿ ಯೋಚಿಸಿ ನಮ್ಮದೇ ಆದ ಕಲ್ಪನೆಯಲ್ಲಿ ಅವರನ್ನು ಕೆಟ್ಟವರನ್ನಾಗಿ ಮಾಡಿ ಕೋಪಿಸಿಕೊಳ್ಳುತ್ತೇವೆ. ಅಲ್ರೀ, ಅವರು ಗೊತ್ತೇಇಲ್ಲ ಅಂದಮೇಲೆ ಅವರು ಕೆಟ್ಟವರು ಹೇಗೆ ಆಗ್ತಾರೆ ಸ್ವಾಮಿ? ವಿಚಿತ್ರ ಅಲ್ವೆ? ಯಾರೇ ಆಗಲಿ, ಅವರಲ್ಲಿ ಒಳ್ಳೆಯದನ್ನು ಹುಡುಕಬೇಕು. ಅವರಲ್ಲಿ ಓಳ್ಳೆಯ ಗುಣಗಳನ್ನಷ್ಟೇ ಗಮನಿಸಬೇಕು. ಆಗಷ್ಟೇ ನಾವು ಎಲ್ಲರಲ್ಲೂ ಚೆನ್ನಾಗಿರಲು ಸಾಧ್ಯ. ಬೇರೆಯವರನ್ನು ಹೊಗಳೋದು ಬೇಡ, ತೆಗಳೋದುಕೂಡ ಯಾಕೆ? ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಒಳ್ಳೆಯ ಗುಣ ಇದ್ದೇ ಇರುತ್ತೆ, ಅದು ಎಲ್ಲರಿಗೂ ಗೊತ್ತಿರಲೇಬೇಕಿಲ್ಲ. ಹಾಗಾಗಿ, ನನಗಿಷ್ಟವಿಲ್ಲದಿದ್ದರೆ ನಾನು ಸುಮ್ಮನಿರಬೇಕೇ ಹೊರತು ಅವರಬಗ್ಗೆ ಕೋಪದಲ್ಲಿ ಏನೋ ಹೇಳುವುದು ಎಷ್ಟು ಸರಿ?

ಸರಿ. ಮತ್ತೆ ಏನೇನೋ ಬರಿಯುತ್ತಿದ್ದೆನಿ ಅನ್ನಿಸ್ತಿದೆ... ನಾನು ಈಥದ ಮಾತಾಡೋವಾಗೆಲ್ಲಾ ನನ್ನ ಹೆಂಡತಿ ’ನೀವು ತೊಂಬತ್ತು ವರ್ಷದವರಂತೆ ಮಾತಾಡ್ತಿರ ಈಗ್ಲೆ, ಮುಂದೆ ನನ್ನ ಗತಿಯೇನು’ ಅಂತ ಅವಳ ಮುದ್ದಾದ ಮುಖದಲ್ಲಿ ಆತಂಕತುಂಬಿ ಹೇಳೋದು ನೋಡಿ ತುಂಬಾಸಲ (ಒಳಗೊಳಗೇ) ನಕ್ಕಿದ್ದೇನೆ. ನಿಜವಾಗ್ಲೂ ನಂಗೆ ತೊಂಬತ್ತು ಅಲ್ಲಾರಿ... :(

Tuesday, August 21, 2007

ಇದು ನಮ್ಮ...

ಅದೊಂದು ೧೫ರಿಂದ ೨೦ ಅಡಿ ಎತ್ತರದ ಕಟ್ಟಡ. ಸುಮಾರು ೪೦ ಅಡಿ ಉದ್ದ ಮತ್ತೆ ೩೦ ಅಡಿ ಅಗಲದ ಕೋಣೆಯನ್ನ ಆ ಕಟ್ಟಡದಲ್ಲಿ ಮಾಡಿದ್ದಾರೆ. ಕೋಣೆಯ ಒಳಗೆ ಹೋಗಲು ಎರಡು ಮೆಟ್ಟಿಲುಗಳಿವೆ – ಕಟ್ಟಡದ ಎಡಭಾಗಕ್ಕೆ. ಮೆಟ್ಟಿಲು ಹತ್ತಿದ ತಕ್ಷಣ ಕಟ್ಟಡದ ಉದ್ದಕ್ಕೂ ಇರೋ ಜಗಲಿ ಬರುತ್ತೆ. ಅದನ್ನ ಧಾಟಿದರೆ ಕೋಣೆಗೆ ಪ್ರವೇಶ. ಆ ಕೋಣೆಯ ಪ್ರವೇಶವಾದ ಕೂಡಲೆ ಎದುರಿಗೋದು ಮೇಜು ಮತ್ತೆ ಕುರ್ಚಿ ಇದೆ. ಹಾಗೇ ಅಲ್ಲೇ ನಿಂತು ಬಲಕ್ಕೆ ತಿರುಗಿದರೆ ಸಾಲಾಗಿ ನಾಲ್ಕೈದು ಮಣೆಗಳಿವೆ. ಪ್ರತಿಯೊಂದು ಸಾಲಿನಲ್ಲೊ ಮಧ್ಯ ಸ್ವಲ್ಪ ಜಾಗ ಬಿಟ್ಟಿದ್ದಾರೆ – ಮಣೆಗಳ ಮಧ್ಯ – ಮುಂದಿನಿಂದ ಹಿಂದಿನವರೆಗೆ ಓಡಾಡೋಕೆ. ಬಲಭಾಗದ ಗೋಡೆಗೆ ಅವುಚಿಕೊಂಡಂತೆ ಎರಡು ಬೆಂಚು ಹಾಕಿದೆ. ಗಿಜಿ-ಗಿಜಿ ಅಂತ ಮಾತಾಡೋ ಶಬ್ಧ ಯಾವಾಗಲೂ. ಮಧ್ಯೆ ಮಧ್ಯೆ “ಏಯ್! ಏಯ್!!” ಅನ್ನೋ ಮಾತುಗಳು ಒಂದ್ ಕಡ್ಡಿಯನ್ನು ಆ ಮೇಜಿನಮೇಲೆ ಹೊಡೆದಾಗ ಬರೋ ’ಠಪ್’ ಅನ್ನೋದರಜೊತೆಗೆ ಕೇಳುತ್ತೆ. ಆಗ ಗಿಜಿ-ಗಿಜಿ ಸ್ವಲ್ಪ ಕಡಿಮೆ ಯಾಗುತ್ತೆ. ಒಂದೆರಡು ನಿಮಿಷಗಳಷ್ಟೆ! ಮತ್ತೆ ಗಿಜಿ-ಗಿಜಿ ಶುರು!

ಸರಿ, ಮೇಜಿನ ಹಿಂದಿದ್ದ ಕುರ್ಚಿಯಮೇಲೆ ಕುಳಿತಿದ್ದ ಮಧ್ಯವಯಸ್ಕ ಈಗ ಎದ್ದ. ಮೇಜಿನ ಹಿಂದಿದ್ದ ಸಣ್ಣ ಸಣ್ಣ ಮಕ್ಕಳನ್ನು ನೋಡಿ, “ಏಯ್! ಎಲ್ಲಾರೂ ಅ, ಆ, ಇ, ಈ ಬರೀರಿ. ಬಂದು ನೋಡ್ತಿನಿ ಈಗ” ಅಂದ್ರು. ಆ ಪಿಳ್ಳೆಗಳು ಮಣೆಯ ಕೆಳಗೆ ಇಟ್ಟ ಹಳೆಯ ಮಾಸಿದ ಕೆಂಪು-ನೀಲಿ, ಹಸಿರು-ಬಿಳಿ, ಹೀಗೆ ಹಲವಾರು ಬಣ್ಣ-ಬಣ್ಣದ ಕೈ ಚೀಲಗಳನ್ನ ಎಳೆದು ಅದರೊಳಗಿದ್ದ ಒಂದು ಕಪ್ಪಗಿನ ಸ್ಲೇಟು ತಗೋಳತ್ವೆ. ಕೆಲವು ತಗಡಿನಿಂದ ಮಾಡಿ ಮರದ ಕಟ್ಟು ಹಾಕಿದಾವಾದ್ರೆ, ಇನ್ನು ಕೆಲವು ಬಳಪದ ಕಲ್ಲಿನಿಂದ ಮಾಡಿದವು. ಕೆಲವಕ್ಕೆ ಕಟ್ಟೇ ಇಲ್ಲ. ಹೊಡೆತ ತಪ್ಪಿಸಿಕೊಳ್ಳಕ್ಕೆ ಬರೀಲೇ ಬೇಕು.

ಈ ಪಿಳ್ಳೆಗಳು ಇಷ್ಟೆಲ್ಲಾ ಮಾಡೊಹೊತ್ಗೆ, ಆ ಮಧ್ಯ ವಯಸ್ಕ ಎರಡನೇ ಮಣೆಯಲ್ಲಿದ್ದವರ ಬಳಿ ಹೋಗಾಗಿತ್ತು. ಅವರಿಗೆ “ಪುಸ್ತಕ ತಂದಿದೇರೇನ್ರೋ ಎಲ್ಲಾ?” ಅಂತ ಗದರಿಸಿದ್ರು. ಎಲ್ಲಾರೂ ಮತ್ತೆ ಅದೇ ಮಾಸಿದ ಕೈ ಚೀಲಗಳಿಂದ ಇದ್ದ ಎರಡೇ ಪುಸ್ತಕಗಳಿಂದ ಒಂದನ್ನು ತೆಗೆದರು. ಹೆಚ್ಚೂಕಡಿಮೆ ಎಲ್ಲರ ಪುಸ್ತಕಗಳೂ ಹರಿದಿವೆ. ಮೊದಲೆರಡು ಮತ್ತೂ ಕೊನೆಯ ಹಲವಾರು ಪುಟಗಳೇ ಕಾಣೆಯಾಗಿವೆಯಾದರೂ ಪುಸ್ತಕವಂತೂ ಇದೆ! ಸರಿ, ’ಈತ ಗಣಪ. ಈಶನ ಮಗ ಗಣಪ’ ಓದಿಸಿಯಾಯ್ತು. ಇದು ಒಂದನೇ ತರಗತಿಯ ಮೊದಲನೇ ಪಾಠ!

ಮುಂದಿನವು ಅಕ್ಷರಮಾಲೆ ಬೆರೆಯುವಾಗ, ಅವರ ಹಿಂದಿನವು ಗಣಪ-ಈಶನ ಪಾಠ ಒಪ್ಪಿಸುವಾಗ ಅವರ ಹಿಂದೆ ಕೂತಿದ್ದ ಮಕ್ಕಳು ಎರಡನೇ ತರಗತಿಯ ಕನ್ನಡ ಮತ್ತು ಜೊತೆಗಿನದ್ದು ಓದುತ್ತಿದ್ದವು. ಓದುತ್ತಿದ್ದರೋ ಅಥವಾ ಹಾಗೆ ನಟಿಸುತ್ತಿದ್ದರೋ ಗೊತ್ತಿಲ್ಲ ಯಾಕೇಂದ್ರೆ ಸ್ವಲ್ಪ ಮಟ್ಟಿಗೆ ಗಿಜಿ-ಗಿಜಿ ಇತ್ತು! ಕೆಲವು ಮಗ್ಗಿ ಬಾಯಿ ಪಾಠ ಮಾಡುತ್ತಿದ್ದವು.

ಇನ್ನೊಂದು ಮೂಲೆಯಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯಿದೆ. ಆದರ ಪಕ್ಕದಲ್ಲಿ ಒಂದು ನೈಲಾನ್ ಚೀಲ. ಇವೆರಡೂ ನಾಲ್ಕೈದು ಇಟ್ಟಿಗೆಗಳ ಮೇಲೆ ಇಟ್ಟಿದ್ದಾರೆ. ಇಟ್ಟಿಗೆಗಳನ್ನ ಎರಡು ಅಂಗುಲದಷ್ಟು ಎತ್ತರದ ಮರಳಿನ ಕಟ್ಟೆ ಕಟ್ಟಿ ನೀರು ಹಾಕಿದ್ದಾರೆ – ಇರುವೆಗಳು ಚೀಲದಲ್ಲಿರುವ ತಿಂಡಿಗೆ ಹತ್ತಬಾರದು ಅಂತ.

ನಿಮಗೆ ಇಷ್ಟು ಹೊತ್ತಿಗೆ ಗೊತ್ತಾಗಿರಬೇಕು ನಾನು ಏನು ಹೇಳುತ್ತಿದ್ದೇನೆ ಅಂತ. ಇದು ನಮ್ಮ ಹಳ್ಳಿಗಳ ಏಕೋಪಾಧ್ಯಾಯ “ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳ” ಪರಿಸ್ಥಿತಿ. ಒಂದರಿಂದ ನಾಲ್ಕನೇ ತರಗತಿಯ ಮಕ್ಕಳು ಒಂದೇ ಕೋಣೆಯಲ್ಲಿ ಓದಬೇಕು. ಉಪಾಧ್ಯಾರಯೂ ಒಬ್ಬರೆ. ಅವರು ಒಂದು ತರಗತಿಯ ಒಂದು ಪಾಠ ಮುಗಿಸಿ ಮತ್ತೊಂದಕ್ಕೆ ಹೋಗಬೇಕು. ಇಂಥಾ ಶಾಲೆಗಳು ನೂರಾರು-ಸಾವಿರಾರು. ನಾನು ಓದುವಾಗ ನನ್ನ ಊರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿದ್ದ ಶಾಲೆಗಳೆಲ್ಲಾ ಇವೇ. ಕೆಲವರು ಸ್ವಲ್ಪ ಭಾಗ್ಯಶಾಲಿಗಳು. ಯಾಕೆಂತಿರ? ಅವರೇನಾದರೂ ’ಗ್ರಾಮ’ ಅಂತ ಕರೆಸಿಕೊಳ್ಳೊ ಊರಿನಲ್ಲಿದ್ದರೆ ಅವರಿಗೆ ’ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ನಲ್ಲಿ ಓದೋ ಅವಕಾಶ ಇರುತ್ತೆ. ಏಳನೇ ತರಗತಿಯವರೆಗೆ ಇರತ್ತೆ ಆ ಶಾಲೆಯಲ್ಲಿ. ಅಲ್ಲಿಯ ಪರಿಸ್ಥಿತಿ ಸ್ವಮ್ಪ ಉತ್ತಮ. ನಾನು ನೋಡಿದ ಇಂಥಹ ಒಂದು ಶಾಲೆಯಲ್ಲಿ ಐದು ಕೋಣೆಗಳು. ಒಂದು “office room” ಅಂತ ಆಗಿತ್ತು. ಇನ್ನುಳಿದ ನಾಲ್ಕು ಕೋಣೆಗಳು: ಒಂದರಲ್ಲಿ ಒಂದು ಮತ್ತು ಎರಡನೇ ತರಗತಿ, ಇದೇ ಕೋಣೆಯ ಜಗುಲಿಯಲ್ಲಿ ಶಿಶುವಿಹಾರದ ಚಿಳ್ಳೆಗಳು; ಮತ್ತೊಂದರಲ್ಲಿ ಮೂರನೆ ಮತ್ತು ನಾಲ್ಕನೇ ತರಗತಿ, ಮತ್ತೊಂದರಲ್ಲಿ ಐದನೇ ತರಗತಿ – ಇದು ಸ್ವಲ್ಪ ದೊಡ್ಡದು ಯಾಕೇಂದ್ರೆ ನಮ್ಮಾರಿನ ಸುತ್ತಲಿನಿಂದೆಲ್ಲಾ ಉತ್ತೀರ್ಣರಾದ ಹುಡುಗರು ಇಲ್ಲಿಗೇ ಐದನೆ ತರಗತಿಗೆ ಬರೋದು; ಆರನೇ ಮತ್ತು ಏಳನೇ ತರಗತಿಗಳು ಅವರದೇ ಕೊಠಡಿಗಳು. ಏಳನೇ ತರಗತಿ ಹಿಡುಗರಿಗೆ ಮಾತ್ರ ಸಂಪೂರ್ಣವಾಗ್ ಬೆಂಚುಗಳು! ಉಳಿದೆಲ್ಲಾ ಹುಡುಗರು ಮಣೆಯ ಮೇಲೆಯೇ ಕೂರಬೇಕು. ಒಟ್ಟು ಸುಮಾರು ೫೦೦-೬೦೦ ಮಕ್ಕಳು ಇಲ್ಲಿ ಓದುತ್ತಾರೆ. ಉಪಾಧ್ಯಾರರು ಮಾತ್ರ ೫ ಅಥವಾ ೬ ಮಂದಿ. ಏನಿದು ಯಾವುದೋ News channel ನಲ್ಲಿ ಬರ್ಬೇಕಿರೋ ವರದಿ ಇಲ್ಲಿ ಅಪ್ಪಿತಪ್ಪಿ ಬಂತೇ ಅನ್ಕೋತಿದೀರ? ಇಲ್ಲ. ಇದು ನಿಜ. ಎಲ್ಲಿ ಬಂದರೇನು ಸ್ವಾಮಿ?

ಇದು ಯಾವುದೋ ಓಬೀರಾಯನ ಕಾಲದ ಕಥೆ ಅಂತಿದ್ದೀರ? ಅಲ್ಲ. ಈಗಕೂಡ ನಮ್ಮ ಹಳ್ಳಿಗಳ ಶಾಲೆಗಳ ಪರಿಸ್ಥಿತಿ ಇದೇ. ಸ್ವಲ್ಪ ಚೆನ್ನಾಗಿದೆ ಅಂತ ಕೇಳುತ್ತಿದ್ದೀನಿ – ಹಲವಾರು ಏಕೋಪಾಧ್ಯಾಯ ಪ್ರಾಥಮಿಕ ಶಾಲೆಗಳನ್ನ ಹಿರಿಯ ಪ್ರಾಥಮಿಕ (ಅಂದರೆ middle school) ಶಾಲೆಗಳನ್ನಾಗಿ ಮಾಡಿದ್ದಾರಂತೆ.

ಇಂಥಾ ಶಾಲೆಗಳಲ್ಲಿ ಓದುತ್ತಿರುವ ಹುಡುಗರಿಗೆ ಇಷ್ಟು ಕಷ್ಟ ಇದೆ ಅಂತ ಬೆಂಗಳೂರಿನಲ್ಲಿರುವ ಮಂದಿಗೆ ಹೇಗೆ ಗೊತ್ತಾಗಬೇಕು? ಐದನೇ ತರಗತಿಯಲ್ಲಿ ಮೊದಲಬಾರಿಗೆ ಆಂಗ್ಲ ಭಾಷೆ ಪ್ರಾರಂಭ. ಅಲ್ಲಿನ ಹುಡುಗರಿಗೆ ಐದನೇ ತರಗತಿಯಲ್ಲೇ A, B,C, D ಕಲಿತು ಅದೇ ವರ್ಷ ತಥೆಗಳನ್ನೆಲ್ಲಾ ಓದಬೇಕು. ಇದೊಂಥರಾ ಮುದ್ದಣ ಹೇಳಿದಂತೆ ನೀರಿಳಿಯದ ಗಂಟಲಲ್ಲಿ ಕಡುಬುತುರುಕಿದಂತಾಯ್ತು. ಅಲ್ಲಿನ ಉಪಾಧ್ಯಾಯರು ಆಂಗ್ಲ ಭಾಷೆಯನ್ನ ಕೇವಲ ಒಂದುಬಾರಿ ಓದಿ ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡುತ್ತಾರೆ. ಮಾತು-ಕಥೆಗಳೆಲ್ಲಾ ಕನ್ನಡವೇ. ಆದು ನಮ್ಮ ಆಡು ಭಾಷೆ. ಸಹಜವಾಗಿ ಕನ್ನಡವೇ ಮುಂದು. ಇದೆಲ್ಲಾ ಮುಗಿಸಿ ಯಾರಾದರೂ ಹುಡುಗರು ಮುಂದೆ ಪ್ರೌಢಶಾಲೆಗೋ ಅಥವಾ pre-universityಗೋ ಆಂಗ್ಲ ಮಾಧ್ಯಮಕ್ಕೆ ಸೇರಿದರೆಂದರೆ ಮುಗಿಯಿತು. ಮೊದಲು ಅವರ ಕಣ್ಣುಗಳಲ್ಲಿ ಧಾರಾಕಾರವಾಗಿ ಗಂಗೆ ಹರಿಯುತ್ತಿರುತ್ತಾಳೆ – “ನಾನೇಕೆ ಇಂಥಾ ತಪ್ಪು ಮಾಡಿದೆ” ಅಂತ. ಅದು ಎರಡೂ ಆಗಬಹುದು, ಮೊದಲಿಂದ ಯಾಕೆ ಆಂಗ್ಲ ಭಾಷೆಯಲ್ಲಿ ಓದಲಿಲ್ಲ ಅಂತ, ಹಾಗೂ ಈಗೇಕೆ ಆಂಗ್ಲ ಮಾಧ್ಯಮಕ್ಕೆ ಸೇರಿದೆ ಅಂತ. ಅವರು ಆಂಗ್ಲ ಮಾಧ್ಯಮಕ್ಕೆ ಹೋಗದಿದ್ದರೆ ಅವರ ಆಂಗ್ಲ ಭಾಷೆಯ ಮೇಲಿನ ಹಿಡಿತ ಚೆನ್ನಾಗುವುದೇ ಇಲ್ಲ. ಅದಿಲ್ಲದಿದ್ದರೆ ಮುಂದೆ ಓದಬೇಕೆನ್ನುವ ಹಂಬಲ??! ಅದನ್ನು ಹೇಗೆ ಪರಿಹರಿಸಿಕೊಳ್ಳೋದು? ಅದಕ್ಕೆ ಈಗ ಪರಿಶ್ರಮ ಪಡಲೇ ಬೇಕು. ಕಾಲೇಜಿಗೆ ಪಟ್ಟಣಗಳಿಗೆ ಓದಲು ಬರೋ ಇದೇ ಹುಡುಗರು ಅಲ್ಲಿನ ಆಂಗ್ಲಭಾಷಾ ಪರಿಣತ ಹುಡುಗರ ಜೊತೆ ಪ್ರತಿಸ್ಪರ್ಧಿಯಾಗಿ ಇಳಿಯಲೇಬೇಕು. ಹಳ್ಳಿಗಳಿಂದ ಬಂದ ಹುಡುಗರು ಯಾಕೆ ಸ್ವಲ್ಪ ಹಿಂದೆ ಉನ್ನತ (ಆಂಗ್ಲವನ್ನೊಳಗೊಂಡ) ಶಿಕ್ಷಣದಲ್ಲಿ ಅಂದರೆ ಇದೇ ಕಾರಣಕ್ಕಾಗಿ. ಆದರೆ ಈ ಸ್ಪರ್ಧೆ ಸುಲಭವಾಗಿ ಎದುರಿಸಲು ಈ ಹಳ್ಳಿ ಮಕ್ಕಳಿಗೆ ಸಾಧ್ಯವೇ ಅಂತಿರಾ? ಇಲ್ಲ! ಸಾಧ್ಯವೇ ಇಲ್ಲ. ಒಂದು ಪಟ್ಟಣದ ಹುಡುಗರ ಆಡುಕೊಳ್ಳುವ ಹಾಗು ಅವಮಾನವನ್ನ ಮೊದಲು ಎದುರಿಸಬೇಕು. ಆಮೇಲೆ ಪಠ್ಯಕ್ರಮಕ್ಕೆ!

ಪ್ರಾಥಮಿಕ ಮಟ್ಟದಲ್ಲಿ ಮಕ್ಕಳಿಗೆ ಅಂಗ್ಲ ಭಾಷೆ ಬೇಕು ಅಂತ ಒಂದೆರಡು ವರ್ಷಗಳ ಹಿಂದೆ ವಾದ ವಿವಾದಗಳು ನಡೆದು ಅಂಗ್ಲ ಭಾಷೆ ಸೇರ್ಪಡೆ ಆಗುತ್ತದೆಂಬ ಆಶಯ ದಿನಪತ್ರಿಕೆಗಳಲ್ಲಿ ಬಂದಾಗ ನಾನು ಖುಷಿಪಟ್ಟೆ. ಈಗ ನಮ್ಮ ಹಳ್ಳಿಯ ಮಕ್ಕಳೂ ಕೂಡ ದಿಳ್ಳಿಯ ಮಕ್ಕಳೊಂದಿಗೆ ಸರಿಸಮವಾಗಿ ನಿಲ್ಲಲು ಅಷ್ಟೇನೂ ಕಷ್ಟವಾಗಲಿಕ್ಕಿಲ್ಲ ಅಂತ. ಆದರೆ ಅದಿನ್ನೂ ಆಗಿಲ್ಲ. ನಾನಿಲ್ಲಿ ಕನ್ನಡಾಭಿಮಾನಿಗಳ ವಿರೋಧವಾಗಿ ಮಾತಾಡುತ್ತಿಲ್ಲ. ಕನ್ನಡವೇ ಮಾಧ್ಯಮವಾಗಲಿ ಆದ್ರೆ ಅಂಗ್ಲ ಭಾಷೆ ಕೂಡ ಮಕ್ಕಳು ಓದಬೇಕು. ಅವರ ಭಾಷಾಕೋಶಗಳು ವಿಕಾಸವಾಗಬೇಕು. ಆಂಗ್ಲಭಾಷೆ ನಮಗೇಕೆ ಬೇಕು ಅಂತ ಅದನ್ನ ಚೆನ್ನಾಗಿ ಬಲ್ಲವ ಕೆಲವರು ಹೇಳಿದರೆ – ಕೆಲ ಹೊರದೇಶಗಳು ಅವುಗಳ ಭಾಷೆಯಷ್ಟೆಯೇ ಕಲಿಯುವುದಿಲ್ಲವೇ ಅಂತ ವಾದ ಮಾಡಬಹುದು. ಆವೆಲ್ಲ ನನ್ನ ಮಟ್ಟಿಗೆ ನಿಷ್ಪ್ರಯೋಜಕ ಮಾತುಗಳು. ಪ್ರತಿಯೊಬ್ಬ ಮಗುವಿಗೂ ಮುಂದೆ ಬರಬೇಕು ಅನ್ನೊ ಹಂಬಲವಿರುತ್ತೆ. ಅದಕ್ಕೆ ಅನುಗುಣವಾದ ವಿಧ್ಯಾಭ್ಯಾಸ ಸಿಗಬೇಕು.

ಒಂದುಕಡೆ ಓದಿದೆ, ಎಲ್ಲಾ ಉನ್ನತ ಶಿಕ್ಷಣ, IT ಮೊದಲುಗೊಂಡು ಅಲ್ಲವೂ ಕನ್ನಡದಲ್ಲೇ ಇರಬೇಕು ಅಂತ. ಅದು ತುಂಬಾ ಒಳ್ಳೆಯದೇ. ಆದರೆ ಈ IT ಅನ್ನೋದನ್ನ ಪ್ರಾರಭಿಸಿದವರು ಅಂಗ್ಲರು. ಆದು ಎಲ್ಲಾಇರೋದು ಅಂಗ್ಲಭಾಷೆಯಲ್ಲಿ. ಅದು ಕನ್ನಡದಲ್ಲಿ ಈಗ ಆಗಬೇಕೆಂದರೆ ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡಬೇಕು. ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡೋಕೆ ಕನ್ನಡ ಹಾಗೂ ಅಂಗ್ಲಭಾಷೆ ಎರಡನ್ನೂ ಚೆನ್ನಾಗಿಬಲ್ಲವರು ಬೇಕು. ಹೌದಲ್ಲವೆ?? ಇಲ್ಲಿ ಅಂಗ್ಲಭಾಷೆಯ ಕೊರತೆ ಕಾಣುತ್ತಿಲ್ಲವೇ? ನಮ್ಮದೇ ಭಾಷೆಯಲ್ಲಿ ಕಲಿತ ಮಕ್ಕಳು ಅದನ್ನ ತಮ್ಮ ಭಾಷೆಗಷ್ಟೇ ಅಳವಡಿಸಲು ಸಾಧ್ಯ. ಅಷ್ಟಕ್ಕೇ ಸೀಮಿತವಾಗಲಿಲ್ಲವೇ ಅವರು ಕಲಿತದ್ದು? ಅಲ್ಲಿ ಮತ್ತೆ ಅವರ ಅನುಭವ ಹಾಗೂ ಬುದ್ಧಿಯನ್ನ ಹೊರಗೆ ಹಾಕಲು ಮತ್ತೆ ಈ ಭಾಷೆ ಅಡ್ಡವಾಗಿನಿಂತಿತೇ? ಅದು ಬೇಡ. ನಮ್ಮವರು ಕನ್ನಡ ಕಲಿಯಲಿ, ಬೆಳೆಸಲಿ.. ಅದೇ ಸಮಯದಲ್ಲಿ ಪ್ರತಿಯೊಬ್ಬನಿಗೂ ಅವರದೇ ಕ್ಷೇತ್ರದಲ್ಲಿ ಬೆಳೆಯಲು ಬೇಕಾದ ಅಂಗ್ಲವೂ ಸಿಗಲಿ ಅನ್ನೋದೇ ನನ್ನ ಅಶಯ. ಸುಮ್ಮನೆ ಇಂಥಾ ದೊಡ್ಡ ದೊಡ್ಡ ಮಾತುಗಳನ್ನ ಆಡುವುದು ಸುಲಭ; ಅದನ್ನ ಬೇರೆ ದೃಷ್ಟಿಯಲ್ಲೊ ನೋಡ್ಬೇಕು. ನಮ್ಮ ಮಕ್ಕಳು ಬೆಳೆಯೋಕೆ ಬೇಕಾದ್ದರ ಬಗ್ಗೆ ಯೋಚಿಸಬೇಕು. ಕೇವಲ ಭಾಷಾವಾದಿಗಳ ಕೈಲಿ ಸಿಕ್ಕಿ ಮಕ್ಕಳ ಭವಿಷ್ಯ ಹಾಳಾಗಬರದು ಅಲ್ಲವೆ?

Thursday, August 09, 2007

ನನಗೇಕೆ ಬರೆಯೋ ಹುಚ್ಚು?

ಹೌದು, ನಾನಗೆ ಯಾಕೆ ಬರೆಯಬೇಕು ಅನ್ನಿಸ್ತಿದೆ?

ನಾನೇನೂ ಸಾಹಿತ್ಯದ ಅಸಾಮಾನ್ಯ ವಿಧ್ಯಾರ್ಥಿಯಲ್ಲ. ನನ್ನಲ್ಲಿ ನನ್ನ ಮನಸ್ಸಿನಲ್ಲಿರುವ ಎಲ್ಲಾಭಾವನೆಗಳಿಗೂ ರಂಗು ಕೊಟ್ಟು ಬರೆಯಲು ಗೊತ್ತಿಲ್ಲ. ಕಥೆ ಸೃಸ್ಟಿ ಮಾಡಿ ಅಭ್ಯಾಸವಿಲ್ಲ. ನಾನು ಎಂದೋ ಓದಿದ್ದ ಸುಂದರ ಕನ್ನಡದ ಬಳಕೆ ನನ್ನಿಂದ ಬರವಣಿಗೆಯಲ್ಲಿ ಬಹಳಷ್ಟು ದಿನಗಳಿಂದ ಮೂಡಿಯೇಯಿಲ್ಲ. ನನಗೆ ನನ್ನ ಮೇಲೆಯೇ ಕೋಪ ಬರುವುದುಂಟು. ಯಾಕೇ ನಾನು ನನ್ನದೇ ಒಂದು ಅಂಕಣ ಪ್ರಾರಂಭಿಸಿದೆ ಅಂತ. ನಾನು ಅಂತರ್ಮುಖಿ ಅಂತ ನನಗೆ ಗೊತ್ತು ಆದ್ರೂ ಈ ಸಾಹಸ ಯಾಕೆ ಮಾಡಿದೆ? ನನ್ನ ಕೈಲಿ ನಿಜವಾಗಿ ನನ್ನ ಮನಸ್ಸಿನಲ್ಲಿರುವುದೆಲ್ಲವನ್ನೂ ಇಲ್ಲಿ ಕೆಡುಹಲು ಸಾಧ್ಯವ? ಅಥವಾ ಕೇವಲ ನನ್ನ ಮನಸ್ಸಿನಲ್ಲಿರುವುದನ್ನೆಲ್ಲಾ ಇಲ್ಲಿ ಬರೆದು ನಾನು ಗಳಿಸಿದ್ದಾದರೂ ಏನು? ನಾನು ಬರೆದದ್ದು ನನ್ನಂಥ ಬೇರೆ ಜನರೂ ಓದಲಿ ಅಂತ್ಲ? ಹಾಗಾದರೆ ನನ್ನ ಮನಸ್ಸಿನಲ್ಲಿರುವುದು ಅವರಿಗೆಲ್ಲಾ ಹಿಡಿಸೀತ? ಹಾಗೆ ಬರೆಯಲು ನನ್ನಿಂದ ಸಾಧ್ಯನ? ನನಗೆ ಎಲ್ಲರನೂ ಮೆಚ್ಚಿಸುವಂತೆ ಬರೆಯಬಲ್ಲ ಶಕ್ತಿಯಿಲ್ಲ ಅನ್ನೋದು ಚೆನ್ನಾಗಿ ಬಲ್ಲೆ. ಏನೋ ಬರೆದರೂ ಕೂಡ ಅನನ್ನ ಯಾರಾದರೂ ಇಷ್ಟಪಡುತ್ತಾರೆ ಅನ್ನೋದು ಕೂಡ ಖಾತ್ರಿಯಿಲ್ಲ. ಆದ್ರೂ ಬರೆಯಬೇಕು ಅನ್ನೊ ಹಂಬಲ ಯಾಕೆ ನನ್ನ ಬಿಡುತ್ತಿಲ್ಲ? ನಾನು ಇದೇ ಪ್ರಶ್ಣೆಯನ್ನ ಹಲವು ಬಾರಿ ನನಗೆ ನಾನೇ ಹಾಕಿಕೊಂಡಿದ್ದೇನೆ. ಆದರೆ ಸಮಂಜಸವಾದ ಉತ್ತರ ಮಾತ್ರ ಸಿಕ್ಕಿಲ್ಲ ನನಗೆ.

ಹೋಗಲಿ. ನನಗನ್ನಿಸಿದೆ ಏನನ್ನಿಸುತ್ತೋ ಅದನ್ನ ಇಲ್ಲಿ ಬರೆಯೋಣ ಅಂತ. ಸರಿ. ಹಾಗಂತ ಯಾರೂ ಓದದಿದ್ರೆ? ಹೌದಲ್ಲ, ಯಾರೂ ಓದದಿದ್ದಮೇಲೆ ನಾನು ಬರೆದು ಏನು ಪ್ರಯೋಜನ? ಛೆ! ನಾನು ನನಗನಿಸಿದ್ದನ್ನ ಮಾತ್ರ ಬರೆಯಬೇಕು. ನಾನು ಯಾರಿಗೂ ಬೇಜಾರು ಮಾಡದಿದ್ದರೆ ಅದು ಸರಿ. ಎಲ್ಲದನ್ನೂ ನಾನು ಇಲ್ಲಿ ಬರೆದಿಡಬಹುದು ಆಗ. ಆಲ್ಲವೆ? ಹುಂ. ಅಷ್ಟಿದ್ದರೆ ಸಾಕು ನನ್ನ ಬರವಣಿಗೆಯಲ್ಲಿ. ಹಾಗದರೆ ನಾನು ನನ್ನ ಮನಸ್ಸಿನಲ್ಲಿರುವುದನ್ನ ಬರೀತಿಲ್ಲ. ನಾನು ಬೇರೆಯವರನ್ನು ಒಲಿಸಲು ಬರೀತಿದ್ದೀನಾ? ನನಗೋಸ್ಕರ ಅಲ್ಲ? ಮತ್ತೆ ನಾನು ಬರೆದದ್ದು ಬೇರೆಯವರಿಗೆ ಹಿಡಿಸದಿದ್ದರೆ? ಮತ್ತೆ ನಾನು ಈ ಅಂಕಣ ನನಗಲ್ಲ... ಬೇರೆಯವರಿಗೆ ಪ್ರಾರಂಭಿಸಿದ್ದು? ಹಾಗಾದ್ರೆ ಇದು ನನ್ನದು ಹೇಗಾಗುತ್ತೆ? ಸರಿ. ನನಗೆ ನನ್ನ ಭಾವನೆಗಳನ್ನಷ್ಟೂ ಬರೆಯುವ ಹಕ್ಕಿದೆ. ನಾನೂ ಬರೆಯುತ್ತೇನೆ. ಯಾರು ನೋಡಲಿ ಬಿಡಲಿ. ಶಿವರುದ್ರಪ್ಪನವರು ಹೇಳಿದಂತೆ:

ಯಾರು ಕಿವಿಮುಚ್ಚಿದರೂ ನನಗಿಲ್ಲ ಚಿಂತೆ...

ನಾನೂ ಹಾಗೇನೆ ಇದ್ದುಬಿಡಬೇಕು ನನಗನ್ನಿಸಿದ್ದು ಬರೆದು ಅಂದ್ಕೊತೀನಿ. ಅದನ್ನೇ ನನ್ನ ಜೀವನದಲ್ಲಿ ಅವಳವಡಿಸಿಕೊಳ್ಳುತ್ತಿದ್ದೀನಿ. ಹಾಂ, ನಾನು ನನಗನ್ನಿಸಿಸ್ಸು ತಪ್ಪೋ ಸರಿಯೋ ಮಾಡೇ ಮಾಡುತ್ತೇನೆ ಅಂತಲ್ಲ. ಸ್ವಲ್ಪ ನನ್ನ ಅನಿಸಿಕೆಗಳನ್ನ ಪರಾಂಬರಿಸಿ, ನಾನು ನಾಲ್ಕಾರು ದೃಷ್ಟಿಯಿಂದ ನೋಡಿ ಅದು ತಪ್ಪಲ್ಲ ಅನ್ನಿಸಿದಮೇಲೇನೇ ಮಾಡೋಕೆ ಪ್ರಯತ್ನ ಮಾಡುತ್ತಿದ್ದೇನೆ. ನಮಗೆಲ್ಲಾ ಚಿಕ್ಕವಯಸ್ಸಿನಿಂದ ’ಬೇರೆಯವರು ಏನನ್ನುತ್ತಾರೆ, ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ’ ಅನ್ನೋದನ್ನ ನಮ್ಮ ತಲೆಯಲ್ಲಿ ತುಂಬಿರುತ್ತಾರೆ ದೊಡ್ಡವರು. ಹಾಗಾಗಿ ನಾವು ಏನೇ ಮಾಡಿದರೂ ಬೆರೆಯವರನ್ನು ಮನಸ್ಸಿನಲ್ಲಿಟ್ಟುಕೊಂಡೇ ಕೆಸಲ ಪ್ರಾರಂಭಿಸುತ್ತೀವಿ, ಯೋಚಿಸುತ್ತೀವಿ, ಎಲ್ಲಾ. ಅದಕ್ಕೇ ಶಿವರುದ್ರಪ್ಪನವರು ’ಎದೆತುಂಬಿ ಹಾಡಿದೆನು...’ ಕವಿತೆಯಲ್ಲಿ ನಮಗೋಸ್ಕರ ಬದುಕೋಣ, ನಮಗೋಸ್ಕರ ಬಾಳೋಣ ಅಂತ ತಿಳಿಹೇಳಿದ್ದಾರೆ. ಜೊತೆಗೆ ಅವರು ಸುತ್ತಲಿನವರನ್ನು ಕಡೆಗಣಿಸಿಲ್ಲ - ಅಥವ ಪರಿವೆ ನನಗೆ ಬೇಡ ಅಂದಿಲ್ಲ.

ಇವನು ತುಂಬಾ ಉದ್ಧಟನಾಗಿ ಬರೀತಾಯಿದ್ದಾನೆ ಅನ್ನಿಸುತ್ತಿರಬಹುದು ಎಷ್ಟೋಜನಕ್ಕೆ. ಸುಮ್ಮನೆ ಮನಸ್ಸಿಗೆ ಬಂದಂತೆ ಕೆಲಸಕ್ಕೆ ಬಾರದ್ದು ಗೀಚುತ್ತಿದ್ದಾನೆ ಅಂತ. ನಿಜ! ಹಾಗನಿಸುವುದು ಸಾಮಾನ್ಯ ಯಾಕೆಂದ್ರೆ ’ನೀನೇ ಅಂದ್ರೂ ನನಗೆ ಏನೂ ಆಗಲ್ಲ’ ಅಂದ್ರೆ ಅವನನ್ನು ’ಮನುಷ್ಯ ಮುಟ್ಟಿದ ಗುಬ್ಬಿ’ ರೀತಿ ನೋಡೋದೇ ಬಂದಿದೆ ನಮಗೆ. ನನಗೆ ಹಿಡಿಸದ್ದನ್ನ ಯಾರಾದರೂ ನಮಗೆ ಹೇಳಿದರೆ ಅದನ್ನ ತಳ್ಳಿಹಾಕಬಹುದು ಆದರೆ ಸಂಪೂರ್ಣವಾಗಿ ಎಲ್ಲರೂ ಹೇಳಿದ್ದನ್ನಲ್ಲ.. ಯಾಕಂದ್ರೆ ನಾವೆಲ್ಲ ಸಂಘಜೀವಿಗಳು

ಹೂಂ! ಅಂತೂ ನಾನು ಯಾಕೆ ಬೆರೆಯೋಕೆ ತೀರ್ಮಾನಿಸಿದೆ ಅಂತ ನನಗೆ ಗೊತ್ತಗ್ತಿರೋ ಹಾಗಿದೆ... ನಾನು ನನಗೋಸ್ಕರ ಬರೀತೀನಿ ಅಂದ್ಕೋಂಡಮೇಲೆ ನನಗೋಸ್ಕರ ಬರೀಬೇಕು. ಬೇರೆಯವರು ಅದಕ್ಕೆ ಸ್ಪಂದಿಸುತ್ತಾರೋ ಇಲ್ಲವೊ ಅದರ ಗೋಜಿಗೆ ನಾನು ಹೋಗಬಾರದು. ಆದರೂ, ನನಗೆ, ನನ್ನ ಅನಿಸಿಕೆಗಳಿಗೆ ಸುತ್ತಮುತ್ತಲಿನವರು ಅದಕ್ಕೆ ಪ್ರತಿಕ್ರಯಿಸಿದರೆ ನಾನೇ ಧನ್ಯ!

Tuesday, August 07, 2007

ಬೇಸರ ಸಂಜೆ...

ನಿನ್ನೆ ರಾತ್ರಿ ಬಹಳಹೊತ್ತಿನತಂಕ ಕೆಲಸಮಾಡಿದ್ದಕ್ಕೆ ಬೆಳಗ್ಗೆ ಏಳಲಾಗಲಿಲ್ಲ. ಹಾಗಾಗಿ ಇವತ್ತು ಮನೇಇಂದನೇ ಕೆಲ್ಸ ಮಾಡೊ ನಿಶ್ಚಯಮಾಡ್ದೆ. ಬೆಳಗ್ಗೆ ಇಂದ ಸಂಜೆವರೆಗೆ ಊಟಕ್ಕೆ ಬಿಟ್ಟು ನನ್ನ ಲ್ಯಾಪ್-ಟಾಪ್ ಬಿಟ್ಟು ಎದ್ದೆರಲಿಲ್ಲ (ಕ್ಷಮಿಸಿ, ನಿಸರ್ಗಕ್ಕೆ ವಿರುದ್ಧಹೋಗಕ್ಕೆ ಸಾಧ್ಯವಿಲ್ಲ; ಆ ಕೆಲಸಗಳನ್ನೂ ಅದದರಸಮಯಕ್ಕೆ ಮುಗಿಸಿದೆ :) ). ಸಂಜೆ ಏನಾದರೂ ಅಂಚೆ ಇರಬಹುದೇನೋ ನೋಡೋಣ ಅಂತ ಹೊರಗೆ ಹೋರಟೆ. ಆಹ್! ಎಷ್ಟು ಚೆನ್ನಾದ ತಂಗಾಳಿ ಬರ್ತಿತ್ತು ಅಂದ್ರೆ ನಾನು ಮನೆ ಬಾಗಿಲಲ್ಲೇ ಒಂದೆರಡು ಕ್ಷಣ ಹಾಗೇ ನಿಂತು ಅದನ್ನ ಅನುಭವಿಸಿದೆ. ನನ್ನ ಅಪಾರ್ಟ್ಮೆಂಟಿನ ಬಾಲ್ಕನಿ ಯಿಂದ ನೋಡಿದರೆ ಅರುಣ ಆಕಾಶಕ್ಕೆ ಕೇಸರಿಬಣ್ಣ ಹಚ್ಚಿದ್ದ ಆಗಲೆ. ಆ ತಂಗಾಳಿ ಮತ್ತೆ ಸಂಜೆಯಮುಸುಕಲ್ಲಿ ಮನಸ್ಸು ಏನೇನೋ ಕಲ್ಪನೆಗಳಲ್ಲಿ ತೊಡಗಿತ್ತು. ಜೊತೆಗೆ, ನನ್ನ ಪತ್ನಿ ಇಲ್ಲವಲ್ಲಾ ಈ ಸಂದರ್ಭದಲ್ಲಿ ನನ್ನ ಜೊತೆ ಅನಿಸ್ತು. ಅವಳು ಇಲ್ಲಿ ನನ್ನೊಂದಿಗಿದ್ದಷ್ಟೂ ದಿನ ಸೂರ್ಯ ನಮ್ಮೊಂದಿಗೆ ಸಹಕಾರ ಮಾಡಿರಲಿಲ್ಲ. ಸಂಜೆ ಕೂಡ... ನಾನೀಗ ಸ್ವಲ್ಪದಿನಕ್ಕೆ ಒಂಟಿಯೇ... ತಕ್ಷಣ ನನಗೆ ಜ್ಞಾಪಕಕ್ಕೆ ಬಂದದ್ದು ನಿಸಾರ್ ಅಹಮದ್‍ರ ಈ ಗೀತೆ:

ಮತ್ತದೇ ಬೇಸರ
ಅದೇ ಸಂಜೆ ಅದೇ ಏಕಾಂತ
ನಿನ್ನಜೊತೆ ಇಲ್ಲದೆ
ಮಾತಿಲ್ಲದೆ ಮನ ವಿಭ್ರಾಂತ...

Sunday, August 05, 2007

ಬ್ಲಾಗಿನ ಬ್ಲಾಗು

ನಾನು ಬಹಳ ದಿನಗಳ ನಂತರ ಕನ್ನಡದ ಬ್ಲಾಗುಗಳನ್ನ ಹುಡುಕಿ ಒದ್ತಾಇದ್ದೆ. ತುಂಬಾನೆ ಖುಷಿಯಾಯ್ತು. ನಾನು ಮೊದಲು ಕನ್ನಡದಲ್ಲಿ ಬರೀಬೇಕು ಅಂತ ಅಂದುಕೊಂಡಾಗ ತುಂಬಾ ಬ್ಲಾಗುಗಳಿರಲಿಲ್ಲ. ಈಗ ಬಹಳವಾಗಿವೆ. ಇವಾಗಿನ ಯುವಕರು ಕನ್ನಡದಲ್ಲಿ ಬರೆಯೋಕೆ ಮುಂದೆಬಂದಿರೋದು ಸಂತಸದ ವಿಷಾಯನೇ ಸರಿ. ಎಷ್ಟೊಂದರಲ್ಲಿ ಅವರ ಆಲೋಚನೆ, ಅವರ ಬರೆಯೋ ವೈಖರಿ, ವಕ್ಕಣೆ ಎಲ್ಲಾತುಂಬಾ ಚೆನ್ನಾಗಿದೆ. ಅವರಿಗೆಲ್ಲಾ ನನ್ನ ವಂದನೆಗಳು.

ಅದಿರ್ಲಿ. ಕೆಲವೊಂದು postಗಳನ್ನ ಓದಿದಾಗ ನನಗನ್ನಿಸಿದ್ದು ಇಷ್ಟೇ. ಕೆಲವರು ಪ್ರಚಲಿತ ವಿಷಯ ತಗೊಂಡು ಅದಕ್ಕೆ ವಿರುದ್ಧವಾಗೇ ಬರೆಯೋಕೆ ಹೊರಟಿದ್ದಾರೆ. ಒಬ್ಬ ಬರಿತಾನೆ IT industry ನಮ್ಮ (ಸಾಮಾನ್ಯ ಮನುಷ್ಯರ) ಜೀವನ ಹಾಳುಮಾಡಿದೆ ಅಂತ (ಇದು ತುಂಬಾ ಹಳೇ ವಿಚಾರ ಬಿಡಿ!). ಮತ್ತೊಬ್ಬ ರವಿ ಬೆಳಗೆರೆ ಮುಂಚಿನಥರ ಇಲ್ಲ, ತುಂಬಾಬದಲಾಗಿದ್ದಾರೆ; ಕಡಕ್ಕಾಗಿ ಬರಿತಿಲ್ಲ ಅಂತ. ಹೌದು, ಯಾರೇ ಆಗ್ಲೀ ಏನಾದ್ರೂ ಹೇಳಿದ್ರೆ ಅದಕ್ಕೆ ವಿರುದ್ಧವಾಗಿ ಹೇಳಬೇಕು ಅನ್ನಿಸೋದು ಮಾನವ ಸಹಜ ಕ್ರಿಯೆ. ಆದ್ರೆ ಸ್ವಲ್ಪ ಯೊಚಿಸಿನೋಡಬೇಕು ಅಲ್ವಾ? ಸ್ವಲ್ಪ ನಿಧಾನವಾಗಿ ಅದೇ ವಿಷ್ಯನ ಬಿಚ್ಚು ಮನಸ್ಸಿನಿಂದಯೋಚಿಸಿದ್ರೆ ಬರೆಯುವ ಮುಂಚಿನ ನಮ್ಮ biased views ಬದಲಾಗಬಹುದು. ನಾನು ಹಾಗಂತ ಅವರೆಲ್ಲಾ ಬರೆದಿರೋದು ತಪ್ಪು ಅಂತ ಹೇಳ್ತಿಲ್ಲ. ಪ್ರತಿಯೊಬ್ಬರ ಅನಿಸಿಕೆ, ಪ್ರಭಾವಶಾಲಿ ಪ್ರತಿಕ್ರಿಯೆ ಏನೇನೋ ಮಾಡಲು ಸಾಧ್ಯ.

"ಒಂದ್ಸಲಾ ಈ ಸಾಫ್ಟ್ ವೇರು ಅನ್ನೋದು ಪೂರ್ತಿ ಬಿದ್ದೋಗ್ಬೇಕು ಆವಾಗ ಬುದ್ದಿ ಬರತ್ತೆ ಇವ್ಕೆ"
ಅಂತ ಇದೆ ಅದರಲ್ಲಿ. ತುಂಬಾ ನಗು ಬಂತುರೀ. :) ಬರೆದಿರುವಾತ ಇನ್ನೂ ಚಿಕ್ಕವನು ಅಂತ ಅಂದ್ಕೋತಿನಿ. ಅವನ e-mail idನಲ್ಲಿ 82 ಅಂತ ಇದೆ. ಅದು ಅವನು ಹುಟ್ಟಿದ ವರ್ಷ ಅಂದ್ಕೊಂಡಿದೀನಿ (ಆದ್ದರಿಂದ್ಲೆ ಇಲ್ಲಿ ಧೈರ್ಯವಾಗಿ ಕೆಲವುಕಡೆ ಏಕವಚನ ಪ್ರಯೋಗಿಸಿದ್ದೀನಿ; ಅಲ್ಲವಾದ ಪಕ್ಷದಲ್ಲಿ ಬದಲಾಯಿಸುತ್ತೀನಿ). ಹಾಗಾದ್ರೆ, ನಿಜ. ಆತ ಕೂಡ IT ಕೆಲಸದಲ್ಲೇ ಇದ್ರೂ ಈ ಉದ್ಯಮದ ಏಳು ಬೀಳುಗಳನ್ನ ನೋಡಿಲ್ಲ. ಯಾಕಂದ್ರೆ ಅವನು ಈ industryಗೆ ಸೇರಿದಾಗ 2003 ಆಗಿತ್ತು. ನಾವೆಲ್ಲಾ ಒಂದು ದೊಡ್ಡ ಗಂಡಾಂತರದಿಂದ ಪಾರಾಗಿದ್ವಿ ಅಷ್ಟುಹೊತ್ಗೆ. ಮರೆತು ಬಿಟ್ರಾ ಸ್ವಾಮಿ 1998-2001ರ downtrend ಹೇಗಿತ್ತು ಅಂತ? ಏನೇನೋ ಅಯ್ತು ಬಿಡಿ ಆಗ. ಈಗ ಅದರ ಮಾತೇಕೆ. ನಾನಿಲ್ಲಿ ಹೇಳೋಕೆ ಹೊರಟಿದ್ದು ಇಷ್ಟೆ. IT ಅನ್ನೋದು ಭಾರತದಲ್ಲಿ, ಮತ್ತೂ ಬೆಂಗಳೂರಿನಲ್ಲಿ, ಈಗ ನೋಡ್ತಿರೋದಷ್ಟೇ ಅಲ್ಲ. ಈಗದರ ಉದ್ಧಾರ ನೋಡಿ ಜನ ಏನೇನೊ ಕಲ್ಪಿಸಿಕೊಳ್ತಾರೆ, ನೆಗೆಟಿವ್ ಆಗೇ ಯೊಚನೆ ಮಾಡ್ತಾರೆ. ಅದರಿಂದ ಏನೂ adverse effect ಇಲ್ಲ ಅಂತ ನಾನೂ ಹೇಳೋದಿಲ್ಲ. ಪ್ರತಿಯೊಂದಕ್ಕೂ ಅದರ ಒಳ್ಳೆಯ ಮತ್ತು ಅಷ್ಟೇನೂ ಒಳ್ಳೆಯದಲ್ಲದ ಮುಖಗಳು ಇದ್ದೇ ಇರುತ್ತೆ ಅಂತ. ಎಷ್ಟು ಜನಕ್ಕೆ ಗೊತ್ತು ಭಾರತದಲ್ಲಿ ಈಗ boom ಅಗಿರೋ IT industry ಶುರುವಾಗಿದ್ದು 1968ರಲ್ಲಿ ಅಂತ? ಹ್ಹೂಂ. ತುಂಬಾ ಹಳೇ ಇಂಡಸ್ಟ್ರೀನೆ ಸ್ವಾಮಿ ಇದು. ತುಂಬಾಜನ ಅಂದುಕೊಂದಿರೋ ಹಾಗೆ ಅದು ಕಳೆದ ಐದು-ಹತ್ತು ವರುಷಗಳಿಂದ ಬಂದು ಇದ್ದಕ್ಕಿದ್ದಂತೆ ಗೆದ್ದಿಲ್ಲ ಅದು. ಅದು ತನ್ನದೇ ಆದ ಏಳು-ಬೀಳುಗಳನ್ನ ನೋಡಿದೆ. ಪ್ರಪಂಚದಲ್ಲೆಲ್ಲಾ ಐಟಿ ಬಳಕೆ ಆಗ್ತಿರೋದ್ರಿಂದನೇ ಅದು ಗೆದ್ದಿದ್ದು.

ಮತ್ತೊಂದು ವಿಚಾರ ಅದೇ ಬ್ಲಾಗ್ ನಿಂದ -

"ಅಷ್ಟಕ್ಕೂ ಈ ಸಾಫ್ಟ್ ವೇರು ಅಂದ್ರೆ ಏನಂತ ಅಂದ್ಕಂಡಿದಿರಾ? ಇದೊಂದು ಕೂಲಿ ಕೆಲಸ."
ಸ್ವಾಮಿ ಹೀಗಂದ್ರೆ ನೀವು ಐಟಿನೋರ್ನ ಹೀಯಾಳಿಸಿದಂಗೆ ಅಂತ ಅಂದುಕೊಂಡ್ರ? ತಪ್ಪು. ಯಾಕಂದ್ರೆ IT ನಲ್ಲಿರೋರು ತಮ್ಮ ಕೆಲಸ ಮಾಡ್ತಿದ್ದಾರೆ ಅಷ್ಟೆ. ಕೂಲಿ ಮಾಡೊದು ತಪ್ಪಾ ನಿಮ್ಮ ಅರ್ಥದಲ್ಲಿ? ಅದೂ ಸಹ ಒಂದು ಕಾಯಕ ಸ್ವಾಮಿ. ಪ್ರತಿಯೊಂದು ಕೆಲಸ ಮಾಡೋಕೂ ಜನ ಬೇಕು. ನನಗೆ ನನ್ನಮ್ಮ ನಾನು ಚಿಕ್ಕವನಾಗಿರುವಾಗ ಹೇಳ್ತಿದ್ದ ಮಾತು ನೆನಪಿಗೆ ಬರುತ್ತೆ: ಎಲ್ಲಾರೂ ಪಲ್ಲಕ್ಕಿಯ ಮೇಲೇನೆ ಕೂತ್ಕೊಂಡು ಹೋಗೊಕೆ ಆಸೆ ಪಟ್ರೆ ಅದನ್ನ ಹೊರೋರು ಯಾರು? :) ನೀವೂ ಕಾಯ್ತಿರ್ತಿರ, ಪಲ್ಲಾಕ್ಕಿನೂ ಅಲ್ಲೀ ಇರುತ್ತೆ. ಮುಂದೆ ಹೇಗೆ ಹೋಗೊದು ಮತ್ತೆ? ಯಾವಾಗಲೂ ನಿಧಾನ ವಾಗಿ ಮೇಲೆ ಹೋಗಣ ಅಲ್ವ? ಹಾಗಂತ ಭಾರತೀಯ IT companyಗಳು ಬರೀ ಈ ಕೂಲಿ ಕೆಲಸ ಮಾಡ್ತಿಲ್ಲ ಗುರು. ನಾವುಗಳೂ ನಮ್ಮದೇ ಆದ ಸ್ಥಾನ ಪಡೆದುಕೊಂದಿದ್ದೀವಿ. ನಮ್ಮದೇ innovations ಇವೆ. ಮೊದಲು ಈ outsourcing ಪ್ರಾರಂಭವಾದಾಗ ನಾವು - ಭಾರತೀಯರು - ಅಮೇರಿಕನ್ನರಿಗೆ ಸಿಕ್ಕಿದ್ವಿ. ಹೌದು ನಾವು ಅವರಿಗಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ವಿ - ಈಗಲೂ ಮಾಡ್ತಿದ್ದೀವಿ. ಆದ್ರೆ ಈಗ ಭಾರತಾನ ಮುಂಚಿನಥರಾನೇ ನೋಡ್ತಿಲ್ಲ. ಯಾಕಂದ್ರೆ ನಾವು ಈಗ ಜಾಸ್ತಿ ದುಡ್ಡು ಕೇಳ್ತಿದ್ದೆವಿ. ಅವರೇ ಬರೆದಿರೋಹಾಗೆ ಕಂಪನಿಗಳು ಜಾಸ್ತಿಆದಂಗೆ ಅದನ್ನ ಬದಲಿಸೋ ಜನಾ ಕೂಡ ಜಾಸ್ತಿಯಾಗಿದ್ದಾರೆ. ಆದ್ದರಿಂದ ಒಳ್ಳೆಯ ಜನನ್ನ ಉಳಿಸಿಕೋಬೇಕಂದ್ರೆ ಅವರಿಗೆ ಜಾಸ್ತಿ ಸಂಬಳ ಕೊಡಬೇಕು. ಹಾಗಾಗಿ ಈಗ ತುಂಬಾ ಬೇಕಿದ್ದ ಭಾರತೀಯ ಕಂಪನಿಗಳಿಂದ ಬೇರೆ ಕಡಿಮೆ ಸಂಬಳ ತಗೋ ದೇಶಗಳಿಗೆ ಹೋಗ್ತಿದೆ projectಗಳು. BRIC (Brazil, Russia, India, and China) ಅನ್ನೊ ಪದ ಕೇಳಿದ್ದೀರ? ಅದರಲ್ಲಿ ಎಷ್ಟೊಜನ ನಂ. 1 ಸ್ಥಾನದಲ್ಲಿದ್ದ ಭಾರತನ ಕೆಳಗೆ ಹಾಕ್ತಿದ್ದಾರೆ ಈಗ. ಬೇರೆಯವರಿಗೆ ಭಾರತದ ಜೊತೆ technology & ಆಂಗ್ಲ ಭಾಷೆಯಲ್ಲಿ ಸ್ಪರ್ಧಿಸಿ ಮುಂದೆ ಬರೋಕ್ಕೆ ಸ್ವಲ್ಪ ಸಮಯ ಹಿಡೀಬಹುದು ಆದ್ರೆ ತುಂಬಾ ದೂರ ಇರಲಿಕ್ಕಿಲ್ಲ. ಆಗ ನೋಡಿ ಗೊತ್ತಾಗತ್ತೆ!! ಬರೇ ನಾವು ಕೂಲಿ ಕೆಲ್ಸ ಮಾಡ್ತಿದ್ದೀವಿ ಅಂತ ಹೇಳ್ಕೊಳ್ಳೋದು ಬಿಟ್ಟು ಒಂದು product idea ಹೇಳು ಗುರು. ಆದು ಕೂಲಿ ಕೆಲಸ ಬಿಡಿಸಿ ನಿನ್ನ ಸಿಂಹಾಸನದ ಮೇಲೆ ಕೂರಿಸುತ್ತೆ! ಬೇಜಾರ್ಮಾಡ್ಕೊ ಬೇಡ, ನಿನ್ನ ಕೂಲಿ ಕೆಸದಿಂದ ನಿನ್ನ ಹೇಗೆ ಹೊರಗೆ ತರೋದು ಅಂತ ಸುಲಭಬಾಗಿ ಒಂದು optionಕೊಟ್ಟೆ ಅಷ್ಟೆ.

"ಈ ಸಾಫ್ಟ್ ವೇರ್ ಕಂಪನಿ ಜನರು ಇವರೆಲ್ಲಾ ಒಂಥರಾ ಅರ್ಧ ತುಂಬಿದ ಮಡಕೆಗಳು"

??!! ಅದು ತಪ್ಪು ಅಭಿಪ್ರಾಯ ಕಣಮ್ಮ. ಈಗ ನಿನ್ನನ್ನೇ ತಗೊ. ನೀನು ಎಷ್ಟು ಚಂದ ಬರೆದಿದ್ದೀಯ. ಏನೇನೋ ಯೊಚನೆ ಮಾಡ್ತಿದ್ದೀಯ. :) Generalize ಮಾಡ್ಬೇಡ್ವೋ ತಮ್ಮ. ಅದು ತಪ್ಪು. ಈ ಸಾಫ್ಟ್ ವೇರ್ ನಲ್ಲಿ ತುಂಬಿದ ಕೊಡಗಳೂ ಇವೆ. ಆದ್ರೆ ಆ ತುಂಬಿದ ಕೊಡಗಳು ಪ್ರಾಚಾರಕ್ಕೆ ಬರಲ್ಲ. ’ಎಲೆ ಮರೆ ಕಾಯಿ’ ಥರ ತಮ್ಮ ಪಾಡಿಗೆ ಇರ್ತಾವೆ. ಈನು ಮಾಡೊದು? ನಿನ್ನಂಥವರೇ ಅವರನ್ನ ಬಡಿದೆಬ್ಬಿಸಬೇಕು. ಮಾಡ್ತಿರ ಬಿಡ್ರಪ್ಪ!! :)

"ನಮ್ ಸಮಾಜಕ್ಕೆ ಏನಾದ್ರೂ ಕೈಲಾದಷ್ಟು ಮಾಡ್ಬೋದಾ ನೋಡ್ರಯ್ಯ, ನೀವು ನಮ್ ದೇಶದ ಪ್ರಜೆಗಳು ಅಲ್ವಾ"
ಅಂದ್ರೆ ಎಲ್ಲಾರೂ ನಂದೇ ನಂಗೆ ಅನ್ನಲ್ಲಪ್ಪ. ಸಮಾಜಕ್ಕೆ ಒಬ್ಬರಿಂದ ಏನೂ ಆಗಲ್ಲ. ಅದನ್ನ ಪಾಲಿಸುತ್ತಿರೋ ರಾಜಕಾರಣಿಗಳು ತಮ್ಮ ಕೈಜೋಡಿಸಬೇಕು. ಒಂದು ಉದಾಹರಣೆ ಕೊಡ್ತಿನಿ. ಸರ್ಜಾಪುರದ ರಸ್ತೆ ಗೆ PPP ಪಾಲಸಿ ಹಾಕಿದ್ರು ಕೆಲವ ವರ್ಶಗಳಹಿಂದೆ. ಜ್ಞಾಪಕ ಇದ್ಯ? ಅದಕ್ಕೆ ವಿಪ್ರೊ ತಾನು ಹಣ ಕೊಡೋಕೆ ಮುಂದೆ ಬಂತು (ಅದರ ಸ್ವಾರ್ಥ ಜೊತೆಗೆ ಬೇರೆಯವರಿಗೂ ಸಹಾಯ ಆಗ್ತಿತ್ತು ಅನ್ನೋದೆ ಮುಖ್ಯ ಇಲ್ಲಿ). ಆದ್ರೆ ಅದು ಸರ್ಕಾರನ ಕೇಳಿದ್ದು ಇಷ್ಟೆ. ನಾನು ಕೊಡೊ ಹಣಕ್ಕೆ ಕಾಸು ಕಾಸಿಗೆ ಲೆಕ್ಕಾಬೇಕು ಹೆಂಗೆ ಕರ್ಚಾಯ್ತು ಅಂತ. ಅದಕ್ಕೆ ನಮ್ಮ ಸರ್ಕಾರ ’ನಿಮ್ಮ ದುಡ್ಡೇ ಬೆಡ. ನಮಗೆ ಅವಮಾನ ಮಾಡ್ತಿದ್ದಾರೆ’ ಅಂತು. ಸ್ವಾಮಿ ಸರ್ಕಾರಕ್ಕೆ ಅಷ್ಟು ಭರವಸೆ ಇದ್ದಿದ್ರೆ ಲೆಕ್ಕ ಕೊಡೊಕೆ ತಯಾರಾಗಿರಬೇಕಿತ್ತು ಅಲ್ವ?

ನನಗೂ ಸಹ basic science ತಗೊಳೋ ಹುಡುಗರ ಸಂಖ್ಯೆ ಕಡಿಮೆಯಾಗ್ತಿರೋದು ಸಂಕಟತರುತ್ತೆ. ಆದನ್ನ HN ನಾನು collegeನಲ್ಲಿ ಓದಬೇಕಾದಾಗ್ಲೇ ಹೇಳ್ತಿದ್ರು. ಅದು ಹದಿನೈದು ವರ್ಷಗಳ ಹಿಂದೆನೇ. ಜನಕ್ಕೆ ಎಲ್ಲರಂತೆ ನಾನೂ ಜೀವನ ಸಾಗಿಸಬೇಕು ಅನ್ನೊ ಆಸೆ. ಅದೇ ಕಾರಣದಿಂದ್ಲೆ UGC ತನ್ನ ಸಂಬಳ ಜಾಸ್ತಿ ಮಾಡಿದ್ದು ಉಪನ್ಯಾಸಕರಿಗೆ. ಇದೂ ಅಷ್ಟೆ IT ನಿಂದ ಪರೋಕ್ಷವಾಗಿ ಆಗಿರೊ ಸಹಾಯ. :)

ಹೊರದೇಶಗಳಿಗೆ ಹೋಗಿಬಂದು ಬೇರೇಥರನೇ ವರ್ತಿಸೊ ಭಾರತೀಯರಬಗ್ಗೆ ನಮಗೂ ಬೇಜಾರಿದೆ. ಅದಕ್ಕೆ ನನ ಬೇರೋಂದು ಬ್ಲಾಗಿನಲ್ಲಿ ಹೇಳಿದ್ದೀನಿ.

ಇನ್ನು ರವಿ ಬಗೆಗಿನ ಮಾತು. ನಾನೇನು ಅವರ ತುಂಬಾ ಬರಹಗಳನ್ನು ಓದಿಲ್ಲ. ಹಾಗಾಗಿ ಅವರ ಇತ್ತೀಚಿನ ಬರವಣಿಗೆಯ ಬಗ್ಗೆ ಸ್ವಾಮಿ ಅವರೂ ಕೂಡ ನಮ್ಮ-ನಿಮ್ಮಂತೆ ಸಾಧಾರಣ ಮನುಷ್ಯರು. ಆವರಿಗೂ ಬದಲಾವಣೆ ಇರುತ್ತೆ ಅಲ್ವ? ಸಮಯ ಸಂದರ್ಭ ಎಲ್ಲರನ್ನೂ ಸ್ವಲ್ಪ ಬದಲಾಗಿಸಬಹುದು. ಯಾಕಂದ್ರೆ ಅವರೇನೂ ಅತಿಮಾನವರಲ್ಲ. ಅಲ್ವೆ? ಸ್ವಲ್ಪ ಸಮಯ ಕೊಡಿ ಅವರ ಇತ್ತೀಚಿನ ಬರಹಗಳು ಜೊಳ್ಳು ಅನ್ನಿಸಿದರೆ. ಯಾಕೆಂದ್ರೆ ರವಿಯವರೇ ಹೇಳೋ ಹಾಗೆ ಅವರೂ ಸಹ ತಮ್ಮ ಬರವಣಿಗೆಯನ್ನು ಓದಿ ಅವಲೋಕಿಸುತ್ತಿರುತ್ತಾರೆ. ಅವರಿಗೇ ಹಾಗನಿಸಿದರೆ ಅವರು ಮತ್ತೆ ’ಅವರದೇ ಶೈಲಿ’ಗೆ ಬರುತ್ತಾರೆ. ಕಾಯಬೇಕು ಅಲ್ವ? ಯಾಕಂದ್ರೆ ಏನೇ ಆಗಲಿ ಅದಕ್ಕೆ ತನ್ನದೇ ಸಮಯ-ಕಾಲ ಆಂತಿರತ್ತೆ. ಅದು ಬರಲೇಬೇಕು.

ಹಿತೋಪದೇಷಗಳನ್ನ ಬೇಡಾನ್ಬೇಡಪ್ಪ. ಅದು ಎಲ್ಲಾರಿಗೂ ಬೇಕು. ಎಷ್ಟುಜನಕ್ಕೆ ಅದು ಸಹಾಯ ಮಡುತ್ತೊ ಗೊತ್ತಿಲ್ಲ. ಜೊತೆಗೆ, ಅದು ಅವರಿಗೆ ಓದುಗರಿದ್ದಾರೆ ಅಂತ ಗೊತ್ತಿರೋದ್ರಿಂದ್ಲೇ ಅದು ಬರ್ತಿರೋದು. ಇಲ್ಲದಿದ್ರೆ ಅವರು ಜನ ಓದದೇ ಇರೋದು ಬರೆದು ಲಾಸುಮಾಡ್ಕೊಳ್ಳೋಲ್ಲ. ಅಲ್ವ?

ಹುಂ?? :)

Saturday, August 04, 2007

ಮುಳುಗುವವನ ಕೂಗು...

ಮುಳುಗುವವನ ಕೂಗು
ಚಾಚುವಂತೆ ಮಾಡಿದೆ ಕೈಯ್ಯ
ಜಾರಿಬಿಡುವುದೇ ಈ ಹೃದಯ
ಏನೊ ತಳಮಳ |


ಇದು ಮುಂಗಾರು ಮಳೆ ಚಿತ್ರದ ’ಇವನು ಇನಿಯನಲ್ಲ’ ಅನ್ನೊ ಹಾಡಿನದ್ದು.’ಅಯ್ಯೊ! ಮತ್ತೆ ಇಲ್ಲೂ ಮುಂಗಾರು ಮಳೆ ಬಂತಾ’ ಅಂದ್ಕೊಬೇಡಿ. ನಾನು ಇಲ್ಲಿ ಮುಂಗಾರು ಮಳೆ ಬಗ್ಗೆ ಬರೀತಿಲ್ಲ. ಅದನ್ನ ತುಂಬಾಜನ ಬರೆದಿದ್ದಾರೆ ಮತ್ತು ಅದಕ್ಕೆ ಸಿಗಬೇಕಿದ್ದ ಪ್ರಚಾರ ಸಿಕ್ಕಿದೆ ಅಂದ್ಕೊತಿನಿ! ನಾನು ಹೇಳ್ತಿರೋದು ಮೊದಲ ಮೂರು ಸಾಲುಗಳನ್ನ ಮಾತ್ರ.

ಈ ಹಾಡನ್ನ ತುಂಬಾಸಲನೇ ಕೇಳಿದ್ದೆ - ನಂಗೆ ಸ್ವಲ್ಪ ವಿಷಾದ ಪ್ರಧಾನ ಗೀತೆಗಳು ಇಷ್ಟ, ಹಾಗಾಗಿ. ಆದ್ರೆ ಸ್ವಲ್ಪ ದಿನಗಳ ಹಿಂದಷ್ಟೇ ಈ ಸಾಲುಗಳು ನನ್ನ ಹಿಡಿದು ನಿಲ್ಲಿಸಿದ್ವು. ಸಂದರ್ಭ ಅಷ್ಟೆ!

ನನ್ನ ಸ್ನೇಹಿತ ಮಹೇಶನ ಜೊತೆ ಸ್ವಲ್ಪ ದಿನಗಳ ಹಿಂದೆ ನಡೆದ ಘಟನೆ ಜ್ಞಾಪಕ್ಕೆ ಬಂತು. ಅವನು officeನಿಂದ ಒಂದುದಿನದ ಪ್ರವಾಸಕ್ಕೆ ಹೋಗಿದ್ದ. ಆಲ್ಲಿ ತನ್ನ ಸಹೋದ್ಯೊಗಿಯೊಬ್ಬಳನ್ನ ಭೇಟಿಯಾದ. ಆಕೆ ಇವನ ಜೊತೆ ತುಂಬಾ ಸಲೀಸಾಗಿ ಮಾತಡಿದ್ಲಂತೆ. ತುಂಬಾನೇ ಚೆನ್ನಾಗಿ ಇಬ್ಬರೂ ಅವತ್ತು ಮಾತಾಡಿದ್ದಾರೆ. ಪರಸ್ಪರ ಪರಿಚಯ ಎಲ್ಲಾ ಅಯ್ತು. ಆಮೇಲೆ ಮಹೇಶನ ಮನಸ್ಸು ಒಂದೇ ದಿನದ ಈ ಹುಡುಗಿಯ ಬಗ್ಗೆ ಯೋಚನೆಮಾಡೊಕ್ಕೆ ಪ್ರಾರಂಭಿಸಿತ್ತು. ಅದು ಎಲ್ಲಿಂದ ಎಲ್ಲಿಗೊ ತಗೊಂದು ಹೊಯ್ತು. ಆವನ ಮನಸ್ಸಿನ ’ಕಲ್ಪನೆಯ ಕನ್ಯೆ’ಯ ಜೊತೆ ಈಕೆಯನ್ನು ಹೋಲಿಸಲು ಶುರುಮಾಡಿದ. ಹಲವಾರು ರಾತ್ರಿಗಳು ಅವಳದ್ದೇ ಯೊಚನೆಯಲ್ಲಿ ಕಳೆದ. ಅವರು ದಿನೇ ದಿನೇ ಹೆಚ್ಚು ಹೆಚ್ಚು ಮಾತಾಡೊಕ್ಕೆ ಮುಂದಾದ್ರು. ಅವರ ಭಾವನೆ ಇವನಿಗೆ - ಇವನ ಭಾವನೆ ಅವರಿಗೆ ವಿನಿಮಯ ಅಯ್ತು. ಅದು ಅವರಿಗೆ ಇಬ್ಬರ ಬಗ್ಗೆ ತಿಳ್ಕೊಳಕ್ಕೆ ಸಹಾಯ ಆಯ್ತು. ನನಗೆ ಇದೆಲ್ಲಾ ಒಂದು ದಿನ ಮಹೇಶ ಉರುಹಿದ - ಅಷ್ಟೊತ್ಗೆ ಅವನ ಮನಸ್ಸು ಅವನ್ನ ಎಲ್ಲೆಲ್ಲೋ ಕರೆದುಕೊಂಡು ಹೋಗಿತ್ತು. ಅವನು ಅವಳಿಗೆ ತನ್ನ ಮನಸ್ಸನ್ನು ಆಗ್ಲೆ ಅರ್ಪಿಸಿದ್ದ. ’ಲವ್ ಅಂತ ಏನು time waste ಮಾಡ್ತಾರೆ ಈಜನ; ಅವರಿಗೆ ಬೇರೆ ಕೆಲಸನೇ ಇಲ್ವ?’ ಅಂತ ಬೇರೆಯವರಿಗೆ ಬಯ್ತಾಇದ್ದೋನು ಈಗ ಅದೇ ಗೊಂದಲದಲ್ಲಿ ಸಿಕ್ಕಿದ್ದ! ಈಗೊಂದಲದಲ್ಲಿ ನರಳಾಡುತ್ತಿದ್ದಾಗ ಅವನಿಗೆ ಜ್ಞ್ನಾಪಕಕ್ಕೆ ಬಂದದ್ದು ನಾನು.

ಒಂದಿನ ಚಾಯ್ ಕುಡೀತಾ ಅವನ ಭಾವನೆಗಳನ್ನೆಲ್ಲಾ ನಿಧಾನವಾಗಿ ಬಿಚ್ಚಲು ಆರಂಭಿಸಿದ. ಅದು ಸುರುಳಿ-ಸುರುಳಿಯಾಗಿ ಹೊರಬಂತು. ’ನನಗೆ ನನ್ನ ಬಗ್ಗೆನೇ ಅರ್ಥವಾಗ್ತಿಲ್ಲ ಕಣೋ. ನಾನ್ಯಾಕೆ ಹಿಂಗಾದೆ ಅಂತ. ತಪ್ಪು ಮಾಡ್ತಿದ್ದೀನಾ ಅನ್ನಿಸ್ತಿದೆ...’ ಅವನ ಮನಸ್ಸಿನಲ್ಲಿದ್ದ ತುಮುಲ, ಉನ್ಮಾದ, ಪ್ರಶ್ಣೆಗಳು, ಎಲ್ಲಾ ಆಚೆ ಬಿದ್ವು. ಹುಂ.. ಏನಪ್ಪ ಮಾಡೋದು ಈಗ?!! ಸರಿ ನನಗೆ ಗೊತ್ತಿದ್ದಷ್ಟು ಹೇಳಿದೆ. ’ನೀನು ಅವಳನ್ನು ಇಷ್ಟಪಟ್ರೆ ತಪ್ಪೇನಿಲ್ಲ ಕಣೊ. ಹಾಗೆ ಅಂದ್ಕೋಬೇಡ. ಆದ್ರೆ, ಇದನ್ನ ಮುಂದುವರಿಸಬೇಕು ಅಂದ್ರೆ ಅವಳ ಮನಸ್ಸಿನಲ್ಲಿ ಏನಿದೆ ಅಂತ ಮೊದಲು ಹುಡುಕು’ ಅಂದೆ. ಆ ಹುಡುಗಿಯ ಮಾತುಗಳನ್ನ ಅವನಿಂದನೇ ಕೇಳಿದಾಗ, ನನಗೆ ಆಕೆಯ ಮನಸ್ಸಿನಲ್ಲಿ ಅಂಥಹ ಯಾವುದೇ ವಿಚಾರ ಇರೋ ಕುರುಹುಗಳು ನನಗೆ ಕಾಣಿಸಲಿಲ್ಲ. ಆದ್ರೆ ಅವನಿಗೆ ಒಂದೇಸಲ ’ಬೇಡ’ ಅಂತ ಹೆಳಕ್ಕಾಗ್ಲಿಲ್ಲ ನಂಗೆ. ಅದಕ್ಕೆ ಅವಳ ಮನಸ್ಸಿನಲ್ಲಿ ಏನಿದೆ ಅಂತ ಹುಡುಕೋಕ್ಕೆ ದಾರಿ ಹೆಳ್ದೆ. ಜೊತೆಗೆ ಅವಳ ಅಭಿಪ್ರಾಯ ಅವನ ಆಸೆಯ ವಿರುಧ್ದವಾಗಿದ್ರೆ ಅವನು ಹೇಗೆ ಅದರಿಂದ ಹೊರಗೆ ಬರಬೇಕು ಅಂತ ಅವನನ್ನ ತಯಾರಿ ಮಾಡೊಕೆ ಶುರುಮಾಡಿದೆ - ಯಾಕಂದ್ರೆ ಇದೇಥರ missನ missಮಾಡಿಕೊಂಡು ತಲೆ ಕೆಡಿಸಿಕೊಂಡು ಅವರ ಯಥಾಸ್ಥಿತಿಗೆ ಬರೋಕ್ಕೆ ತುಂಬಾ ಸಮಯ ತಗೊಂಡಿದ್ದಾರೆ ಅನ್ನೋದು ನಂಗೆ ಗೊತ್ತು. ಆಕೆ ಇವನು ಮೊದಮೊದಲು ಸ್ವಲ್ಪ ಹೆಚ್ಚಿನ ಆತ್ಮೀಯವಾಗಿ, ವಲವಿನಿಂದ ಅವಳ ಜೊತೆ ಮಾತಾಡಿದ್ದು ನೋಡಿ ’ನನಗೆ ನಿಮ್ಮ ಮಾತಿನ ಶೈಲಿ ಭಯ ತರುತ್ತೆ - ನೀವೆಲ್ಲಿ ನಂಗೆ ಸಧ್ಯದಲ್ಲೇ propose ಮಾಡ್ತಿರೋ ಅಂತ’ ಅಂದಿದ್ಲಂತೆ ಚಾಣಾಕ್ಷೆ! ಎಷ್ಟು ಬೇಗ ಇವನ ಮನಸ್ಸನ್ನ ಓದಿದಳಾಕೆ! ಹುಡ್ಗಿಯರಿಗೆ ಅದು ಬೇಗ ಗೊತ್ತಾಗತ್ತ ಅಂತ?! ಅದಕ್ಕೆ ಇವ, ’ಛೆ!ಛೆ! ಹಾಗೇನಿಲ್ಲ. ನೀವೂ ಕೂಡ ಮನಸು ಮಿಚ್ಚಿ ಮಾದಾಡ್ತಿದ್ದೀರ ಅದಕ್ಕೇ ನಾನೂ ಹಾಗೇ ಮಾತಾಡ್ತಿದ್ದೆನಿ ಅಷ್ಟೆ. ಮತ್ತೇನೂ ಇಲ್ಲ. ಹಾಗೆಲ್ಲ ಅಂದುಕೋಬೇಡಿ’ ಅಂತ ಹೇಳಿ ಜಾರಿಕೊಂಡ ಪುಣ್ಯಾತ್ಮ. ಆದ್ರೆ ಅವನ ಮನಸ್ಸಿನಲ್ಲಿ ಸುಳ್ಳುಹೇಳಿದ್ದಕ್ಕೆ ಅಳುಕಿತ್ತು. ಇವರಿಬ್ಬರ ಮಾತುಕತೆ, ಇವನು ಅವನ ಬಗ್ಗೆ ಅವಳ ಮನಸ್ಸಿನಲ್ಲೇನಿದೆ ಅಂತ ತಿಳ್ಕೊಳಕ್ಕೆ ಸುಮಾರು ಪ್ರಶ್ಣೆಗಳು, ಸಂಧರ್ಭ ಗಳನ್ನ ಸೃಷ್ಟಿಮಾಡಿ ಮಾತಾಡೋದು, ಹೀಗೆ.. ಸುಮಾರು ದಿನ ನಡೆಸಿ, ಕೊನೆಗೆ ಒಂದು ದಿನ ಅವಳನ್ನ ಕೇಳೇ ಬಿಟ್ಟ ಸ್ವಾಮಿ ’ನನ್ನ ಮದುವೆಯಾಗ್ತಿಯ?’ ಅಂತ. ಅವಳು ಪಾಪ, ಅವಳ ಭಯ ನಿಜ ಆಗಿದ್ದಾಕ್ಕೆ ಬೇಜಾರು ಪಟ್ಕೊಂಡ್ಳು. ಆದ್ರೆ ಏನು ಮಾಡೋದು ಈಗ, ಇವನಾಗ್ಲೆ ಅವಳಿಗೆ ಸ್ವಲ್ಪ ಹತ್ತಿರವಾಗಿದ್ದ. ಇವನನ್ನ ಒಪ್ಪಿಕೊಳ್ಳೋಕೆ ಅವಳ ಮನಸ್ಸಿನಲ್ಲಿ ಅಂಥಾ ಭಾವನೆಗಳೆ ಇರಲಿಲ್ಲ. ಅನಾಮಾತ್ತಾಗಿ ಅವನನ್ನ ದೂರ ತಳ್ಳೋಕೂ ಮನಸ್ಸಿಲ್ಲ. ಅವಳು ಈಗ ಸಂಪೂರ್ಣ ಗೊಂದಲದಲ್ಲಿದ್ಲು. ಅಲ್ಲಿಂದ ಆಕೆ ಇವನನ್ನ ಅವನ ಭಾವನೆಗಳಿಂದ ಹೊರಕ್ಕೆ ತರೋ ಪ್ರಯತ್ನ ಮಾಡಿದ್ಲು. ಇದೇ ಸಲುವಾಗಿ ಅವಳು ಇವರು ಮಾತಾಡೊಕ್ಕೆ ಹೋದಾಗ್ಲೆಲ್ಲಾ ಅವಳಮನಸ್ಸಿನಲ್ಲಿ ಇವರಬಗ್ಗೆ ಬೇರೆರೀತಿಯ ಭಾವನೆಗಳೇನೂ ಇಲ್ಲ, ಕೇವಲ ಸ್ನೇಹ ಅಷ್ಟೆ ಅಂತ ತಿಳಿಸಲು ಬಲು ವಿಧವಾಗಿ ತಿಳಿಹೇಳಿದಳು. ಮಾತು ಮತ್ತೂ ಜಾಸ್ತಿಯಾಯ್ತು, ಮಾತಾಡ್ತಿದ್ದ ಸಮಯಬದಲಾಯ್ತು, ಮಾತಿನ ಕಾಲಾವಧಿ ಹೆಚ್ಚಾಯ್ತು.

ಇದೇ ಮಧ್ಯ ಇದೆಲ್ಲವೂ ನನಗೆ ಮಹೇಶ ದಿನಾ ಒಪ್ಪಿಸುತ್ತಿದ್ದ. ನಾನು ಆಕೆಯ ಅಭಿಪ್ರಾಯ ಇತ್ತಿಹಿಡಿದು ಇವನಿಗೆ ಅವಳಿಷ್ಟಕ್ಕೆ ಬಿಡು, ಅದರಿಂದ ಹೊರಗೆ ಬಾ ಅಂತ ಎಷ್ಟು ಕರೆದರೂ ಹೊರಬರೋಕ್ಕಾಗದಷ್ಟು ಒಳಗೆ ಹೋಗಿದ್ದ ಮಹೇಶ. ಹುಂ.. ಏನು ಮಾಡೊಕೆ ಸಾಧ್ಯ. ಅವನು ಏನೇಆದ್ರೂ ನನ್ನ ಗೆಳ್ಯ ತಾನೆ.. ಅವನ ಜೊತೆಗಿರಲೇಬೇಕು. ಮಧ್ಯ ಎಷ್ಟು ಸಾಧ್ಯನೋ ಅಷ್ಟೆಲ್ಲಾ ಪ್ರಯತ್ನ ನಡಿತನೇ ಇತ್ತು.’ಅಪ್ಪ-ಅಮ್ಮ ನ್ನ ಬಿಟ್ಟು ನನಗೆ ಇರೋಕ್ಕಾಗಲ್ಲ. ನಮಗಾಗಿ ಅವರು ಅಷ್ಟೆಲ್ಲಾ ಮಾಡಿರೋ ಅವರಿಗೆ ಅವರಿಷ್ಟದಂತಿರೋ ಮಕ್ಕಳು ಬೇಕು ಅಲ್ವ? ನಾನು ಮದುವೆಯಾಗೋ ಹುಡ್ಗಿನ ನಮ್ಮಮ್ಮನೇ ಹುಡುಕೋದು ಕಣೊ. ಆಮೇಲೆ ಅವರ ಲಿಸ್ಟ್ ನಲ್ಲಿ ನನಗೆ ಆಗೋರ್ನ ನಾನು ಚೂಸ್ ಮಾಡ್ತಿನಿ’ ಅಂತಿದ್ದ ಮಹೇಶ ಈಗ ’ನಾನು ಅಪ್ಪ-ಅಮ್ಮನ್ನ ಒಪ್ಪಿಸುತ್ತೀನಿ. ನಂಗೆ ಗೊತ್ತು ಅವರಿಗೆ ಹೇಗೆ ಒಪ್ಪಿಸಬೇಕು’ ಅನ್ನೋ ಮಟ್ಟಕ್ಕೆ ಬಂದಿದ್ದ. ನಾನು ಇದು ತಪ್ಪು ಅಥವಾ ಅವನ ಈ ಬದಲಾವಣೆಯ ಬಗ್ಗೆ ಟೀಕೆ ಮಾಡ್ತಿಲ್ಲ. ಅದಕ್ಕೆ ನಾನು ಸಲ್ಲ ಕೂಡ. ಅವನ ಈ ಬದಲಾವಣೆಗೆ ಅವನು ಆ ಹುಡ್ಗಿಯಮೇಲಿಟ್ಟಿದ್ದ ಪ್ರೀತಿಯೇ ಕಾರಣ. ಅಂದ್ರೆ ತುಂಬಾ ಆಳವಾಗೇ ಪ್ರೀತಿಸುತ್ತಿದ್ದ. ಈ ಪ್ರೀತಿನೇ ಹಾಗಲ್ವ ಸ್ವಾಮಿ? :)

ಬರಬರುತ್ತಾ ನನಗೆ ಅವನಿಂದ ಆಕೆ ಬದಲಾಗ್ತಿರೋ ರೀತಿಯ ಮಾತು ಕೇಳಿಸ್ತಾಬಂತು. ನಾನು ಸ್ವಲ್ಪ ಅವಕ್ಕಾದೆ! ಅರರೆ, ಏನಿದು ಹುಡುಗಿ ತನ್ನ ಸಂಯಮ ಕಳೆದುಕೊಂಡ್ಳ ಇಷ್ಟುಬೇಗ ಅನ್ನಿಸ್ತು. ಇದರಬಗ್ಗೆ ಯೋಚಿಸ್ತಾ ಇದ್ದೆ. ಅದೇಸಮಯಕ್ಕೆ ಮೇಲೆಹೇಳಿದ ಹಾಡಿನ ಸಾಲುಗಳು ನನ್ನ ಹಾಗೇ ಹಿಡಿದಿಟ್ಟವು. ಈಗ ಈ ಸಾಲುಗಳಿಗೆ ನನ್ನ ಗೆಳೆಯ ಮಹೇಶನೇ ನಿದರ್ಶನವಾಗಿದ್ದ. ಅವನ ಗೆಳತಿ ಅವನನ್ನ ಅವನ ಗೊಂದಲಗಳಿಂದ ಹೊರಕ್ಕೆ ತರೋಕ್ಕೆ ಹೋಗಿ ಅವಳೇ ಬಿದ್ಲ ಅಂತ ಅನ್ನಿಸ್ತಿತ್ತು. ಹೌದು, ಅವಳು ಈಗ ಜಾರಿ ಬಿದ್ದಿದ್ಲು! ಆದ್ರೆ ಮೊದಲಿಂದ ಅವಳು ಅದಕ್ಕೆ ಅವಳ ಮನಸ್ಸನ್ನು ಸುಲಭವಾಗಿ ಬಿಟ್ಟಿರಲಿಲ್ಲವಾದ್ದರಿಂದ ಸ್ವಲ್ಪ ಕಷ್ಟ ಪಡುತ್ತಿದ್ಲು. ಒಮ್ಮೆ ಒಪ್ಪಿಕೊಂಡ್ರೆ ಮತ್ತೊಮ್ಮೆ ಬೇಡ ಅಂತಿದ್ಲು, ಮಗದೊಮ್ಮೆ ನನಗೆ ಗೊತ್ತಾಗ್ತಿಲ್ಲ ನಾನೇನ್ಮಾಡ್ತಿದ್ದೀನಿ ಅಂತಿದ್ಲು. ತಲೆಕೆಟ್ಟು ಹಲವಾರು ಸಾರಿ ತನ್ನ ಅಶ್ರುತರ್ಪಣ ಮಾಡಿದ್ಲು.

ಇಷ್ಟೆಲ್ಲಾ ಆಗಿದ್ದು ಕೇವಲ ಮುವ್ವತ್ತು ದಿನಗಳಲ್ಲಿ! ನಾನು ಹಾಗೇ ಯೊಚಿಸಿದೆ,ಅಷ್ಟು ಗಿದ್ದ ಹುಡುಗಿ ಯಾಕೆ ಮರುಳಾದ್ಲು ಮತ್ಯಾಕೆ ಗೊಂದಲಕ್ಕೆ ಬಲಿಯಾದ್ಲು ಅಂತ. ಅವಳು ಕೆಲಸದ ನಿಮಿತ್ತ ನಾವಿದ್ದ ಊರಿಗೆ ಬಂದಿದ್ಲು ತನ್ನ ಮನೆಯವರನ್ನೆಲ್ಲಾ ಬಿಟ್ಟು. ಈಲ್ಲಿ ಅವಳಿಗೆ ಹತ್ತಿರವಾಗಿ ಯಾರೂ ಇರಲಿಲ್ಲ. ಅವಳ ಮನಸ್ಸಿನಲ್ಲಿದ್ದದ್ದನ್ನು ಹಂಚಿಕೊಳ್ಳಲು ಯಾರೂ ಇರಲಿಲ್ಲ. ಮಹೇಶ ಅವಳ ಆ ಕೊರತೆಯನ್ನ ನೀಗಿಸಿದ್ದ. ಅವನ ಆ ಗುಣ ಅವಳನ್ನು ಅವನ ಹತ್ತಿರವಾಲು ಪ್ರೇರೇಪಿಸಿತ್ತು.

ಈಗ ಇಬ್ಬರೂ ಗೊಂದಲದಲ್ಲಿ ಮುಳುಗಿಹೋಗಿದ್ದಾರೆ. ಅವರಿಗೆ ಮುಂದೇನು ಅಂತ ಗೊತ್ತಗ್ತಿಲ್ಲ. ಇಬ್ಬರೂ ಬೇಕು-ಬೇಡಗಳ ನಡುವೆ ಸಂಘರ್ಷ ನಡೆಸುತ್ತಿದ್ದಾರೆ. ಯಾಕೆ ಯೋಚನೆ? ಮೇಲಿರೋ ಸೂತ್ರಧಾರ ಎಲ್ಲರಿಗೂ ದಾರಿ ತೋರಿಸ್ತಾನೆ ಅಲ್ವ? ಹೌದು. ಆವನೇ ಒಂದು ದಾರಿ ತೋರಿಸ್ದ. ಆಕೆಗೆ ಅವಳ ಅಪ್ಪ-ಅಮ್ಮ ಇದ್ದ ಊರಿನಲ್ಲೇ ಕೆಲಸ ಸಿಕ್ತು. ಬೇರೆ ದಾರಿಯೇ ಇಲ್ಲ. ಅವಳು ಹೊರಟಳು. ಹೋದ ಸ್ವಲ್ಪ ದಿನದಲ್ಲೇ ಇವರಿಬ್ಬರ ಮಧ್ಯದ ದೂರ ಇವರಿಗೆ ಒಂದು ನಿರ್ಧಾರ ಮಾಡೊಕ್ಕೆ ಸಹಾಯ ಮಾಡ್ತು. ಇಬ್ಬರೂ ಯಾವುದೇ ನಿರ್ಧಾರ ಒಟ್ಟಿಗಿದ್ದಾಗ ತಗೊಂಡಿಲ್ದೇಇದ್ದೆದ್ರಿಂದ ಭೌತಿಕವಾಗಿದ್ದ ದೂರ ಮನಸ್ಸುಗಾಳಿಗೂ ಆಯ್ತು. ಇಬ್ರೂ ನಿಜವನ್ನು ಬೇಗ ಅರ್ಥಮಾಡಿಕೊಂಡ್ರು! ಈಗಲೂ ಒಳ್ಳೇ ಸ್ನೆಹಿತರಾಗಿದ್ದಾರೆ. ತಮ್ಮ ಮುಂದಿರೋ ಜೀವನವನ್ನ ಎದುರಿಸಲು ಮತ್ತೆ ತಮ್ಮ ತಮ್ಮ ದಾರಿಗಳಿಗೆ ವಾಪಸ್ ಆಗಿದ್ದಾರೆ!

ಮಹೇಶ ಅವಳನ್ನ ಬಿಡಲ್ಲ ಆಂತಿದ್ದ. ಬಿಟ್ಟಿರಕ್ಕೆ ಆಗಲ್ಲ ಅಂತಿದ್ದ. ಈಗ ಹೊರಗೆ ಬಾಂದಿದ್ದಾನೆ. ಕಾಲಕ್ಕೆ ಏನನ್ನಾದರೂ ವಾಸಿಮಾಡೊ ತಾಕತ್ತಿದೆ ಅಲ್ಲವೆ?

Thursday, August 02, 2007

ಆಸೆ... ನೂರು ಆಸೆ...

ಎಷ್ಟು ಆಸೆ ಒಳ್ಳೆಯದು?
ಅದಕ್ಕೂ ಮೊದಲು ಯೋಚಿಸಬೇಕಾದದ್ದು - ಆಸೆ ಪಡುವುದು ಒಳ್ಳೆಯದೆ?

ನನ್ನನ್ನ ಕೇಳಿದರೆ, ಆಸೆ ಪಡಬೇಕು ಸ್ವಾಮಿ. ಆಸೆ ಇಲ್ಲದಿದ್ರೆ ಜೀವನದಲ್ಲಿ ಏನಿದೆ? ಇವನೇನು ದೊಡ್ಡಮನುಷ್ಯ ಆಸೆ ಬಗ್ಗೆ ಮಾತಾಡ್ತಿದ್ದನೆ ಅನ್ನಬೇಡಿ. ನಾನೇನು ದೊಡ್ಡವನಲ್ಲ. ಆದ್ರೆ ಆಸೆ ಅನ್ನೋದು ಎಲ್ಲರಿಗೂ ಹತ್ತಿರದ ವಿಷಯ. ಹಾಗಾಗಿ ನನ್ನ ಅನಿಸಿಕೆ ಹೇಳ್ತಿದ್ದೀನಿ ಅಷ್ಟೆ. ಯಾರಿಗೆ ಆಸೆ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ಇದೆ. ಎಲ್ಲಾರೂ ಒಂದಲ್ಲ ಒಂದು ರೀತಿಯಲ್ಲಿ ಆಸೆಗೊಳಗಾಗಿಯೇ ಇರುತ್ತಾರೆ. ನೀವು ಬುದ್ಧ ಅಂತ ಪ್ರಶ್ನಿಸಬಹುದು. ಅವನಿಗೂ ಒಂದು ಆಸೆ ಇತ್ತು - ಪ್ರಪಂಚದವರೆಲ್ಲರಿಗೂ ’ಆಸೆ ಅಂದ್ರೇನು, ಅದರ ಬಗ್ಗೆ ತಿಳಿಸಿಕೊಡಬೇಕು’ ಅಂತ. ’ಆಸೆಯೇ ದುಃಖಕ್ಕೆ ಮೂಲ’ ಅನ್ನುವ ಅವನ ಬೋಧನೆ ಎಲ್ಲರಿಗೂ ಅರ್ಥವಾಗಬೇಕು ಅಂತ :). ಬುದ್ಧ ಹೇಳಿದ ಆಸೆಗೂ ನಾವೆಲ್ಲಾ ಸಾಮಾನ್ಯವಾಗಿ ಇಟ್ಟುಕೊಂದಿರೋ ಆಸೆಗೂ ವ್ಯತ್ಯಾಸವಿರಬಹುದು. ಆದು ಬಿಡಿ.

ಆಸೆ ಇದ್ರೇನೆ ಜೀವನದಲ್ಲಿ ನಾವೆಲ್ಲಾ ಏನಾದ್ರೂ ಸಾಧಿಸಕ್ಕೆ ಸಾಧ್ಯ ಅನ್ನೋದು ನನ್ನ ಅನಿಸಿಕೆ. ಜೀವನದಲ್ಲಿ ಒಂದು ’ಗುರಿ’ ಇಟ್ಟುಕೊಬೇಕು ಅಂತ ನಮ್ಮ ದೊಡ್ಡವರು ಹೇಳಿದ್ದು ಅದನ್ನೇ. ಅಲ್ಲಿ ಗುರಿಯೆ ನಮ್ಮ ಆಸೆ. ಅದನ್ನ ನಾವು ಏನಾದ್ರು ಮಾಡಿ ಸಾಧಿಸಬೇಕು. ಸಾಮಾನ್ಯವಾಗಿ ನಾವೆಲ್ಲ ಪ್ರಸಕ್ತ ಆಸಕ್ತಿಯೇನಿದೆಯೊ ಅದರಸಂಬಂಧವಷ್ಟೇ ಗುರಿ ಇಟ್ಟಿರುತ್ತೇವೆ. Schoolನಲ್ಲಿ ಓದೋರಿಗೆ ಒಳ್ಳೆ collegeನಲ್ಲಿ ಓದೋ ಗುರಿ, collegeನಲ್ಲಿರೋರ್ಗೆ ಒಳ್ಳೆಕಡೆ ಕೆಲಸ ಮಾಡೊ ಗುರಿ, ಆಮೇಲೆ ಅದರಲ್ಲಿ ಮುಂದೆ-ಮುಂದೆ ಹೋಗಿ ಹೆಚ್ಚು-ಹೆಚ್ಚು ಹಣ ಸಂಪಾದಿಸೊ ಗುರಿ.. ಹೀಗೆ ಹಲವಾರು ಇರುತ್ತೆ. ಅದೇ ಗುರಿ/ಆಸೆ ನಮ್ಮ ಶಕ್ತಿಗೆ ಮೀರಿ ಇಟ್ಟುಕೊಂಡಾಗ ನಾವೆಲ್ಲ ಸಾಕಷ್ಟು ಸಾಧಿಸಲು ಸಾಧ್ಯ. ಅದೇ ನಮ್ಮ ಶಕ್ತಿಗೆ ವಿಪರೀತ ಮೀರಿದರೆ? ನಮ್ಮ ಆಸೆ ನಮ್ಮ ಮಿತಿಯಲ್ಲಿದ್ದರೆ ಒಳ್ಳೆಯದು. ಆಗ ನಾವು ನಮ್ಮ ಗುರಿ ತಲುಪಲು ಪ್ರತಿಯೊಂದು ಹೆಜ್ಜೆ ಹೇಗಿಡಬೇಕು ಅಂತ planಮಾಡಬಹುದು. ಮತ್ತೆ ಅದೇ plan ಪ್ರಕಾರ ಹೆಜ್ಜೆ ಇಡಬಹುದು. ಪ್ರತೀ ಹೆಜ್ಜೆಯಲ್ಲೂ ಮುಂದಿನ ಹೆಜ್ಜೆಗೆ ತಲುಪಲು ಆಸೆ ಇರಬೇಕು. ಆಗಷ್ಟೇ ಮುಂದಿನ ಹೆಜ್ಜೆ ತಲುಪಲು ಸಾಧ್ಯ. ಪ್ರತಿಯೊಂದು ಹೆಜ್ಜೆಗೂ ಅದರದ್ದೇ ಆದ ಸ್ವರೂಪ ಇದೆ. ಅದಕ್ಕೇ ಆ ಗುರಿ ತಲುಪಲು ಅದರದೇ ಸಮಯ ತಗೋತಿವಿ. ಅದನ್ನ ಮುಗಿಸಿ ಮುಂದೆ ಹೋಗಬೇಕು. ಆದರೆ ಮೊದಲನೇ ಹೆಜ್ಜೆ ಇಂದ ಐದನೇ ಹೆಜ್ಜೆಗೆ ಅನಾಮತ್ತಾಗಿ ಹೋಗಲು ಸಾಧ್ಯನ? ಸಾಧ್ಯ ಇರಬಹುದು - ಆದ್ರೆ ಸ್ವಲ್ಪ ಕಷ್ಟಕರ. ಅದು ಅವರವರ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತೆ. ತುಂಬಾ ಅಭ್ಯಾಸ ಮಾಡಬೇಕು. ಕ್ರಮೇಣ ನಮ್ಮ ಸಾಮರ್ಥ್ಯದ ಜೊತೆಜೊತೆಗೆ ನಮ್ಮ ಭರಾಟೆ ಹೆಚ್ಚಿಸಿಕೊಳ್ಳಬೇಕು. ಆಗ ಒಮ್ಮೆಗೇ ಐದು ಹೆಜ್ಜೆ ಮುಂದೆ ಹೋಗಬಹುದು. ಇಲ್ಲದಿದ್ದಲ್ಲಿ ಮಧ್ಯದಲ್ಲಿ ಬೀಳುವ ಸಾಧ್ಯತೆಗಳೇ ಹೆಚ್ಚು. ಅದು ಸರಿ! ಏನೂ ತೊಂದರೆಯಿಲ್ಲ. ಯಾಕಂದ್ರೆ ಮುಂದೆನೇತಾನೆ ಇದ್ದೀವಿ. ಮತ್ತೆ ಮುಂದುವರಿಸೋಣ. ಆದ್ರೆ ಎರಡು ಹೆಜ್ಜೆಗಳ ಮಧ್ಯ ಬಿದ್ದು ಹಿಂದೆ-ಮುಂದೆ ಹಿಡಿಯಲು ಆಗದೇ ಪೆಟ್ಟಾದ್ರೆ? ಅಲ್ಲಿದೆ ಸ್ವಾಮಿ ತೊಂದರೆ! ಅದಕ್ಕೇ ಸರಿಯಾದ planningಬೇಕು. ಜೊತೆಗೆ ಸಾಧನೆ. ನಮ್ಮ ಆಸೆ ಏನಿದೆ ಅದು ನಮ್ಮ ಶಕ್ತಿಗೆ ಅನುಗುಣವಾಗಿದ್ದರೆ ಕ್ಷೇಮ. ಇಲ್ಲದಿದ್ದಲ್ಲಿ ಕಷ್ಟವಾದೀತು. ಎರಡು ಹೆಜ್ಜೆಗಳ ಮಧ್ಯ ಬಿದ್ದು ಪೆಟ್ಟಾಗಿ ಮತ್ತೆ ಎದ್ದು ನಮ್ಮ ಹಾದಿ ಸೇರಲು ತುಂಬಾ ಸಮಯ ತಗೊಂಡಾಗ ನಮ್ಮ ಗುರಿ ಮುಟ್ಟಲು ನಾವಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತೆ. ಹಾಗಾಗಿ ಕ್ರಮಬದ್ಧವಾಗಿ ಮುಂದುವರಿಯುವುದು ಮುಖ್ಯ.

ನಾನು ಇದನ್ನ ಯಾಕೆ ನಿಮ್ಮಜೊತೆ ಹಂಚಿಕೊಬೇಕು ಅಂದುಕೊಂಡೆ ಅಂದ್ರೆ, ನಾವೆಲ್ಲಾ ಆಸೆಬುರುಕರೇ. ಆಸೆಯೇ ನಮ್ಮ ಜೀವಾಳ - ಅದರಲ್ಲೂ ಮಧ್ಯಮವರ್ಗದ ಜನರಿಗೆ. ಕೆಲವೊಮ್ಮೆ ನಮ್ಮ ಆಸೆಗಳು ಮಿತಿಮೀರಿ ಹೊಗುತ್ತವೆ. ಅದು ಹೇಗೆ ಅಂತಿರ? ನಮಗೆ ನಮ್ಮದೇ ಆಸೆಗಳು ಒಂದಾದ್ರೆ ಮತ್ತೊಂದು ವರ್ಗ - ಬೇರೆಯವರನ್ನು ನೋಡಿ ಬರೋದು. ಸಾಮಾನ್ಯವಾಗಿ ಸುಮಾರು ನಮ್ಮದೇ ಸುತ್ತ ಮುತ್ತ, ಸ್ನೇಹಿತರು, ಗುರುತು-ಪರಿಚಯ ಇರೋರನ್ನೆಲ್ಲಾ ನೋಡಿ ನಮ್ಮಲ್ಲೇ ಒಂದು ಪ್ರಚಂಡ ಆಸೆ ಅಂಕುರಿಸುತ್ತೆ. ಇಲ್ಲಿ ನಾವು ನಮ್ಮನ್ನ ಅವರ ಜೊತೆ ಹೋಲಿಸಿ ನೋಡಿ ನಾವೂ ಯಾಕೆ ಅವರಂತೆನೇ ಇರಬಾರದು ಅಂತ ಅನ್ನಿಸೋದು ಸಹಜ. ಹೋಲಿಸುವ ಮನೋವೃತ್ತಿ ಆಸೆಯ ಮತ್ತೊಂದು ರೂಪ ಅನ್ನಬಹುದೇನೊ. ಆಸೆ ಇರತ್ತೊ ಬಿಡತ್ತೊ, ಒಮ್ಮೆ ನೀವು ಮತ್ತೊಬ್ಬರ ಜೊತೆ compareಮಾಡಿ ’ನಾನೇನು ಕಮ್ಮಿ’ ಅನ್ನೊ ಮನೋವೃತ್ತಿಗೆ ಬಂದ್ರೊ, ಕೆಲಸ ಕೆಟ್ಟಿತು ಅಂತಂದ್ಕೊಳ್ಳಿ. ಆದು ನಮ್ಮ ಶಕ್ತಿಯ ಒಳಗಿದ್ದರೆ ಏನೂ ತೊಂದರೆಯಿಲ್ಲ ಬಿಡಿ. ಅದಲ್ಲದೆ ಇದ್ದಲ್ಲಿ ಮಾತ್ರ ಕಷ್ಟ. ಬರ್ಲಿ ಬಿಡಿ ಸ್ವಾಮಿ, ತಪ್ಪೇನು? ಮೇಲೆ ಹೆಳಿದಹಾಗೆ ಆಸೆ ಇಲ್ಲದಿದ್ರೆ ಜೀವನದಲ್ಲಿ ಏನಿದೆ; ಮುಂದೆ ಬರೋಕೆ ಆಸೆಪಡೋದು ಮುಖ್ಯ ಅಲ್ವ? ಹೌದು ಸ್ವಾಮಿ ಹೌದು. ಆದ್ರೆ ನಾನು ಹೆಳಿದ್ದು ಇಷ್ಟೆ. ನಮ್ಮ ಹೋಲಿಕೆ ಆರೋಗ್ಯಕರವಾಗಿರಬೇಕು. ಅದು ಯಾವಾಗಲೂ ಅಸೂಯೆ/ಜಿದ್ದೆನಿಂದ ಬಂದಿದ್ದಾಗಬಾರದು. ನನ್ನನ್ನ ಕೇಳಿದರೆ, compareರೇ ಮಾದಿಕೊಳ್ಳಬಾರದು. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮುಂದಿರುತ್ತೇವೆ; ಒಳ್ಳೆಯ ಗುಣಗಳಿರುತ್ತವೆ.. ನಮ್ಮ comparison ನಮ್ಮ ಬೆಳವಣಿಗೆಗೆ ಪೂರಕವಾಗಿದ್ದರೆ ಚೆನ್ನ. ಅಲ್ಲದಿದ್ದರೆ - ನನಗೆ ನನ್ನಡದ ಒಂದು ಗಾದೆ ಜ್ಞಾಪಕಕ್ಕೆ ಬರ್ತಿದೆ: ನವಿಲು ಕುಣಿಯಿತು ಅಂತ ಕೆಂಬೂತ ಪುಕ್ಕ ಕೆದರಿಕೊಳ್ತು ಅಂತ. ಹಾಗಾಗತ್ತೆ! ಅದಕ್ಕೆ ನಾವು ಅವಕಾಶ ಕೊಡಬಾರದು ಅಲ್ವ? ಯಾರಿಗೆ ಎಷ್ಟು ಲಭ್ಯವೋ ಅಷ್ಟೇರೀ ಸಿಗೋದು. ಹಾಗಂತ ಕೈ ಕಟ್ಟಿ ಕುಳಿತುಕೊಳ್ಳಿ ಅಂತ ಹೇಳ್ತಿಲ್ಲ. ನಮ್ಮ ಪ್ರಯತ್ನ ನಾವು ಮಾಡಲೇ ಬೇಕು. ಹಾಗೆ ಮಾಡಿಯೂ ನಮ್ಮ ಆಸೆ ನೆರವೇರದಿದ್ದಲ್ಲಿ ಅದನ್ನ ಅಲ್ಲಿಗೇ ಬಿಟ್ಟು ಮುಂದೆ ನಡೆಯ ಬೇಕು - ಮತ್ತೊಂದು ಆಸೆ ಕಟ್ಟಿ. ಯಾವಾಗಲೂ ಮುಂದೆ ನೋಡಿ.. ಹೀಗಾಯ್ತಲ್ಲ ಅಂತ ತಲೆ ಮೇಲೆ ಕೈಹೊತ್ತು ಕೂರಬೇಡಿ.

ಆಸೆ ಪಡೋಣ. ಆದ್ರೆ ನಮ್ಮ limits ಗೊತ್ತಿರಲಿ.
ನಮ್ಮನ್ನ ಹೋಲಿಸಿಕೊಳ್ಳೋಣ. ಆದ್ರೆ ಅದು ಆರೋಗ್ಯಕರವಾಗಿರಲಿ (healthy comparison).
ಯಾವಾಗಲೂ factsನ ಒಪ್ಪಿಕೊಳ್ಳೊ ಮನೋಭಾವ ಬೆಳೆಸಿಕೊಳ್ಳೋಣ.
ಏನಂತೀರ??

Wednesday, July 25, 2007

Amazing Biker

I came across this amazing video while searching for the original video of the famous 'Dhoom' title song (this song is inspired by Jesse Cook's 'Mario takes a walk')... The background music in this video is the song I was searching for... Have a look at it:

ಕೃತಿಚೌರ್ಯ...

’ಲಂಕೆಶ್ ಪತ್ರಿಕೆ’ ಚಿತ್ರದ "ನೋಡ್ಕೊಂಡ್ ಬಾರೊ ಅಂದ್ರೆ" ಹಾಡು ಕೇಳಿದ್ದೀರ ಅಲ್ವ? ಚೆನ್ನಾಗಿದೆ ಅಲ್ವ? ಆ ಹಾಡು ಅದಕ್ಕೆ ಸಂಗೀತ ಕೊಟ್ಟ Babji-Sandeepನ ಸ್ವಂತದ್ದು ಅಂದುಕೊಂಡಿದ್ದೀರ? ಅಲ್ವೇಅಲ್ಲ. ವೀಡಿಯೊ ಸಮೇತ ಒಂದು ಹಾಡು ಕೇಳಿಸ್ತಿನಿ, ಕೇಳಿ-ನೋಡಿ..



ನಮ್ಮವರ ಹಾಡು ಕೇಳಿ ಇಲ್ಲಿ.

ಈಗ ಹೇಳಿ. :)
ಆ ಹಾಡು, ಟರ್ಕಿಯ ಹಾಡುಗಾರ ಟರ್ಕನ್ (Tarkan) ಅನ್ನೋಂದು. ಅದನ್ನ ಎತ್ತಿರೋದು ಅವನ 'Olurum Sana' ಅನ್ನೊ ಆಲ್ಬಂ ನಿಂದ.

ನಮ್ಮವರೊಬ್ಬರೇ ಅಲ್ಲ, ಹಿಂದಿಯ ಭಯಂಕರ ಹಿಟ್ ಆಗಿರೋ ಪ್ರೀತಮ್ ಕೂಡ. ಪ್ರೀತಮ್ ಸಂಗೀತ ಕೊಟ್ಟಿರೋ ’ಧೂಂ’ ಚಿತ್ರ ಗೊತ್ತಲ್ವ? ಅದರಲ್ಲಿರೊ ಹಾಡು ’ದಿಲ್ಬರ್ ಶಿಕಿದುಂ ಶಿಕಿದುಂ’ ಕೂಡ ಟರ್ಕನ್ ನದ್ದೇ. ಈದು ನೋಡಿ-ಕೇಳಿ:



ಈಗ Dhoom ಚಿತ್ರದ್ದು:


’ನಾನು ಸ್ವಂತವಾಗಿ compose ಮಾಡಿದ್ದಲ್ಲ’ ಅಂತ ಹೇಳೋಕೆ ನಮ್ಮವರಿಗೆ ಕಷ್ಟನ? ಇಲ್ಲಾಂದ್ರೆ ಯಾಕೆ original artistಗೆ ಸಿಗಬೇಕಾದ fame ಇವರಿಗೆ? ತಮ್ಮ albumsನಲ್ಲಿ ಮೂಲ ಎಲ್ಲಿಯದು ಅಂತ ಬರೆದರೆ ಇಲ್ಲಿಗೆ ಆಗೊಹಾಗೆ ಬದಲಿಸಿದ್ದಕ್ಕೆ ನಾವೂ ಕೂಡ ಖುಷಿಯಿಂದನೇ ಕೆಳ್ತಿವಿ ಮತ್ತೆ ಅವರ ಸಾಚಾತನವನ್ನ ಗೌರವಿಸುತ್ತೀವಿ ಕೂಡ.

ಹೇಗೇ ಬೇಕಾದಷ್ಟು ಹಾಡುಗಳನ್ನ ಬೇಕಾದಷ್ಟು ಜನ copy ಮಾಡಿದ್ದಾರೆ. ಇಂತಹ ಕೃತಿ ಚೌರ್ಯಗಳನ್ನೆಲ್ಲಾ ಒಂದು website ಪಟ್ಟಿ ಮಾಡಿದೆ. ಈ ವೆಬ್ಸೈಟ್ ನೋಡಿ ಗೊತ್ತಾಗುತ್ತೆ.

Monday, July 23, 2007

All new Indian sports bike - Pulsar 220

ಏನ್ರಿ ಇದು.. Super & Chetak ಅಂತ ಸ್ಕೂಟರ್ ಮಾರ್ತಿದ್ದವರು, ಈಗ super bikes ಬಿಡ್ತಿದ್ದಾರೆ. :) It is good indeed. I like the way Bajaj has positioned itself in the Indian Bike industry. Not only Bajaj, TVS too is releasing good bikes. It is nice to feel they are our own Indian great bikes. We never had bikes with more than 100cc a decade ago with affordable price, though there were Bullets, Road Kings, and Yamaha 350s... Cruiser bikes and sports bikes are in thing now on India roads.. More of Avenger, Enticers.. But as Bajaj has introduced new more power sport bikes: Pulsar 200 and Pulsar 220 with DTS-Fi technology. Pulsar 220 is awesome! :) It is a power-well, I should say on Indian roads..



It looks great... And has great features too! But there is a 5-6 months waiting time, I believe. It costs around 91 grand in Bangalore.. Whatever, it is a bike to have man now!! If you are a sports bike fan, you should go for it.. :)

To know more about technical and other details, visit their website

I've been bitten...

ನಾನು carಗೆ upgrade ಮಾಡಿಕೊಂಡ ಮೇಲೆ bike ನ ಓಡಿಸಿಯೇ ಇಲ್ಲ. ಆದ್ರೆ ಈಗ ಯಾಕೋ ಮತ್ತೆ bike ಓಡಿಸೊ ಹುಚ್ಚು ಬಂದಿದೆ.. ಆದರಲ್ಲೂ Curiser Bikeದು. Frankly this is after seeing people in US. They go around on Harley Davidson, cruising all along in valleys.. Now I'm crazy about it.. I've to admit it. :)

ಹಾಗೇ ಯಾವುದು ಒಳ್ಳೇದು ಅಂತ ಯೋಚಿಸಿದ್ರೆ, ನಮ್ಮಲ್ಲಿ ಇನ್ನೂ cruising bug ಎಲ್ಲಾರಿಗೂ ಹಿಡಿದಿಲ್ಲ. ಹಿಡಿದಿರೋದು ಮಾತ್ರ ಸ್ವಲ್ಪ Bullet ಇರೋರಿಗೆ. ಈಗೀಗ ಎಲ್ಲಾರಿಗೂ cruising ಹುಳ ಕಡಿತಾಇದೆ ಅನ್ನಿಸುತ್ತೆ... ಅದಕ್ಕೆ ಈಗ Bajaj Avenger ಚೆನ್ನಾಗಿ ಓಡುತ್ತಿದೆಯಂತೆ.. I like this bike. Though Bullet has more power to be a cruiser, not everyone can afford it for its high (??) maintenance costs. ಎಲ್ಲಾವುದರಲ್ಲೂ Avenger ಸೈ ಅನ್ನಿಸಿಕೊಂಡಿದೆ.. ಆದನ್ನೇ ನಾನೂ ತಗೊಳೊ ಯೋಚನಯಲ್ಲಿದ್ದೀನಿ.


ಈಗ bile ತಗೊಂಡು ಓಡಡ್ತಿನಿ ಅಂದ್ರೆ ನಂಗೆ ತುಂಬಾಜನ ನಿಜವಾಗ್ಲೂ ಹುಚ್ಚು ಅಂತಾರೆ.. ಆದ್ರೆ ನಾನೇ ಹೇಳಿದಂಗೆ, ನನಗೀಗ ಅದರ ಹುಚ್ಚು ಹಿಡಿದಿದೆ... :) ನಾನಾಗ್ಲೆ ಅದರಮೇಲೆ ಹೋಗ್ತಿರೋಹಾಗೆ ಕನಸು ಕಾಣ್ತಿದ್ದೀನಿ.. ನಾನು (ಹಿಂದೆ ನನ್ನ better half), ಜೊತೆ ಯಲ್ಲಿ ನನ್ನ friends ಜೊತೆಯಲ್ಲಿ ದೂರ ಹೋಗ್ತಿದ್ರೆ... ಅಹಾ...!!!! Wait Sree, you are not yet there!! ;-)

Friday, July 20, 2007

(Americaದ) beggars! - Part II

ನನ್ನ "America ದಲ್ಲಿ ಕಸ??!!! ಆಯ್ಯಯ್ಯೊ beggars!!!" ಬಗ್ಗೆ ಓದಿದ ನನ್ನ ಒಬ್ಬ ಸ್ನೆಹಿತ ನನಗೆ e-mailನಲ್ಲಿ (I don't know why he didn't write here) ಹೆಳ್ದ:

’ಆಮೇರಿಕದಲ್ಲಿ, ಅದರಲ್ಲೂ Californiaದಲ್ಲಿ ಸರ್ಕಾರ ಮನೆಇಲ್ಲದವರನ್ನು ದುಡ್ಡುಕೊಟ್ಟು ನೋಡಿಕೊಳ್ಳುತ್ತೆ. ಆದಕ್ಕೇ ತುಂಬಾ ಭಿಕ್ಷುಕರನ್ನು ಅಂಥಾ ದೊಡ್ಡ ಊರುಗಳಲ್ಲಿ ನೋಡಬಹುದು’ ಅಂತ. ಸರಿ ಸ್ವಾಮಿ. ಮನೆ ಇಲ್ಲದವರಿಗೆ ಸರ್ಕಾರ ನೋಡಿಕೊಳ್ಳೋದು ತುಂಬ ಒಳ್ಳೆಯ ವಿಷ್ಯ. ಆದರೆ, ಅಲ್ಲಿನ ಜನ ಬೇರೆ ದೇಶ ಅಥವಾ ಊರುಗಳಲ್ಲಿ ಭಿಕ್ಷುಕರನ್ನು/ಮನೆಇಲ್ಲದವರನ್ನು ತೀರ ಕಡೆಯಾಗಿ ನೋಡೊದ್ಯಾಕೆ? ಅವರ ದೇಶದಲ್ಲೇನು ಇಲ್ವೇ ಇಲ್ವೆ? Photo ತೆಕ್ಕೊಳ್ಳೋದೇನು, India ಅಂದ್ರೆ ಬಡ ದೇಶ ಅಂತ ಮಾತಾಡೋದೇನು... ಮನುಷ್ಯ ಅಂದಮೇಲೆ ಎಲ್ಲರಹತ್ರ ಚೆನ್ನಾಗೇ ದುಡ್ಡಿರತ್ತೆ ಅಂತ ಹೇಳೊಕೆ ಸಾಧ್ಯಾನ? ನಾನೂ ಒಪ್ಪುತ್ತೀನಿ, ಇಲ್ಲಿ ಸ್ವಲ್ಪ ಜಾಸ್ತಿನೇ ಇರಬಹುದು. It is easy money!!

Jefferson Streetನಲ್ಲಿ ಒಬ್ಬ ಕುರುಚಲು ಗಡ್ಡಧಾರಿ ಒಂದು ರಟ್ಟು ಹಿಡಿದು ಕೂತಿದ್ದ - which read: "No lies, it is all for a bottle of beer!" :)

ನಾನೂ ಕೂಡ ಭಿಕ್ಷೆಬೇಡುವುದನ್ನ encourage ಮಾಡೊಲ್ಲ. ನೀವು ಬೆಂಗಳೂರಿನ ಹಲವಾರು intersectionಗಳಲ್ಲಿ ಸಿಗ್ನಲ್ಗಾಗಿ ಕಾಯೋವಾಗ ಅಲ್ಲಿನ ಕೆಲವು ’well to do' (I remember a couple of TOI articles about rich beggars :) ) ಭಿಕ್ಷುಕರನ್ನ ನೋಡಿರಬಹುದು. ಬೇಡುವಾಗ ಕುಂಟುವ ಶೈಲೀಲಿ ನಿಮ್ಮ ಹತ್ರ ರೋಡಿನ ಮಧ್ಯ ಬಂದವರು green signal ಬಂದ ತಕ್ಷಣ ಎಷ್ಟು ಬೇಗ ಓಡುತ್ತಾರೆ ಅಂತ. ಇಂಥವರಿಗೆ ನಮ್ಮ ಸರ್ಕಾರನೂ ದುಡ್ಡು ಕೊಡೋಕೆ ಶುರುಮಾಡಿದ್ರೆ, ದೇವರೇ ಗತಿ. ಆದ್ರೆ, ಇಂಥವರಿಗೆ (ಬಡಬಗ್ಗರಿಗೆ) ನಮ್ಮ ಸರ್ಕಾರ ಕೂಡ ತುಂಬಾ ಸಹಾಯ ಮಾಡಿದೆ ಅಂತ ಕೇಳಿದ್ದೀನಿ - ಅದರ ಬಗ್ಗೆ ತುಂಬ ಗೊತ್ತಿಲ್ಲ ಹಾಗಾಗಿ comment ಮಾಡೋದು ಬೇಡ. ಆದ್ರೆ ಯಾರಿಗೆ ಬೇಡ ಸ್ವಾಮಿ ಈ ಸುಲಭದ ದುಡ್ಡು? ಕೆಲವರು ತಮ್ಮ ಸ್ವಾಭಿಮಾನ ಬಿಟ್ಟು ಬೇರೆ ದಾರಿಯೇ ಇಲ್ಲದೆ ಭಿಕ್ಷೆ ಬೇಡುತ್ತಿರಬಹುದು. ನಿಜವಾದ ನಿರ್ಗತಿಕರನ್ನು ಕಂಡುಹಿಡಿಯೋದು ಹೇಗೆ? ಬೇರೆಯವರಿಂದ ನಿಜವಾದ ಬಡವರಿಗೂ ಸಹಾಯ ಸಿಗೋದು ಕಡಿಮೆಯಾಗಿರಬಹುದು.. ಅಲ್ವೆ?

Thursday, June 21, 2007

America ದಲ್ಲಿ ಕಸ??!!! ಆಯ್ಯಯ್ಯೊ beggars!!!

ಆಯ್ಯೊ!! ಇದು ಸಾಧ್ಯನೇಂನ್ರಿ ಅಂತಿರಾ?? ಏಲ್ಲಾ ಸಾಧ್ಯ ಸ್ವಾಮಿ. Most of the times when you think of America what comes to your mind is that it is very clean, advanced, standard of living is very high etc. ಆದ್ರೆ dirty ಜನಾಂಗ ಇಲ್ಲ ಅಂತಲ್ಲ.. poverty ಇಲ್ವೇ ಇಲ್ಲ ಅಂತಲ್ಲ.

ಮೊನ್ನೆ famous San Franciscoಗೆ ಹೋಗಿದ್ವಿ. Civic Centre ಹತ್ರ ಇದ್ದಾಗ ಅಲ್ಲಿ ನೋಡಿದ ’sophisticated' ಭಿಕ್ಷುಕರನ್ನ ನೋಡಿ ಕೋಪ ಬಂದಿದ್ದು Indiaಕ್ಕೆ ಬಂದು Americaನ ಮನಸ್ಸಿಗೆ ಬಂದಂಗೆ ಹೊಗಳಿ Indianನ ತೆಗಳೊ ಭಾರತೀಯರ ಮೇಲೆ. ಅಲ್ಲಿ ಹಾಗೆ ಅಲ್ಲಿ ಹೀಗೆ ಅಂತ ಹೇಳೊ Indian, ಭಾರತಕ್ಕೆ ಬಂದಾಗ ಅವರು Americaದಲ್ಲಿದ್ದಾಗ ಹೇಗೆ behave ಮಾಡ್ತಿದ್ರೊ ಹಾಗೆ ಯಾಕೆ ಇರಲ್ಲ ಅನ್ನೋದೆ ನಂಗೆ ಯಕ್ಷಪ್ರಶ್ನೆ. Indiaಕ್ಕೆ ಬಂದು Americaನ ಹೊಗಳೋದಷ್ಟೆ ಗೊತ್ತು ಅವರಿಗೆ - ಅಲ್ಲಿ ಯಾವುದು ಒಳ್ಳೇದಿದೆ ಅದನ್ನ implement ಮಾಡಕ್ಕೆ ಏನು ಸಹಾಯ ಮಾಡ್ತಿದ್ದಾರೆ? ಉದಾ: Americaದಲ್ಲಿದ್ದಾಗ ಸರಿಯಾಗಿ lane ನಲ್ಲಿ ಹೊಗ್ತಾರೆ. ಅದೇ ವಾಪಸ್ ಊರಿಗೆ ಬಂದಾಗ ಹೆಂಗೇಂದ್ರೆ ಹಂಗೆ drive ಮಾಡ್ತಾರೆ. ದಾರಿಲಿ ಉಗೀತಾರೆ.. ಕಸ ಎಲ್ಲಂದ್ರಲ್ಲಿ ಹಾಕ್ತಾರೆ.. ಅದ್ಯಾಕೆ ಸ್ವಾಮಿ? ಅಲ್ಲಿ ತಪ್ಪು ಮಾಡಿದ್ರೆ ’ticket' ಅಂತ ನೂರಾರು ಡಾಲರ್ ದಂಡ ಕೊಡೊದು ತಪ್ಪಿಸಿಕೊಳ್ಳೊಕೆ ಸರಿಯಾಗಿರ್ತಾರೆ.. ಆದೆ ನಮ್ಮ ಊರಲ್ಲಿ ದಂಡ ಹಾಕಿದ್ರೆ ಅದರಲ್ಲೂ ಪೋಲೀಸ್ ಮಾಮನ್ಹತ್ರ ಚೌಕಾಸಿ ಮಾಡಿ ಅವರನ್ನೂ ದಾರಿ ತಪ್ಪಿಸ್ತಾರೆ. ಇಂಥವರ ರುಚಿ ತಿಂದು ನಮ್ಮ ಪೋಲೀಸ್ ಜನಾಂಗ ಅದನ್ನೇ continueಮಾಡಿ ಎಲ್ಲರಹತ್ರ ಬಯ್ಯಿಸ್ಕೊತಾರೆ. ಅದಿರ್ಲಿ. ವಾಪಸ್ ನಮ್ಮ topicಗೆ ಬರಣ.

ಈ photoನೋಡಿ. ನಿಜವಾಗಿ begಮಾಡುತ್ತಿರೊದನ್ನ ತೆಗೆದು postಮಾಡೊಣ ಅಂಸಿತ್ತು ಫಿರಂಗಿಯವರು ನಮ್ಮ ಊರಲ್ಲಿ ಭಿಕ್ಷುಕರ photoತಗೊಳೊ ಥರ. ಆದರೆ ಅವರಿಗೆ ಹಿಂಸೆ ಆಗಬಹುದು ಅಂತ ತೆಗಿಲಿಲ್ಲ. ಏನೇ ಆಗ್ಲಿ ಅವರು ’ಫಿರಂಗಿ’ಗಳೇ ಅಲ್ವ? :)



ಇಂಥದ್ದು San Francisco ನಂಥ ಜಾಗದಲ್ಲಿ ತುಂಬಾನೆ ಸಿಗತ್ತೆ. ಒಬ್ಬ binನಲ್ಲಿದ್ದ containers ಹುಡುಕಿ ಹುಡುಕಿ ಏನಾದ್ರು ಉಳಿದಿದ್ರೆ ಅದನ್ನ ಕುಡಿತಿದ್ದ. ಅದೂ ಒಂದು ಹನೀಕೂಡ ಬಿಡದಂಗೆ. ’ಒಂದು quarter (25 cents) ಕೊಡಿ’ ಅಂತ ಕೇಳೊರಿಗೆ ಲೆಕ್ಕನೇ ಇಲ್ಲ. ನನ್ನ ಸ್ನೇಹಿತ ಹೇಳಿದ - ನಾನು ಮುಂಚೆ ಇದ್ದ ಕಡೆ ತುಂಬಾ ಬಿಳಿಯರು ಭಿಕ್ಷುಕರನ್ನ ನೋಡ್ತಿದ್ದೆ, ಅದೇನೂ ದೊಡ್ಡ ವಿಷಯಅಲ್ಲ - ಅಂತ.

ಇನ್ನು ಕಸಕ್ಕೆ ಬರಣ. ಈ photo ನೋಡಿ.



ಇದು ಯಾವ ಜಾಗ ಅಂತಿರ? ಜಪಾನ್ ಟೌನ್ ಅಂತ ಇದೆ. ಆಲ್ಲಿ ’peace pagoda' tower ಇಟ್ಟಿದ್ದಾರೆ - ಜಪಾನ್ ದೇಶದವರು ಕೊಟ್ಟಿದ್ದಂತೆ. ಈ ಪಗೋಡ ನೊಡಕ್ಕೆ ಮೆಟ್ಟಿಲು ಹತ್ತೋ ಜಾಗದಲ್ಲಿದ್ದ ದೄಶ್ಯ. ಇಂಥವು ಕೂಡ ಬೇಕಾದಷ್ಟು.

PS: You must be thinking didn't I get anything good to write about America. Yes, the place where I stayed - Roseville, CA. It is a nice place, well organized, though it is not as big as LA, SF or NY. If I get time, I will write about that as well. :)

Friday, January 19, 2007

Better use of barricades!

ಕಳೆದ ಮಂಗಳವಾರ St. Marks Roadನಲ್ಲಿ ಊಟ ಮುಗಿಸಿ ವಾಪಸ್ officeಗೆ ಹೋಗುವಾಗ ಒಂದು ಒಳ್ಳೆ ದೃಶ್ಯ ನೊಡಿದೆ! ನಾನು ಮತ್ತು ನನ್ನ ಸಹೋದ್ಯೊಗಿ ತುಂಬಾ ಚಕಿತರಾದ್ವಿ. ಆದ್ರೂ curiosಆಗಿ ಅದರ photo ತಗೊಂಡ್ವಿ. ಆಗ ನನ್ನಹತ್ರ ಇದ್ದ camera ಅಂದ್ರೆ ನನ್ನ mobileದು ಮಾತ್ರ. ನೋಡಿ ಹೇಗಿದೆ ಅಂತ. ನಿಮಗೇನದರೂ ಇಂಥ ಸುಲಭ ಉಪಯೋಗದ ಉಪಾಯ ಹೊಳೆದಿತ್ತ?? :)



ನಮ್ಮ ಜನಕ್ಕೆ ಸ್ವಲ್ಪ ಅವಕಾಶ (ಜಾಗ) ಸಿಕ್ಕಿದರೂ ಅದನ್ನ ಚೆನ್ನಾಗಿ ಉಪಯೋಗಿಸಿಕೊಳ್ಳೂಉತ್ತಾರೆ ಅನ್ನೊದಕ್ಕೆ ಇದೊಂದು ಉದಾಹರಣೆ. ಇಲ್ಲಿ barricades ಹಾಕಿದ್ದು ವಾಹನ ಸಂಚಾರ ಸುಗಮವಾಗ್ಲಿ ಅಂತ. ಆದ್ರೆ ಅದರ ಉಪಯೋಗ ಇನ್ನೂ ಸ್ವಲ್ಪ ಜಾಸ್ತಿನೆ ಅಯ್ತು ಇಲ್ಲಿ. ಆದ್ರೂ ಇಂಥ ಮುಖ್ಯ ರಸ್ತೆಲಿ ಹೀಗೆ ಮಾಡೊಕೆ ಅವಕಾಶ ಕೊಟ್ಟಿದ್ದು ಯಾರು? ಎಲ್ಲಾವುದಕ್ಕೂ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ಅನ್ನೊ ನಮ್ಮ ಭಾರತೀಯ ಬುದ್ಧಿನೆ?

Sunday, November 12, 2006

ಬೆಂಗಳೂರಿನ ಪುಸ್ತಕ ಜಾತ್ರೆ

ಸುಮಾರು ಎರಡು ವರ್ಷಗಳ ನಂತರ ನಿನ್ನೆ ಶನಿವಾರ ನಾನು B.M.T.C. busನಲ್ಲಿ ಹೊರಟೆ. ಬೆಂಗಳೂರಿನ traffic problemಗಳಿಗೆ ಒಂದು ದಿನ ನನ್ನ ಕಾರು ಹೊರತಾಗಿದ್ದರೆ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಬಹುದೇನೊ ಅನ್ನೊ ಒಂದೆ ಒಂದು ಆಸೆ ಹೊತ್ತಿದ್ದೆ. ಒಂದುಥರ ಅನುಭವ ಚೆನ್ನಗಿಯೇ ಇತ್ತು. ನಾನು ಬನ್ನೆರುಘಟ್ಟ ರಸ್ತೆಯಿಂದ ಮೇಖ್ರಿ ಸರ್ಕಲ್ ನಲ್ಲಿ ನಡೆಯುತ್ತಿದ್ದ book fairಗೆ ಹೋಗಬೆಕಿತ್ತು. ಬೆಳಗ್ಗೆ ದಿನಪತ್ರಿಕೆಯಲ್ಲಿ ಅದರ ಜಾಹಿರಾತು ನೋಡಿದಮೇಲೆ ತುಂಬಾ ಆಸೆಯಾಗಿತ್ತು. ನನಗೆ ಸ್ವಲ್ಪ ಪುಸ್ತಕಗಳ ಬಗ್ಗೆ ಆಸಕ್ತಿಯಿದೆ. ಆದರಲ್ಲೂ ಈಚೆಗೆ ಸ್ವಲ್ಪ ಜಾಸ್ತಿಯಾಗಿದೆ. ಸಿಕ್ಕ ಪುಸ್ತಕಗಳನ್ನೆಲ್ಲಾ ಕೊಂಡು ತರುತ್ತಿರುತ್ತೆನೆ... ನನ್ನ ಅರ್ಧಾಂಗಿ 'ಬರೇ ತರ್ತಿರ, ಅದನ್ನಲ್ಲ ಯಾವಾಗ ಓದುತ್ತಿರ; ನಿಮಗೆ ಸಮಯಯೆಲ್ಲಿದೆ? ಮೊದಲು ತಂದಿರೊ ಎಲ್ಲಾ ಪುಸ್ತಕ ಓದಿ ಮುಗಿಸಿ' ಅಂತ ರೇಗಿಸುತ್ತಿರುತ್ತಾಳೆ. ಆದರೂ ಪುಸ್ತಕ ತರೋಬುದ್ಧಿ ಹೋಗಿಲ್ಲ :(

ಸಂಜೆ ನಾಲ್ಕು ಗಂಟೆಗೆ ಮನೆಬಿಟ್ಟವ ನಾನು ಪುಸ್ತಕ ಜಾತ್ರೆ ನಡೀತಿದ್ದ ಜಾಗ ತಲುಪಿದಾಗ 5.50.. ಸ್ವಲ್ಪ ಸುದೀರ್ಘ ಪಯಣ.. ಒಂದೆ ಊರಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ... :) ಅದೆ ರಾತ್ರಿ ಮಾತ್ರ ಒಂದೇ ಗಂಟೆಯಲ್ಲಿ ಮನೆ ತಲುಪಿದ್ದೆ.

ಪುಸ್ತಕ ಜಾತ್ರೆ ಏನು ಸೊಗಸಾಗಿತ್ತು ಮಾರಾಯರೆ!!... ಬಹಳ ವರ್ಷಗಳ ನಂತರ ಅಷ್ಟೊಂದು ಪುಸ್ತಕಗಳನ್ನ ಒಂದೇ ಸೂರಿನಡಿ ನೊಡಿದ್ದು... ಕನ್ನಡ, ಇಂಗ್ಲಿಷ್, ತಮಿಳು, ಹಿಂದಿ ಎಲ್ಲಾ ಭಾಷೆಯದ್ದೂ ಅಂಗಡಿಗಳು ಇತ್ತು... ಆದರಲ್ಲೂ ನಾನು ನೋಡಲು ಹೋಗಿದ್ದು ಕನ್ನಡ ಪುಸ್ತಕಗಳನ್ನ.. ನಿಜವಾಗಲೂ ಸಂತೋಷವಾಯ್ತು, ಸ್ವಾಮಿ. ನನಗೆ ತಿಳಿದಿದ್ದ ಎಲ್ಲಾ ಪ್ರಕಾಷಕರದೂ ಒಂದೊಂದು ಅಂಗಡಿ ಇತ್ತು. ಬೇಕಾದಷ್ಟು ಕನ್ನಡ ಪುಸ್ತಕಗಳು ಇದ್ದವು. ಆಷ್ಟೊಂದು ಪುಸ್ತಕಗಳನ್ನ ನೋಡಿಯೇ ನನ್ನ ಹೊಟ್ಟೆ ತುಂಬಿತ್ತು. ಎಲಾ ಅಂಗಡಿಗಳನ್ನು ಸಾಧ್ಯವಾದಷ್ಟು scanಮಾಡಿದೆ. ತಕ್ಕಷ್ಟು ಕೊಂಡೆ. ಎಲ್ಲಾ ನೋಡುವಾಗ ನನ್ನ ಹಾಫ಼್ ಶರ್ಟ್ (ಅರ್ಥಾತ್ ಪತ್ನಿ) ನನ್ನ ಜೊತೆಇಲ್ಲವಲ್ಲ ಅನ್ನಿಸಿತು. ಇಷ್ಟೊಂದು ಕನ್ನಡ ಪುಸ್ತಕಗಳನ್ನೆಲ್ಲಾ ತೊರಿಸುವ ನನ್ನ ಹಂಬಲ ಆಗ ನನ್ನಲ್ಲಿಯೇ ಉಳೀತು.. ಆಗ ನನ್ನ ಸ್ನೆಹಿತ, cousin ಮತ್ತು ನನ್ನ ಸೊದರ ಮಾವನವರನ್ನೂ ತುಂಬಾ ಸ್ಮರಿಸಿದೆ. ಆವರೆಲ್ಲರಿಗೂ ಸ್ವಲ್ಪ ಪುಸ್ತಕಗಳ ಹುಚ್ಚು ಇದೆ. ಆವರಷ್ಟೆ ಅಲ್ಲ, ನನ್ನಮ್ಮನಿಗೂ ಇದೆ. ಆದೆ ನನಗೂ ಪುಸ್ತಕದ ಹುಚ್ಚುಹಿಡಿಸಿತೊ ಏನೊ! ಚಿಕ್ಕಂದಿನಿಂದನೊ ಅಮ್ಮ ಓದುತ್ತಿದ್ದುದು ನೊಡಿ ಜೊತೆಗೆ ನನ್ನ ಕೆಲವು ಸಹವರ್ತಿಗಳ ಒಡನಾಟ ನನಗೆ ಕನ್ನಡ ಪುಸ್ತಕಗಳ ಗೀಳನ್ನ ಇನ್ನೂ ಉಳಿಸಿದೆ.

ಮೊನ್ನೆ autoನಲ್ಲಿ ಬರುವಾಗ ನಮ್ಮ ಒಬ್ಬ ಸಹೃದಯಿ ಚಾಲಕ ಕನ್ನಡದ ಸ್ಥಿತಿಗತಿಗಳ ಬಗ್ಗೆ ಚರ್ಚೆ ಶುರುಮಾಡಿದ. ನಾನೂ ಕನ್ನಡದವನೇ ಆದ್ದರಿಂದ ಮಾತನಾಡಲು ಶುರುಮಾಡಿದೆ. 'ಬೇರೆಯವರನ್ನು ನೋಡಿ ಸರ್, ನಾವೆಲ್ಲ ಅವರ ಊರಿಗೆ ಹೋದ್ರೆ, ನಾವು ಅವರ ಭಾಷೆನೆ ಕಲಿತು ಮಾತಾಡೊಹಾಗೆ ಮಾಡುತ್ತರೆ. ಇಲ್ಲಿ ಮಾತ್ರ ಅವರೆಲ್ಲ ಯಾಕೆ ನಮ್ಮ ಭಾಷೆಕಲಿಯಲ್ಲ?' ಅಂತೆಲ್ಲಾ ಎಲ್ಲರೂ ಮಾತಾಡೊದೆಲ್ಲ ನಾವು ಮಾತಾಡಿದೆವು. ಹೌದು, ಸ್ವಾಮಿ. ನಾವು ಮೊದಲು, ಸರಿಹೋಗಬೇಕು. ಬೇರೆಯವರು ಇಲ್ಲಿ ನಮ್ಮ ಭಾಷೆ ಮಾತಡುತ್ತಿಲ್ಲ ಅಂತಷ್ಟೆ ನಾವು ಹೇಳುತ್ತಿರುತ್ತೆವೆ, ಆದರೆ, ನಮ್ಮಲ್ಲಿ ಎಷ್ಟು ಜನ ಕನ್ನಡೇತರ ಭಷೆಯಲ್ಲಿ ಮಾತಾಡಿದಾಗ, ಕನ್ನಡದಲ್ಲಿ ಉತ್ತರಕೊಟ್ಟಿದ್ದೆವೆ? ಅಥವಾ ಕನ್ನಡವನ್ನು ಅವರೆಲ್ಲಾ ಕಲಿಯಬೇಕು ಅನ್ನಿಸೋಹಾಗೆ ಅವರಿಗೆ ತಿಳಿಸಿದ್ದೆವೆ? ಆದೂ ಮುಖ್ಯವಲ್ಲವೆ, ಸ್ವಾಮಿ? ನಾವು ಯಾವಾಗಲೂ ಬೇರೆಯವರು ಕಲೀತಿಲ್ಲ ಅಂತಷ್ಟೇ ಹೇಳಿದರೆ ಸಾಕಾ??
ಒಂದು ಅಂಗಡಿಯಲ್ಲಿ englishಏ ಜೀವಾಳವೇನೊ ಅನ್ನೊಹಾಗೆ ಕಾಣುತ್ತಿದ್ದ ಒಂದಿಬ್ಬರು ಕನ್ನಡ ಪುಸ್ತಕಗಳನ್ನು ವಿಚಾರಿಸುತ್ತಿದ್ದುದ್ದು ತುಂಬಾ ಖುಶಿ ತಂತು. ಆಗ ಅನ್ನಿಸಿತು, 'ಕನ್ನಡವೇ ಸತ್ಯಾ??' ಅನ್ನೊ ಕೆಲವರ ಕೊಂಕಿನ ಪ್ರಶ್ನೆಗೆ ಉತ್ತರ ನಮ್ಮ ಹತ್ತಿರ ಇದೆ, ಬರೆಯ ಹಾಸ್ಯವಲ್ಲ, ಕನ್ನಡ ಇನ್ನೂ ಸತ್ತಿಲ್ಲ, ಎಲ್ಲರಲ್ಲೂ ತುಂಬಿದೆ ಅಂತ. ಅವರು ಎಲ್ಲರೂ ಕಷ್ಟ ಅಂತ ಬಿಡೊ ಭೈರಪ್ಪನವರ ಒಂದು ದೊಡ್ಡ ಪುಸ್ತಕ ತಗೊಂಡ್ರು..
ಅಲ್ಲಿ ನಾನು ಸ್ವಲ್ಪ ದಿನದಿಂದ ಹುಡುಕುತ್ತಿದ್ದ ಅ.ನ.ಕೃ. ಅವರ ಸಂಧ್ಯಾರಾಗ ನೋಡಿದೆ, ತಂದೆ. ಬೀchiಅವರ ಭಯಾಗ್ರಫಿಯಲ್ಲಿ ಅವರ conversionಗೆ ಕಾರಣವಾದ ಪುಸ್ತಕ ಅದು ಅಂತ ಓದಿದಾಗಿನೊಂದನೂ ಸಂಧ್ಯಾರಾಗ ಓದಬೇಕು ಅಂತ ಆಸೆ ಇತ್ತು. ಇವತ್ತು ಅದನ್ನ ಓದಿದೆ. ನಾಲ್ಕು ಗಂಟೆಗಳಲ್ಲಿ ಒಂದೇ ಸಾರಿಗೆ ಯಾವುದೇ ಬ್ರೇಕ್ ಇಲ್ಲದೆ ಓದಿದೆ. ಬೀchi ಹೇಳಿದಂತೆ, ಆ ಪುಸ್ತಕೆ ಯಾರಿಗಾದರೂ ಕನ್ನಡದ ದೀಕ್ಷೆಕೊಡಿಸುತ್ತದೆ. ಓದುವಾಗ ಹಲವು ಬಾರಿ ಕಣ್ಣು ತುಂಬಿಬರುವುದು ಸಹಜ. ಕನ್ನಡಪ್ರಿಯರೆಲರೂ ಓದಲೇಬೇಕು ಅಂತ ನಾನು ಹೇಳುತ್ತೇನೆ.
ಕನ್ನಡ ಅಷ್ಟಾಗಿ ಗೊತ್ತಿಲ್ಲದ ಮಕ್ಕಳಿಗೆ ಈ ಒಂದು ಪುಸ್ತಕ ಜಾತ್ರೆ ನಿಜಕ್ಕೂ ಒಳ್ಳೆಯ weekend trip. ಅಲ್ಪಸ್ವಲ್ಪ ಪ್ರೀತಿಯಿರುವ ಎಲ್ಲಾ ಕನ್ನಡ ತಂದೆ-ತಾಯಿಯರು ಮಕ್ಕಳಿಗೆ ಈ ಜಾತ್ರೆ ಮುಗಿಯೊಕ್ಮುಂಚೆ (೧೯ನವೆಂಬರ್ ಗೆ) ತೊರಿಸಿ ಕನ್ನಡದ ಪುಸ್ತಕಗಳ ಪರಿಚಯನಾದ್ರು ಮಾಡಿಸಬೆಕು ಅಲ್ಲವೆ? :)

Tuesday, May 09, 2006

Bangalore and its developments??

ಬೆಂಗಳೂರಿನ ಬೆಳವಣಿಗೆಯ ಬಗ್ಗೆ ತುಂಬಾ ಜನ ಮಾತಾಡ್ತಿದ್ದಾರೆ. ಅದರಲ್ಲೂ ದೈನಂದಿಕಗಳಂತೂ ಅದರ ಸುರಿಮಳೇನೆ ಹರಿಸ್ತಿವೆ. ತುಂಬಾ ಬೆಳಿತಿದೆ; ಉದ್ಯಾನ ನಗರ ಅಂತ ಕರೀತಿದ್ದ ಊರು ಈಗ ಕಾಂಕ್ರೀಟ್ ಉದ್ಯಾನಗಳ ನಗರವಾಗಿದೆ!

ಇದೇ ವಿಶಯವಾಗಿ ಮೊನ್ನೆ ನಮ್ಮ ಮನೇಲಿ ಎಲ್ಲಾ ಸೇರಿದ್ದಾಗ ಮಾತು ಶುರುವಾಯ್ತು. ಒಬ್ಬರು 'ನಮಗೆ ಈಗಾಗಿರುವ developments ಗಳು ಸಾಕು. ಬೇರೆಯವರು ಬಂದು ಇಲ್ಲಿ ಸೇರಿ ಆಗ್ತಿರೊ ಸಮಸ್ಯೆಗಳು ಸಾಕಾಗಿದೆ. ಈ trafficಉ, ಪರಕೀಯರ ಹಾವಳಿ ಬೇಡಪ್ಪ! ನಮಗೆ ಈ ಗ್ರೌತ್ ಆಗದಿದ್ರೂ ಪರವಾಗಿಲ್ಲ ಸಾಕು ಅಂತ ನಿಲ್ಲಿಸಬೇಕು. ನಮ್ಮ ಬೆಂಗಳೂರು ನಮಗಿರಲಿ’ ಅಂತ ಹೆಳಿದ್ರು. ಇದು ಒಂದು ರೀತಿಯಲ್ಲಿ ಸರಿಯಿರಬಹುದು, ಆದರೆ ನಮಗೆ ಈಗಾಗಿರೋ ಬೆಳವಣಿಗೆ ಸಾಕೆ? ಬೇರೆಯವರು ಬಂದಿರೋದರಿಂದ ನಮಗೆ ಉಪಯೋಗವಾಗಿದೆಯೆ ಅಥವ ಸಮಸ್ಯೆಯಾಗಿದೆಯೆ? ನಿಜವಾಗಿ ಈಗಿನ ಬೆಂಗಳೂರಿಂದ ಹಳೆಯ ಬೆಂಗಳೂರನ್ನು ಹುಡುಕುವ ಪ್ರಯತ್ನ ಮಾಡಬೇಕಿದೆಯ?

ಈ ITಯವರಿಂದಲೇ ನಮ್ಮ real-estate ಇಷ್ಟು ದುಬಾರಿಯಾಗಿರೋದು ಅನ್ನೊ allegation ನಿಜಾನ? ಅದರಿಂದ ನಮ್ಮೆಲ್ಲರಿಗೆ/ಕನ್ನಡಿಗರಿಗೆ ಏನೂ ಸಹಾಯ ಆಗಿಲ್ಲವೆ? IT ಬಂದದ್ದು ಒಳ್ಳೆಯದೊ ಅಲ್ಲವೊ? ಯೋಚಿಸಬೇಕಾದ ಸಂಗತಿ!!

Monday, May 08, 2006

ಹಳ್ಳ

"ಬಾಯಿಲ್ಲಿ" ಎಂದ ನನ್ನ ಸಹೋದ್ಯೋಗಿಯ monitor ಕಡೆ ನೊಡಿದೆ. ಆವನು Reliance Industries' shares ತೋರಿಸಿ, 'ಎರಡು ಸಾವಿರ ಬಂದತಕ್ಷಣ ಖುಷಿಪಟ್ಟು ಮಾರಿದೆಯಲ್ಲ, ಈಗ ನೊಡು' ಎಂದ. ಈಗ ಅದು ರೂ. 1161 ರಲ್ಲಿ ನಡಿತಿದೆ. ಅವನು ಹೇಳೊ ಪ್ರಕಾರ ನನಗೆ ಪ್ರತಿ ಶೇರಿಗೆ ರೂ. 4೦೦ ಸಿಗುತ್ತಿತ್ತು if I had not sold those shares. 'ತೋರಿಸಿ ನಂಗೆ ಹೊಟ್ಟೆ ಉರಿಸಬೇಡವೊ... ನಾವೆಲ್ಲ ಅಲ್ಪತೃಪ್ತರು ಕಣೊ' ಅಂದೆ!! ಹೇಗೊ ಮಾಡಿದ ತಪ್ಪನ್ನ ಸಾರಿಸಿಕೋಂಡೆ!! :)

ಜೊತೆಗೆ ಅವನನ್ನು ನೋಡಿ 'ಹಳ್ಳದ ಕಡೆಗೆ ನೀರು ಹರಿವುದು...' ಅಂತ ಹೇಳಿದ ಮಾತು ನೆನಪಿಗೆ ಬಂತು :)

Friday, April 21, 2006

My short musing on MM

ನಾನು ಮೊದಲ ಬಾರಿ 'ಮೈಸೂರು ಮಲ್ಲಿಗೆ' ಧ್ವನಿ ಸುರಳಿ ಕೇಳಿದಾಗಿನಿಂದ ಅದರ ಸಂಗೀತಕ್ಕೆ ಮಾತ್ರವಲ್ಲ, ಅದರ ಒಳಗಿನ ಕಾವ್ಯ ಸಂಪತ್ತಿಗೂ ಮಾರುಹೋದೆ. ಆಗ ನಾನು ತುಂಬಾ ಚಿಕ್ಕವನು. ಆದರೂ ಕಾವ್ಯ, ಕನ್ನಡದ ಕವಿಗಳ ಬಗ್ಗೆ ಒಲವು/ಅರಿವು ಅಲ್ಪ-ಸ್ವಲ್ಪವಿತ್ತು - ನಾ ಓದಿದ ಕನ್ನಡ ಮಾಧ್ಯಮದ ಶಾಲೆಗೆ ಧನ್ಯವಾದ. ಮೈಸೂರು ಮಲ್ಲಿಗೆಯಲ್ಲಿದ್ದ ೯ ಹಾಡುಗಳನ್ನು ಕೇಳಿದಮೇಲೆ ಆ ಕವನ ಸಂಕಲನವನ್ನು ಓದುವ ಆಸೆ ಜಾಸ್ತಿಯಾಯ್ತು. ಅಲ್ಲಿ, ಇಲ್ಲಿ ಹುಡುಕಿ, ನಂತರ ಅವರ ಸಂಪೂರ್ಣ ಸಂಕಲನ 'ಮಲ್ಲಿಗೆಯ ಮಾಲೆ' ಕೊಂಡೆ. ಈಗಾಗಲೇ ನನ್ನ ಕನ್ನಡದ ಸಾಹಿತ್ಯದ ಹವ್ಯಾಸ ಕಡಿಮೆಯಾಗಿದೆ; ಹಲವಾರು ವರ್ಷಗಳೇ ಕಳೆದಿವೆ. ಆದರೂ 'ಮೈಸೂರು ಮಲ್ಲಿಗೆ' ಬಗೆಗಿನ ನನ್ನ ಅನಿಸಿಕೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಪ್ರಯತ್ನವೇ ಇದು.

ಮೈಸೂರು ಮಲ್ಲಿಗೆಬಗ್ಗೆ ಎಚ್. ಎಸ್. ರಾಘವೆಂದ್ರರಾವ್ ಅವರು ಅದಕ್ಕೆ ಪಾಶ್ಚಿಮಾತ್ಯದ ಪ್ರಭಾವವಿದೆ ಎಂದು ಒಂದೆಡೆ ಬರೆದಿದ್ದಾರೆ. ಅಂತೆಯೆ, ಅದರಲ್ಲಿ 'ಹಳಗನ್ನಡಗಳ ಕಾಮಸೀಮಿತ ಪ್ರಣಯಕ್ಕೆ ಇಲ್ಲಿ ಪಾರಸ್ಪರಿಕ ಭಾವನೆಗಳ ಉಡುಗೆ ಸಿಕ್ಕಿದೆ' ಎಂದಿದ್ದಾರೆ. ಅಂದಿನ ಕಾಲಕ್ಕೆ ಆ ಮಾತು ಸೂಕ್ತವಿರಬಹುದು ಆದರೆ ಅದೇ ಮೈಸೂರು ಮಲ್ಲಿಗೆಯ ಕವನಗಳನ್ನು ಇಂದಿನ ಯುವಕ-ಯುವತಿಯರು ಓದಿದಲ್ಲಿ, ಹಲವು ವಿಷಯಗಳು ಇಂದಿಗೂ ಸಮಂಜಸ ಎಂದೆನಿಸುತ್ತದೆ. ಅವರೂ ಕೂಡ ಅದನ್ನೇ ಬಯಸುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ಅದರಲ್ಲೂ ಕೆ.ಎಸ್.ನ. ಅವರು ಹೆಣ್ಣನ್ನು ಬಣ್ಣಿಸಿರುವ ರೀತಿಯಂತೂ ಇಂದಿಗೂ ಸಲ್ಲುತ್ತದೆ. ಅದನ್ನೇ ಇಂದಿನ ಯುವಕ (ಕನ್ನಡ ಬಲ್ಲ ಯುವತಿಗೆ) ಹೇಳಿದಲ್ಲಿ ಅವಳ ಪ್ರೀತಿ ಗಿಟ್ಟಿಸುವುದರಲ್ಲಿ ಸಂಶಯವೇಯಿಲ್ಲ. 'ಹಳ್ಳಿಯ ಚಲುವೆಗೆ'ಯಲ್ಲಿ ಹೇಳಿರುವ ಈ ಸಾಲುಗಳನ್ನು ನೋಡಿ:

"ಬೆಳ್ಳಬೆಳ್ಳಗೆ ತೆಳ್ಳತೆಳ್ಳಗಿಹೆ ನೀನು;
ಬೇಟೆಗಾರನ ಬಿಲ್ಲಿನಂತಿರುವೆ ನೀನು.
ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು,
ಪಾರಿವಾಳದ ಕಣ್ಗೆ ನೆರಳನಿತ್ತಿಹುದು.
ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು;
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು;
ತುಂಬು ಹರೆಯದ ಹುಡುಗಿ ನೀನೊಲುಮೆಗೀಡು;
ನಂಬಿ ನನ್ನನು ವರಿಸಿ ಸಂತಸದಿ ಬಾಳು."

ಇದನ್ನು ಕೇಳಿ ಯಾರು ತಾನೇ ಸೋಲುವುದಿಲ್ಲ ಹೇಳಿ? ಅವಳನ್ನು ಹೊಗಳುವುದರ ಜೊತೆಗೆ ಅವನು ಅವಳ ಕೈಬಿಡನೆಂಬ ಆಶ್ವಾಸನೆ ಕೂಡ ನೀಡುತ್ತನೆ. ಪ್ರೀತಿಯಿರುವ ಯಾವ ಹುಡುಗಿಗೆ ಅವಳ ಪ್ರಿಯತಮನ ಇಂತಹ ನಂಬಿಕೆ ಬೇಡ ಹೇಳಿ? ಇಂದಿಗೂ - ಎಂದೆಂದಿಗೂ ಕೂಡ - ಪ್ರೀತಿ, ದಾಂಪತ್ಯಗಳು ನಿಂತಿರುವುದೇ ಈ ನಂಬಿಕೆಯ ಮೇಲಲ್ಲವೆ?

'ಗೃಹಲಕ್ಷ್ಮಿ'ಯ ಕೊನೆಯಲ್ಲಿ ಕೆ.ಎಸ್.ನ. ಹೇಳುತ್ತಾರೆ: '... ತಾರೆಗಳ ಮೀಟುವೆವು, ಚಂದಿರನ ದಾಟುವೆವು; ಒಲುಮೆಯೊಳಗೊಂದು ನಾವು; ನಮಗಿಲ್ಲ ನೋವು, ಸಾವು'. ಎಂತಹ ಸುಂದರ ಕಲ್ಪನೆ! ಅಲ್ಲವೆ? ಯಾವ ದಂಪತಿಗಳಿಗೆ ಇದು ಬೇಡ? ಹೇಳುವ ರೀತಿ ಕೊಂಚ ಬೇರೆಯಾಗಿರಬಹುದು ಆದರೆ ಅರ್ಥ ಇದೇ ಅಲ್ಲವೆ?

ಈ ಸಾಲುಗಳು ನೆನಪಿದೆಯೆ? 'ಯಾರು ಕದ್ದು ನೋಡಿದರೇನು? ಊರೆ ಎದ್ದು ಕುಣಿದರೇನು? ಜನರ ಬಾಯಿಗಿಲ್ಲ ಬೀಗ, ಹೃದಯದೋಳಗೆ ಪ್ರೇಮರಾಗ ಇಂಥಕೂಗನಳಿಸಿದೆ, ಬೆಳಗಿ ಬದುಕ ಹರಸಿದೆ'. ಅಬ್ಬ! ನಮ್ಮಲ್ಲೊಂದು ಗಾದೆಯಿದೆ - 'ಜನರನ್ನು ಮೆಚ್ಚಿಸಲು ಜನಾರ್ಧನನಿಂದಲೂ ಸಾಧ್ಯವಿಲ್ಲ' ಎಂದು. ಎಷ್ಟೋಜನ ಜನಕ್ಕಂಜಿ ತಮಗೆ ಪ್ರೀತಿಯವರ ಜೊತೆ ಹೋಗದೆ ಮನಸ್ಸಿನಲ್ಲೇ ಮಣೆಹಾಕುವುದನ್ನು ಕೇಳಿದ್ದೇನೆ, ನೋಡಿದ್ದೇನೆ - ಅದು ಮದುವೆಯ ಮೊದಲು. ಆದರೆ ಮದುವೆಯ ಮೊದಲ ದಿನಗಳು ಹೇಗಿದ್ದವು ಎಂದು ಹೇಳಿರುವ ಈ ಸಾಲುಗಳು ಪ್ರಸ್ತುತ ದಿನಗಳಲ್ಲಿ ಪ್ರೀತಿಸಿದವನೊಂದಿಗೆ ಹೋಗಲು ತಪ್ಪಿಲ್ಲ ಎಂದು ಸಾರಿ ಸಾರಿ ಹೆಳಿದಂತಿದೆ ನನಗೆ. ಆದರೂ ಕೆಲವು ಸಮಾಜವಾದಿಗಳು ಇದನ್ನು ತಪ್ಪು ಎಂದು ವಾದಿಸುವರೆಂದು ನಾನು ಬಲ್ಲೆ. ಆವರಿಗೊಂದು ನನ್ನ ಪ್ರಶ್ನೆ. ಪ್ರೀತಿಯಲ್ಲಿ ತಪ್ಪಿಲ್ಲವೆಂದವರು ಅದನ್ನು ವ್ಯಕ್ತಪಡಿಸುವ ರೀತಿಯಲ್ಲಿ ತಪ್ಪೇಕೆ ನೋಡುತ್ತರೆ? ನಿಜವಾದ ಪ್ರೀತಿಯಲ್ಲಿ ಕಾಮಕ್ಕೆ ಎಷ್ಟರಮಟ್ಟಿಗೆ ಪ್ರಾಮುಖ್ಯತೆಯಿದೆ?

ಕೆ.ಎಸ್.ನ. ಅವರ ಪ್ರಿಯತಮ ತನ್ನ ಪ್ರೇಯಸಿಯ ಪ್ರೀತಿಯನ್ನು ವ್ಯಕ್ತಪಡಿಸಿರುವ ರೀತಿ ನನಗೆ ತುಂಬ ಇಷ್ಟವಾಯಿತು. ಅವನಿಗೆ ತನ್ನ ಪ್ರೇಯಸಿಯ ಪ್ರೀತಿ 'ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ, ನಿನ್ನೊಲುಮೆ ನನ್ನಕಂಡು' ಎನ್ನಿಸುತ್ತದೆ. ಸಾಗರದ ಹುಣ್ಣಿಮೆ ಉಬ್ಬರಕ್ಕೆ ಎಲ್ಲರೂ ಭಯಪಡುವುದರಲ್ಲಿ ಸಂಶಯವಿಲ್ಲ, ಆದರೆ ಈ ಉಬ್ಬರಕ್ಕೆ ಭಯವುಂತೆ!? ಮಿಥ್ಯಪ್ರೇಮಿಗಳಲ್ಲಿ ಇರಬಹುದು, ಆದರೆ ನಿಜ ಪ್ರೇಮಿಗೆ ಅವಳ ಪ್ರೀತಿ 'ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ'. ಇದು ಕಲ್ಪನೆಯ? ಕಲ್ಪನೆ ಎನ್ನುವುದಕ್ಕಿಂತ ಅದನ್ನು ಅನುಭವಿಸಿ ನೋದುವುದರಲ್ಲಿ ಹೆಚ್ಚಿನ ಅರ್ಥವಿದೆ ಎನ್ನುವುದು ನನ್ನ ಅನಿಸಿಕೆ. ಎಷ್ಟೋ ಪ್ರೇಮಿಗಳಿಗೆ ಇದು ಸತ್ಯ ಅಲ್ಲವೆ? ನೀವೂ ಅನುಭವಿಸಿ.

[I wrote this a year ago when I bought 'malligeya maale'. Now I feel I could have added or modified this, but didn't want to change the original script. Sharing the same]