ನಿನ್ನೆ ರಾತ್ರಿ ಬಹಳಹೊತ್ತಿನತಂಕ ಕೆಲಸಮಾಡಿದ್ದಕ್ಕೆ ಬೆಳಗ್ಗೆ ಏಳಲಾಗಲಿಲ್ಲ. ಹಾಗಾಗಿ ಇವತ್ತು ಮನೇಇಂದನೇ ಕೆಲ್ಸ ಮಾಡೊ ನಿಶ್ಚಯಮಾಡ್ದೆ. ಬೆಳಗ್ಗೆ ಇಂದ ಸಂಜೆವರೆಗೆ ಊಟಕ್ಕೆ ಬಿಟ್ಟು ನನ್ನ ಲ್ಯಾಪ್-ಟಾಪ್ ಬಿಟ್ಟು ಎದ್ದೆರಲಿಲ್ಲ (ಕ್ಷಮಿಸಿ, ನಿಸರ್ಗಕ್ಕೆ ವಿರುದ್ಧಹೋಗಕ್ಕೆ ಸಾಧ್ಯವಿಲ್ಲ; ಆ ಕೆಲಸಗಳನ್ನೂ ಅದದರಸಮಯಕ್ಕೆ ಮುಗಿಸಿದೆ :) ). ಸಂಜೆ ಏನಾದರೂ ಅಂಚೆ ಇರಬಹುದೇನೋ ನೋಡೋಣ ಅಂತ ಹೊರಗೆ ಹೋರಟೆ. ಆಹ್! ಎಷ್ಟು ಚೆನ್ನಾದ ತಂಗಾಳಿ ಬರ್ತಿತ್ತು ಅಂದ್ರೆ ನಾನು ಮನೆ ಬಾಗಿಲಲ್ಲೇ ಒಂದೆರಡು ಕ್ಷಣ ಹಾಗೇ ನಿಂತು ಅದನ್ನ ಅನುಭವಿಸಿದೆ. ನನ್ನ ಅಪಾರ್ಟ್ಮೆಂಟಿನ ಬಾಲ್ಕನಿ ಯಿಂದ ನೋಡಿದರೆ ಅರುಣ ಆಕಾಶಕ್ಕೆ ಕೇಸರಿಬಣ್ಣ ಹಚ್ಚಿದ್ದ ಆಗಲೆ. ಆ ತಂಗಾಳಿ ಮತ್ತೆ ಸಂಜೆಯಮುಸುಕಲ್ಲಿ ಮನಸ್ಸು ಏನೇನೋ ಕಲ್ಪನೆಗಳಲ್ಲಿ ತೊಡಗಿತ್ತು. ಜೊತೆಗೆ, ನನ್ನ ಪತ್ನಿ ಇಲ್ಲವಲ್ಲಾ ಈ ಸಂದರ್ಭದಲ್ಲಿ ನನ್ನ ಜೊತೆ ಅನಿಸ್ತು. ಅವಳು ಇಲ್ಲಿ ನನ್ನೊಂದಿಗಿದ್ದಷ್ಟೂ ದಿನ ಸೂರ್ಯ ನಮ್ಮೊಂದಿಗೆ ಸಹಕಾರ ಮಾಡಿರಲಿಲ್ಲ. ಸಂಜೆ ಕೂಡ... ನಾನೀಗ ಸ್ವಲ್ಪದಿನಕ್ಕೆ ಒಂಟಿಯೇ... ತಕ್ಷಣ ನನಗೆ ಜ್ಞಾಪಕಕ್ಕೆ ಬಂದದ್ದು ನಿಸಾರ್ ಅಹಮದ್‍ರ ಈ ಗೀತೆ:
ಮತ್ತದೇ ಬೇಸರ
ಅದೇ ಸಂಜೆ ಅದೇ ಏಕಾಂತ
ನಿನ್ನಜೊತೆ ಇಲ್ಲದೆ
ಮಾತಿಲ್ಲದೆ ಮನ ವಿಭ್ರಾಂತ...
Subscribe to:
Post Comments (Atom)
2 comments:
Sree,
neevu swalpa dinagala nanthara e hadunnu hadabahdeno!!
Shravana Masa bandaga ananda thandaga..
Virha geethe innilla pranaya geethe balella
ನಿಜ ಪ್ರದೀಪ್‍ಅವರೆ,
ಅದೇ ದಿನಗಳಿಗೆ ಕಾಯ್ತಿದ್ದೆನೆ. :)
Post a Comment