ನಾನು ಬಹಳ ದಿನಗಳ ನಂತರ ಕನ್ನಡದ ಬ್ಲಾಗುಗಳನ್ನ ಹುಡುಕಿ ಒದ್ತಾಇದ್ದೆ. ತುಂಬಾನೆ ಖುಷಿಯಾಯ್ತು. ನಾನು ಮೊದಲು ಕನ್ನಡದಲ್ಲಿ ಬರೀಬೇಕು ಅಂತ ಅಂದುಕೊಂಡಾಗ ತುಂಬಾ ಬ್ಲಾಗುಗಳಿರಲಿಲ್ಲ. ಈಗ ಬಹಳವಾಗಿವೆ. ಇವಾಗಿನ ಯುವಕರು ಕನ್ನಡದಲ್ಲಿ ಬರೆಯೋಕೆ ಮುಂದೆಬಂದಿರೋದು ಸಂತಸದ ವಿಷಾಯನೇ ಸರಿ. ಎಷ್ಟೊಂದರಲ್ಲಿ ಅವರ ಆಲೋಚನೆ, ಅವರ ಬರೆಯೋ ವೈಖರಿ, ವಕ್ಕಣೆ ಎಲ್ಲಾತುಂಬಾ ಚೆನ್ನಾಗಿದೆ. ಅವರಿಗೆಲ್ಲಾ ನನ್ನ ವಂದನೆಗಳು.
ಅದಿರ್ಲಿ. ಕೆಲವೊಂದು postಗಳನ್ನ ಓದಿದಾಗ ನನಗನ್ನಿಸಿದ್ದು ಇಷ್ಟೇ. ಕೆಲವರು ಪ್ರಚಲಿತ ವಿಷಯ ತಗೊಂಡು ಅದಕ್ಕೆ ವಿರುದ್ಧವಾಗೇ ಬರೆಯೋಕೆ ಹೊರಟಿದ್ದಾರೆ. ಒಬ್ಬ ಬರಿತಾನೆ
IT industry ನಮ್ಮ (ಸಾಮಾನ್ಯ ಮನುಷ್ಯರ) ಜೀವನ ಹಾಳುಮಾಡಿದೆ ಅಂತ (ಇದು ತುಂಬಾ ಹಳೇ ವಿಚಾರ ಬಿಡಿ!). ಮತ್ತೊಬ್ಬ ರವಿ ಬೆಳಗೆರೆ ಮುಂಚಿನಥರ ಇಲ್ಲ, ತುಂಬಾಬದಲಾಗಿದ್ದಾರೆ; ಕಡಕ್ಕಾಗಿ ಬರಿತಿಲ್ಲ ಅಂತ. ಹೌದು, ಯಾರೇ ಆಗ್ಲೀ ಏನಾದ್ರೂ ಹೇಳಿದ್ರೆ ಅದಕ್ಕೆ ವಿರುದ್ಧವಾಗಿ ಹೇಳಬೇಕು ಅನ್ನಿಸೋದು ಮಾನವ ಸಹಜ ಕ್ರಿಯೆ. ಆದ್ರೆ ಸ್ವಲ್ಪ ಯೊಚಿಸಿನೋಡಬೇಕು ಅಲ್ವಾ? ಸ್ವಲ್ಪ ನಿಧಾನವಾಗಿ ಅದೇ ವಿಷ್ಯನ ಬಿಚ್ಚು ಮನಸ್ಸಿನಿಂದಯೋಚಿಸಿದ್ರೆ ಬರೆಯುವ ಮುಂಚಿನ ನಮ್ಮ biased views ಬದಲಾಗಬಹುದು. ನಾನು ಹಾಗಂತ ಅವರೆಲ್ಲಾ ಬರೆದಿರೋದು ತಪ್ಪು ಅಂತ ಹೇಳ್ತಿಲ್ಲ. ಪ್ರತಿಯೊಬ್ಬರ ಅನಿಸಿಕೆ, ಪ್ರಭಾವಶಾಲಿ ಪ್ರತಿಕ್ರಿಯೆ ಏನೇನೋ ಮಾಡಲು ಸಾಧ್ಯ.
"ಒಂದ್ಸಲಾ ಈ ಸಾಫ್ಟ್ ವೇರು ಅನ್ನೋದು ಪೂರ್ತಿ ಬಿದ್ದೋಗ್ಬೇಕು ಆವಾಗ ಬುದ್ದಿ ಬರತ್ತೆ ಇವ್ಕೆ"
ಅಂತ ಇದೆ ಅದರಲ್ಲಿ. ತುಂಬಾ ನಗು ಬಂತುರೀ. :) ಬರೆದಿರುವಾತ ಇನ್ನೂ ಚಿಕ್ಕವನು ಅಂತ ಅಂದ್ಕೋತಿನಿ. ಅವನ e-mail idನಲ್ಲಿ 82 ಅಂತ ಇದೆ. ಅದು ಅವನು ಹುಟ್ಟಿದ ವರ್ಷ ಅಂದ್ಕೊಂಡಿದೀನಿ (ಆದ್ದರಿಂದ್ಲೆ ಇಲ್ಲಿ ಧೈರ್ಯವಾಗಿ ಕೆಲವುಕಡೆ ಏಕವಚನ ಪ್ರಯೋಗಿಸಿದ್ದೀನಿ; ಅಲ್ಲವಾದ ಪಕ್ಷದಲ್ಲಿ ಬದಲಾಯಿಸುತ್ತೀನಿ). ಹಾಗಾದ್ರೆ, ನಿಜ. ಆತ ಕೂಡ IT ಕೆಲಸದಲ್ಲೇ ಇದ್ರೂ ಈ ಉದ್ಯಮದ ಏಳು ಬೀಳುಗಳನ್ನ ನೋಡಿಲ್ಲ. ಯಾಕಂದ್ರೆ ಅವನು ಈ industryಗೆ ಸೇರಿದಾಗ 2003 ಆಗಿತ್ತು. ನಾವೆಲ್ಲಾ ಒಂದು ದೊಡ್ಡ ಗಂಡಾಂತರದಿಂದ ಪಾರಾಗಿದ್ವಿ ಅಷ್ಟುಹೊತ್ಗೆ. ಮರೆತು ಬಿಟ್ರಾ ಸ್ವಾಮಿ 1998-2001ರ downtrend ಹೇಗಿತ್ತು ಅಂತ? ಏನೇನೋ ಅಯ್ತು ಬಿಡಿ ಆಗ. ಈಗ ಅದರ ಮಾತೇಕೆ. ನಾನಿಲ್ಲಿ ಹೇಳೋಕೆ ಹೊರಟಿದ್ದು ಇಷ್ಟೆ. IT ಅನ್ನೋದು ಭಾರತದಲ್ಲಿ, ಮತ್ತೂ ಬೆಂಗಳೂರಿನಲ್ಲಿ, ಈಗ ನೋಡ್ತಿರೋದಷ್ಟೇ ಅಲ್ಲ. ಈಗದರ ಉದ್ಧಾರ ನೋಡಿ ಜನ ಏನೇನೊ ಕಲ್ಪಿಸಿಕೊಳ್ತಾರೆ, ನೆಗೆಟಿವ್ ಆಗೇ ಯೊಚನೆ ಮಾಡ್ತಾರೆ. ಅದರಿಂದ ಏನೂ adverse effect ಇಲ್ಲ ಅಂತ ನಾನೂ ಹೇಳೋದಿಲ್ಲ. ಪ್ರತಿಯೊಂದಕ್ಕೂ ಅದರ ಒಳ್ಳೆಯ ಮತ್ತು ಅಷ್ಟೇನೂ ಒಳ್ಳೆಯದಲ್ಲದ ಮುಖಗಳು ಇದ್ದೇ ಇರುತ್ತೆ ಅಂತ. ಎಷ್ಟು ಜನಕ್ಕೆ ಗೊತ್ತು ಭಾರತದಲ್ಲಿ ಈಗ boom ಅಗಿರೋ IT industry ಶುರುವಾಗಿದ್ದು 1968ರಲ್ಲಿ ಅಂತ? ಹ್ಹೂಂ. ತುಂಬಾ ಹಳೇ ಇಂಡಸ್ಟ್ರೀನೆ ಸ್ವಾಮಿ ಇದು. ತುಂಬಾಜನ ಅಂದುಕೊಂದಿರೋ ಹಾಗೆ ಅದು ಕಳೆದ ಐದು-ಹತ್ತು ವರುಷಗಳಿಂದ ಬಂದು ಇದ್ದಕ್ಕಿದ್ದಂತೆ ಗೆದ್ದಿಲ್ಲ ಅದು. ಅದು ತನ್ನದೇ ಆದ ಏಳು-ಬೀಳುಗಳನ್ನ ನೋಡಿದೆ. ಪ್ರಪಂಚದಲ್ಲೆಲ್ಲಾ ಐಟಿ ಬಳಕೆ ಆಗ್ತಿರೋದ್ರಿಂದನೇ ಅದು ಗೆದ್ದಿದ್ದು.
ಮತ್ತೊಂದು ವಿಚಾರ ಅದೇ ಬ್ಲಾಗ್ ನಿಂದ -
"ಅಷ್ಟಕ್ಕೂ ಈ ಸಾಫ್ಟ್ ವೇರು ಅಂದ್ರೆ ಏನಂತ ಅಂದ್ಕಂಡಿದಿರಾ? ಇದೊಂದು ಕೂಲಿ ಕೆಲಸ."
ಸ್ವಾಮಿ ಹೀಗಂದ್ರೆ ನೀವು ಐಟಿನೋರ್ನ ಹೀಯಾಳಿಸಿದಂಗೆ ಅಂತ ಅಂದುಕೊಂಡ್ರ? ತಪ್ಪು. ಯಾಕಂದ್ರೆ IT ನಲ್ಲಿರೋರು ತಮ್ಮ ಕೆಲಸ ಮಾಡ್ತಿದ್ದಾರೆ ಅಷ್ಟೆ. ಕೂಲಿ ಮಾಡೊದು ತಪ್ಪಾ ನಿಮ್ಮ ಅರ್ಥದಲ್ಲಿ? ಅದೂ ಸಹ ಒಂದು ಕಾಯಕ ಸ್ವಾಮಿ. ಪ್ರತಿಯೊಂದು ಕೆಲಸ ಮಾಡೋಕೂ ಜನ ಬೇಕು. ನನಗೆ ನನ್ನಮ್ಮ ನಾನು ಚಿಕ್ಕವನಾಗಿರುವಾಗ ಹೇಳ್ತಿದ್ದ ಮಾತು ನೆನಪಿಗೆ ಬರುತ್ತೆ: ಎಲ್ಲಾರೂ ಪಲ್ಲಕ್ಕಿಯ ಮೇಲೇನೆ ಕೂತ್ಕೊಂಡು ಹೋಗೊಕೆ ಆಸೆ ಪಟ್ರೆ ಅದನ್ನ ಹೊರೋರು ಯಾರು? :) ನೀವೂ ಕಾಯ್ತಿರ್ತಿರ, ಪಲ್ಲಾಕ್ಕಿನೂ ಅಲ್ಲೀ ಇರುತ್ತೆ. ಮುಂದೆ ಹೇಗೆ ಹೋಗೊದು ಮತ್ತೆ? ಯಾವಾಗಲೂ ನಿಧಾನ ವಾಗಿ ಮೇಲೆ ಹೋಗಣ ಅಲ್ವ? ಹಾಗಂತ ಭಾರತೀಯ IT companyಗಳು ಬರೀ ಈ ಕೂಲಿ ಕೆಲಸ ಮಾಡ್ತಿಲ್ಲ ಗುರು. ನಾವುಗಳೂ ನಮ್ಮದೇ ಆದ ಸ್ಥಾನ ಪಡೆದುಕೊಂದಿದ್ದೀವಿ. ನಮ್ಮದೇ innovations ಇವೆ. ಮೊದಲು ಈ outsourcing ಪ್ರಾರಂಭವಾದಾಗ ನಾವು - ಭಾರತೀಯರು - ಅಮೇರಿಕನ್ನರಿಗೆ ಸಿಕ್ಕಿದ್ವಿ. ಹೌದು ನಾವು ಅವರಿಗಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ವಿ - ಈಗಲೂ ಮಾಡ್ತಿದ್ದೀವಿ. ಆದ್ರೆ ಈಗ ಭಾರತಾನ ಮುಂಚಿನಥರಾನೇ ನೋಡ್ತಿಲ್ಲ. ಯಾಕಂದ್ರೆ ನಾವು ಈಗ ಜಾಸ್ತಿ ದುಡ್ಡು ಕೇಳ್ತಿದ್ದೆವಿ. ಅವರೇ ಬರೆದಿರೋಹಾಗೆ ಕಂಪನಿಗಳು ಜಾಸ್ತಿಆದಂಗೆ ಅದನ್ನ ಬದಲಿಸೋ ಜನಾ ಕೂಡ ಜಾಸ್ತಿಯಾಗಿದ್ದಾರೆ. ಆದ್ದರಿಂದ ಒಳ್ಳೆಯ ಜನನ್ನ ಉಳಿಸಿಕೋಬೇಕಂದ್ರೆ ಅವರಿಗೆ ಜಾಸ್ತಿ ಸಂಬಳ ಕೊಡಬೇಕು. ಹಾಗಾಗಿ ಈಗ ತುಂಬಾ ಬೇಕಿದ್ದ ಭಾರತೀಯ ಕಂಪನಿಗಳಿಂದ ಬೇರೆ ಕಡಿಮೆ ಸಂಬಳ ತಗೋ ದೇಶಗಳಿಗೆ ಹೋಗ್ತಿದೆ projectಗಳು.
BRIC (Brazil, Russia, India, and China) ಅನ್ನೊ ಪದ ಕೇಳಿದ್ದೀರ? ಅದರಲ್ಲಿ ಎಷ್ಟೊಜನ ನಂ. 1 ಸ್ಥಾನದಲ್ಲಿದ್ದ ಭಾರತನ ಕೆಳಗೆ ಹಾಕ್ತಿದ್ದಾರೆ ಈಗ. ಬೇರೆಯವರಿಗೆ ಭಾರತದ ಜೊತೆ technology & ಆಂಗ್ಲ ಭಾಷೆಯಲ್ಲಿ ಸ್ಪರ್ಧಿಸಿ ಮುಂದೆ ಬರೋಕ್ಕೆ ಸ್ವಲ್ಪ ಸಮಯ ಹಿಡೀಬಹುದು ಆದ್ರೆ ತುಂಬಾ ದೂರ ಇರಲಿಕ್ಕಿಲ್ಲ. ಆಗ ನೋಡಿ ಗೊತ್ತಾಗತ್ತೆ!! ಬರೇ ನಾವು ಕೂಲಿ ಕೆಲ್ಸ ಮಾಡ್ತಿದ್ದೀವಿ ಅಂತ ಹೇಳ್ಕೊಳ್ಳೋದು ಬಿಟ್ಟು ಒಂದು product idea ಹೇಳು ಗುರು. ಆದು ಕೂಲಿ ಕೆಲಸ ಬಿಡಿಸಿ ನಿನ್ನ ಸಿಂಹಾಸನದ ಮೇಲೆ ಕೂರಿಸುತ್ತೆ! ಬೇಜಾರ್ಮಾಡ್ಕೊ ಬೇಡ, ನಿನ್ನ ಕೂಲಿ ಕೆಸದಿಂದ ನಿನ್ನ ಹೇಗೆ ಹೊರಗೆ ತರೋದು ಅಂತ ಸುಲಭಬಾಗಿ ಒಂದು optionಕೊಟ್ಟೆ ಅಷ್ಟೆ.
"ಈ ಸಾಫ್ಟ್ ವೇರ್ ಕಂಪನಿ ಜನರು ಇವರೆಲ್ಲಾ ಒಂಥರಾ ಅರ್ಧ ತುಂಬಿದ ಮಡಕೆಗಳು"
??!! ಅದು ತಪ್ಪು ಅಭಿಪ್ರಾಯ ಕಣಮ್ಮ. ಈಗ ನಿನ್ನನ್ನೇ ತಗೊ. ನೀನು ಎಷ್ಟು ಚಂದ ಬರೆದಿದ್ದೀಯ. ಏನೇನೋ ಯೊಚನೆ ಮಾಡ್ತಿದ್ದೀಯ. :) Generalize ಮಾಡ್ಬೇಡ್ವೋ ತಮ್ಮ. ಅದು ತಪ್ಪು. ಈ ಸಾಫ್ಟ್ ವೇರ್ ನಲ್ಲಿ ತುಂಬಿದ ಕೊಡಗಳೂ ಇವೆ. ಆದ್ರೆ ಆ ತುಂಬಿದ ಕೊಡಗಳು ಪ್ರಾಚಾರಕ್ಕೆ ಬರಲ್ಲ. ’ಎಲೆ ಮರೆ ಕಾಯಿ’ ಥರ ತಮ್ಮ ಪಾಡಿಗೆ ಇರ್ತಾವೆ. ಈನು ಮಾಡೊದು? ನಿನ್ನಂಥವರೇ ಅವರನ್ನ ಬಡಿದೆಬ್ಬಿಸಬೇಕು. ಮಾಡ್ತಿರ ಬಿಡ್ರಪ್ಪ!! :)
"ನಮ್ ಸಮಾಜಕ್ಕೆ ಏನಾದ್ರೂ ಕೈಲಾದಷ್ಟು ಮಾಡ್ಬೋದಾ ನೋಡ್ರಯ್ಯ, ನೀವು ನಮ್ ದೇಶದ ಪ್ರಜೆಗಳು ಅಲ್ವಾ"
ಅಂದ್ರೆ ಎಲ್ಲಾರೂ ನಂದೇ ನಂಗೆ ಅನ್ನಲ್ಲಪ್ಪ. ಸಮಾಜಕ್ಕೆ ಒಬ್ಬರಿಂದ ಏನೂ ಆಗಲ್ಲ. ಅದನ್ನ ಪಾಲಿಸುತ್ತಿರೋ ರಾಜಕಾರಣಿಗಳು ತಮ್ಮ ಕೈಜೋಡಿಸಬೇಕು. ಒಂದು ಉದಾಹರಣೆ ಕೊಡ್ತಿನಿ. ಸರ್ಜಾಪುರದ ರಸ್ತೆ ಗೆ
PPP ಪಾಲಸಿ ಹಾಕಿದ್ರು ಕೆಲವ ವರ್ಶಗಳಹಿಂದೆ. ಜ್ಞಾಪಕ ಇದ್ಯ? ಅದಕ್ಕೆ ವಿಪ್ರೊ ತಾನು ಹಣ ಕೊಡೋಕೆ ಮುಂದೆ ಬಂತು (ಅದರ ಸ್ವಾರ್ಥ ಜೊತೆಗೆ ಬೇರೆಯವರಿಗೂ ಸಹಾಯ ಆಗ್ತಿತ್ತು ಅನ್ನೋದೆ ಮುಖ್ಯ ಇಲ್ಲಿ). ಆದ್ರೆ ಅದು ಸರ್ಕಾರನ ಕೇಳಿದ್ದು ಇಷ್ಟೆ. ನಾನು ಕೊಡೊ ಹಣಕ್ಕೆ ಕಾಸು ಕಾಸಿಗೆ ಲೆಕ್ಕಾಬೇಕು ಹೆಂಗೆ ಕರ್ಚಾಯ್ತು ಅಂತ. ಅದಕ್ಕೆ ನಮ್ಮ ಸರ್ಕಾರ ’ನಿಮ್ಮ ದುಡ್ಡೇ ಬೆಡ. ನಮಗೆ ಅವಮಾನ ಮಾಡ್ತಿದ್ದಾರೆ’ ಅಂತು. ಸ್ವಾಮಿ ಸರ್ಕಾರಕ್ಕೆ ಅಷ್ಟು ಭರವಸೆ ಇದ್ದಿದ್ರೆ ಲೆಕ್ಕ ಕೊಡೊಕೆ ತಯಾರಾಗಿರಬೇಕಿತ್ತು ಅಲ್ವ?
ನನಗೂ ಸಹ basic science ತಗೊಳೋ ಹುಡುಗರ ಸಂಖ್ಯೆ ಕಡಿಮೆಯಾಗ್ತಿರೋದು ಸಂಕಟತರುತ್ತೆ. ಆದನ್ನ
HN ನಾನು collegeನಲ್ಲಿ ಓದಬೇಕಾದಾಗ್ಲೇ ಹೇಳ್ತಿದ್ರು. ಅದು ಹದಿನೈದು ವರ್ಷಗಳ ಹಿಂದೆನೇ. ಜನಕ್ಕೆ ಎಲ್ಲರಂತೆ ನಾನೂ ಜೀವನ ಸಾಗಿಸಬೇಕು ಅನ್ನೊ ಆಸೆ. ಅದೇ ಕಾರಣದಿಂದ್ಲೆ
UGC ತನ್ನ ಸಂಬಳ ಜಾಸ್ತಿ ಮಾಡಿದ್ದು ಉಪನ್ಯಾಸಕರಿಗೆ. ಇದೂ ಅಷ್ಟೆ IT ನಿಂದ ಪರೋಕ್ಷವಾಗಿ ಆಗಿರೊ ಸಹಾಯ. :)
ಹೊರದೇಶಗಳಿಗೆ ಹೋಗಿಬಂದು ಬೇರೇಥರನೇ ವರ್ತಿಸೊ ಭಾರತೀಯರಬಗ್ಗೆ ನಮಗೂ ಬೇಜಾರಿದೆ. ಅದಕ್ಕೆ ನನ ಬೇರೋಂದು
ಬ್ಲಾಗಿನಲ್ಲಿ ಹೇಳಿದ್ದೀನಿ.
ಇನ್ನು
ರವಿ ಬಗೆಗಿನ ಮಾತು. ನಾನೇನು ಅವರ ತುಂಬಾ ಬರಹಗಳನ್ನು ಓದಿಲ್ಲ. ಹಾಗಾಗಿ ಅವರ ಇತ್ತೀಚಿನ ಬರವಣಿಗೆಯ ಬಗ್ಗೆ ಸ್ವಾಮಿ ಅವರೂ ಕೂಡ ನಮ್ಮ-ನಿಮ್ಮಂತೆ ಸಾಧಾರಣ ಮನುಷ್ಯರು. ಆವರಿಗೂ ಬದಲಾವಣೆ ಇರುತ್ತೆ ಅಲ್ವ? ಸಮಯ ಸಂದರ್ಭ ಎಲ್ಲರನ್ನೂ ಸ್ವಲ್ಪ ಬದಲಾಗಿಸಬಹುದು. ಯಾಕಂದ್ರೆ ಅವರೇನೂ ಅತಿಮಾನವರಲ್ಲ. ಅಲ್ವೆ? ಸ್ವಲ್ಪ ಸಮಯ ಕೊಡಿ ಅವರ ಇತ್ತೀಚಿನ ಬರಹಗಳು ಜೊಳ್ಳು ಅನ್ನಿಸಿದರೆ. ಯಾಕೆಂದ್ರೆ ರವಿಯವರೇ ಹೇಳೋ ಹಾಗೆ ಅವರೂ ಸಹ ತಮ್ಮ ಬರವಣಿಗೆಯನ್ನು ಓದಿ ಅವಲೋಕಿಸುತ್ತಿರುತ್ತಾರೆ. ಅವರಿಗೇ ಹಾಗನಿಸಿದರೆ ಅವರು ಮತ್ತೆ ’ಅವರದೇ ಶೈಲಿ’ಗೆ ಬರುತ್ತಾರೆ. ಕಾಯಬೇಕು ಅಲ್ವ? ಯಾಕಂದ್ರೆ ಏನೇ ಆಗಲಿ ಅದಕ್ಕೆ ತನ್ನದೇ ಸಮಯ-ಕಾಲ ಆಂತಿರತ್ತೆ. ಅದು ಬರಲೇಬೇಕು.
ಹಿತೋಪದೇಷಗಳನ್ನ ಬೇಡಾನ್ಬೇಡಪ್ಪ. ಅದು ಎಲ್ಲಾರಿಗೂ ಬೇಕು. ಎಷ್ಟುಜನಕ್ಕೆ ಅದು ಸಹಾಯ ಮಡುತ್ತೊ ಗೊತ್ತಿಲ್ಲ. ಜೊತೆಗೆ, ಅದು ಅವರಿಗೆ ಓದುಗರಿದ್ದಾರೆ ಅಂತ ಗೊತ್ತಿರೋದ್ರಿಂದ್ಲೇ ಅದು ಬರ್ತಿರೋದು. ಇಲ್ಲದಿದ್ರೆ ಅವರು ಜನ ಓದದೇ ಇರೋದು ಬರೆದು ಲಾಸುಮಾಡ್ಕೊಳ್ಳೋಲ್ಲ. ಅಲ್ವ?
ಹುಂ?? :)