Monday, August 25, 2008

ಫೂಂಕ್ - modern ತುಳಸಿ ದಳ...

"ಫೂಂಕ್ ಗೆ ಭಾನುವಾರಕ್ಕೆ ಟಿಕೆಟ್ ಸಿಕ್ಕಿದೆ"

"ಹೂಂ, ನಾನು ಬರಲ್ಲ.. ನೀವು ಬೇಕಾದ್ರೆ ಹೋಗಿ"

"ಅಯ್ಯೋ! ಅದ್ರಲ್ಲಿ ಏನೂ ಇರಲ್ಲ, ನಿಂಗೆ ಭಯ ಆದ್ರೆ, ಶಾಪಿಂಗ್ ಮಾಡ್ತಿರು!!"

"ನಾನೂ ನೋಡ್ತೀನಿ ಕಂಡ್ರಿ, ಅದರಲ್ಲೇನಿದೆ ಅಂತ, ನಡೀರಿ ಹೋಗಣ.."


ಅಂತೂ ನಾನು ನನ್ನ ಹೆಂಡ್ತಿ ಹೊರಟ್ವಿ. ಶನಿವಾರದ ಒಂದು ad ನಲ್ಲಿ ನೋಡಿದ ಒಂದು scene, ನನಗ್ಯಾಕೋ ಇದು ಕನ್ನಡದ ಹಳೆಯ remake ಇರಬೇಕು ಅನ್ನಿಸ್ತು. ಸರಿ ಇನ್ನೇನು, ನೋಡಿದಾಗ ಗೊತ್ತಾಗತ್ತೆ ಅಂತ ಹೊರಟೆ. ೨ ಗಂಟೆಗೆ ಸರಿಯಾಗಿ show ಶುರುವಾಯ್ತು. ನೋಡ್ತಾ ನೋಡ್ತಾ, ಹೌದು.. ಇದು mordern 'ತುಳಸಿ ದಳ' ನೆ!! ಶರತ್ ಬಾಬು, ಬೇಬಿ ರೇಖಾ, ಸುಂದರ್ ರಾಜ್, ತಾರ [ನನ್ನ ನೆನಪು ಸರಿಯಿದ್ದರೆ ಅವರು ಬೆಳ್ಳಿಪರದೆಜೀವನ ಪ್ರಾರಂಭಿಸಿದ್ದು ಈ ಚಿತ್ರದಿಂದ] (ಎಲ್ಲಾರೂ ಜ್ಞಾಪಕದಲ್ಲಿಲ್ಲ) ನಟಿಸಿದ್ದ ೮೦ರ ದಶಕದ ಕನ್ನಡ ಪಿಕ್ಚರ್ ನ modern ಅವತಾರನೇ ಇದು. ಅದನ್ನೇ ನನ್ನ ಹೆಂಡತಿಗೆ ಹೇಳ್ದೆ. ಸಿನೆಮಾ ನೋಡ್ತ ಅವಳೂ ಹೆದರಲಿಲ್ಲ.. :)


RGV ಅವರು ಈ ಸಿನೆಮಾನ ಒಬ್ಬರೇ ನೋಡಿದ್ರೆ ೫ ಲಕ್ಷ ಕೊಡ್ತೀನಿ ಅಂತ ಹೇಳಿದರಂತೆ. ಸಿನೆಮಾನ ನೋಡ್ತಸುಲಭವಾಗಿ ೫ ಲಕ್ಷ ಕಳೆದು ಕೊಂಡೆ ಅನ್ನಿಸ್ತು. ಚಿತ್ರ, ಕೆಲವು ವಿಮರ್ಷಕರುಹೇಳಿದಂತೆ ತುಂಬಾ ಕಳಪೆಏನಲ್ಲ. ಜೊತೆಗೆ ನಮ್ಮ ಕಿಚ್ಚ ಸುದೀಪ್ ಚೆನ್ನಾಗೇ ಮಾಡಿದ್ದಾರೆ. ಅವರ ಛಾಯೆ ಚೆನ್ನಾಗೇ ಮೂಡಿದೆ. ನಾನು ತುಳಸಿ ದಳ ನೋಡಿದಾಗ, ನಾನು ಚಿಕ್ಕವನಿದ್ದೆ. ನಿಜವಾಗಿ ಅದನ್ನ ದೊಡ್ಡ ಪರದೆಯ ಮೇಲೆ ನೋಡಿದಾಗ ಭಯಗೊಂಡಿದ್ದೆ. ನಿಜವಾಗಿ ಅ ಚಿತ್ರದಲ್ಲಿ 'ವಾಮಾಚಾರ'ದ ಭಯಂಕರ ನೋಟ ತೋರಿಸಿದ್ದಾರೆ ನಿರ್ದೇಶಕರು. ಹೊಸ ಚಿತ್ರದಲ್ಲಿ special effects ಹೊಸ ತಂತ್ರಜ್ಞಾನದಲ್ಲಿ ಜೋರಾಗಿ ಚಿತ್ರಿಸಿದ್ದಾರೆ.. ಏನೇ ಆಗಲೀ, ನಿಜವಾದ ವಾಮಾಚಾರದ ಭಯ ತುಳಸಿ ದಳದಲ್ಲೇ ಆಗೋದು.


ಈ ವಾಮಾಚಾರ ಅಂದ್ರೆ ಜ್ಞಾಪಕಕ್ಕೆ ಬಾರೋ ಇನ್ನೊಂದು ಹಳೆಯ ಕನ್ನಡ ಚಿತ್ರ ಅಂದ್ರೆ 'ಏಟು ಎದುರೇಟು' (ಶ್ರೀನಾಥ್, ಲಕ್ಷ್ಮಿ, ಸುಂದರ ಕೃಷ್ಣಾ ಅರಸ್). ಅಬ್ಬ! ನಿಜವಾಗಿ ಭಯ ಆಗಲ್ವ? ಈಗ TV ನಲ್ಲಿ ಅದನ್ನ ನೋಡಿ ಭಯ ಹೋಗಿರಬಹುದು ಆದ್ರೆ ಮೊದಲು ನೋಡಿದಾಗ ನನಗಂತೂ ಭಯವಾಗಿತ್ತು. :)

------------------------------

ಅದನ್ನ ಮುಗಿಸಿಕೊಂಡು ಹೊರಡುವಾಗ ನನ್ನ ಮೊಬೈಲ್ ಕೂಗ್ತು.. "ಎಲ್ಲಿದ್ದೀಯ? ಬರ್ತಿಯಾ?" ಅಂತ ಅತ್ತ ಕಡೆಯಿಂದ ನನ್ನ ಮಾವ ಕೇಳಿದ್ರು. "ಹೂಂ, ಬರ್ತಿದ್ದೀನಿ, function ಶುರುವಾಯ್ತ ಆಗ್ಲೇ?" ಅಂತ ಹೇಳಿ ನನ್ನ ಹಳೆಯ ಕಾಲೇಜಿನ ಕಡೆ ನನ್ನ ಕಾರನ್ನ ತಿರುಗಿಸಿದೆ - ನ್ಯಾಷನಲ್ ಕಾಲೇಜ್, ಜಯನಗರ.. ಅಲ್ಲಿನ H.N. ಕಲಾಕ್ಷ್ಟೇತ್ರ ದಲ್ಲಿ ನಮ್ಮ ದೊಡ್ಡಪ್ಪ, H. C. ರಾಮಾಶಾಸ್ತ್ರಿ, ಅವರಿಗೆ ಸನ್ಮಾನ ಸಮಾರಂಭ ಇತ್ತು. ನಮ್ಮ ದೊಡ್ಡಪ್ಪ ಏನೆಲ್ಲಾ ಮಾಡಿದ್ದಾರೆ - ಕನ್ನಡ ಮತ್ತು ಸಂಸ್ಕೃತ ಕ್ಷೇತ್ರಗಳಲ್ಲಿ ಅಂತ ನಮಗೆ ಸಂಪೂರ್ಣವಾಗಿ ಅರಿವಾದದ್ದೆ ನಿನ್ನೆಯ ಸಮಾರಂಭದಲ್ಲಿ. ಅವರು ಸಂಸ್ಕೃತದಲ್ಲಿ ವಿದ್ವಾಂಸರು ಅಂತ ಗೊತ್ತಿತ್ತು, ನಮ್ಮ ಮೈಸೂರು ಮಹಾರಾಜರಲ್ಲಿ ಕೈ ಕಡಗ ಪಡೆದಂಥವರು ಅಂಥ ನನ್ನಮ್ಮ ಹೇಳುತ್ತಿದ್ದುದು ನೆನೆಪಿಗೆ ಬಂತು. ಆದರೂ ವಿಶ್ವ ಸಂಸ್ಕೃತ ಪ್ರತಿಷ್ಠಾನ ದವರು ಸನ್ಮಾನಿಸುವುದು ನಮಗೆ ಅಲ್ಪದ ವಿಷಯವಲ್ಲ - ಬಹು ದೊಡ್ಡದು. ನಾನಂತೂ ಹೆಮ್ಮೆಯಿಂದ ಬೀಗಿದೆ! ಅದೇ ವಿಷಯ ಹೇಳಬೇಕು ಅಂತಾನೆ ನನ್ನ ಬ್ಲಾಗಿನಲ್ಲಿ ಅವರ ವಿಷಯ ಬರೆದಿಡೋದು.. ನನ್ನ ದೊಡ್ಡಪ್ಪನ ಹೆಸರಿನಲ್ಲಿ ನಾನು ಸ್ವಲ್ಪ show-off ಮಾಡ್ತಿದ್ದೀನಿ ಅಷ್ಟೆ!! :)

ಪ್ರತಿಷ್ಠಾನ ದ website ಇರಬಹುದೆಂದು ಹುಡುಕಿದೆ. ಅವರದ್ದು ಪುಸ್ತಕದಲ್ಲೂ ತಡಕಾಡಿದೆ, ಎಲ್ಲೂ ಸಿಗಲಿಲ್ಲ! ಆದರೆ, ಇವತ್ತಿನ ವಿಜಯ ಕರ್ನಾಟಕದಲ್ಲಿನ 'ಉದ್ಯಾನ ನಗರಿ'ಯ ಒಂದನೇ ಪುಟದಲ್ಲಿ ಎಡಭಾಗದ ಕಾಲಂನಲ್ಲಿ ಮೊದಲನೆ ಚಿತ್ರದಲ್ಲಿ ದೊಡ್ದಪ್ಪನವರಿಗೆ ಸನ್ಮಾನಿಸಿದ ಬಗ್ಗೆ ಬರೆದಿದೆ.


Wednesday, May 28, 2008

ನಾನೋಡಿ ನಲಿಯುವ ಕಾರವಾರ..

ಹೆಚ್ಚು ಕಡಿಮೆ ನಾಲ್ಕು ವರ್ಷಗಳಾದ್ಮೇಲೆ ನಾನು, ನನ್ನ ಇಬ್ಬರು ಸ್ನೇಹಿತರು (we call ourselves '3kapis') ಪ್ರವಾಸ ಹೊರೆಟ್ವಿ. ನಾವು ಯಾವತ್ತೂ ಹೆಚ್ಚು plan ಮಾಡಿ ತಲೆಕೆಡಿಸಿಕೊಂಡದ್ದೇ ಇಲ್ಲ. ಆ ಸಮಯದಲ್ಲಿ ಹೇಗಾಗ್ತದೋ ಹಾಗೇ.. ಪ್ರವಾಸಕ್ಕೆ ಗೋವಾದಿಂದ ಶುರು ಮಾಡಿ, ಬರೀ trekking ಅಂತ discuss ಮಾಡಿ ಕೊನೆಗೆ ಕಾರವಾರದಲ್ಲಿ ನೀರಾಟವಾಡೋದು ಅಂತ ನಿರ್ಧಾರ ಮಾಡಿದ್ವಿ. ಈಗ ಜಾಗನೇನೋ ಆಯ್ತು, ಆದ್ರೆ ನಮ್ಮೆಲ್ಲರಿಗೂ ಒಟ್ಟಿಗೆ ರಜ ತಗೊಳೋಕ್ಕೆ ಆಗತ್ತಾ ಅನ್ನೊ ಪ್ರಶ್ನೆ! ಒಂದೆರಡು ತಿಂಗಳು ಕಾಯ್ದು ಕೊನೆಗೆ ಅದೂ ಅಯ್ತು. ಏಪ್ರಿಲ್ 18 ಹೊರಡೋದು ಅಂತ ನಿರ್ಧರಿಸಿದ್ವಿ. ಈಗ ಒಳಿದುಕೊಳ್ಳೋ ಪ್ರಶ್ನೆ! Internet ನಮಗೆ ಬಹಳ ಸಹಾಯ ಮಾಡ್ತು. ಅದೂ ಅಯ್ತು. ಒಂದು ಒಳ್ಳೇ ಜಾಗ ಹುಡುಕಿದ್ವಿ. ಹೋಗೋದು ನಮ್ಮ ಕಾರಿನಲ್ಲೇ ಅಂತ ಅಂದುಕೊಂಡಿದ್ವಿ, ಹಾಗಾಗಿ ಒಬ್ಬನ Indigoನ ರೆಡಿ ಮಾಡಿಕೊಂಡ್ವಿ. ಹೋಗ್ತ ಹುಬ್ಬಳ್ಳಿ ಕಡೆ ಹೋಗಿ ಬರ್ತ coastal ದಾರಿ ಹಿಡಿಯೋದು ಅಂತ ಮಾತಾಯ್ತು

ಇಷ್ಟಾದ್ಮೇಲೆ ಏಪ್ರಿಲ್ ೧೮ ಬಂದೇ ಬಿಡ್ತು. Finally 3Kapis are all set to enjoy their bachelorhood again!! ಬೆಳಗ್ಗೆ 5 ಗಂಟೆಗೂ ಮುಂಚೆ ಹೊರಡುವುದು ಅಂತ ಅಂದುಕೊಂಡ್ರೂ ಬೇರೆ ಎಲ್ಲಾ tripಗಳ ಥರನೇ ನಾವು ಹೊರಡುವುದು 5:20 ಆಯ್ತು. ಬೆಳಗ್ಗೆ ಹೊರಟಿದ್ದರಿಂದ, ಬೆಂಗಳೂರಿನ traffic ಅಷ್ಟಾಗಿರಲಿಲ್ಲ, ಆದ್ರೂ ಪೀಣ್ಯದ ಹತ್ರ ಯಥಾಪ್ರಕಾರ!! ನೆಲಮಂಗಲ ಧಾಟಿ toll ರಸ್ತೆಯಲ್ಲಿ ಸಕ್ಕತ್ತಾಗಿ ಹೊಡೆದ್ವು. ರಸ್ತೆ ತುಂಬಾ ಚೆನ್ನಾಗಿದೆ. ಆದ್ರೆ ಸ್ವಲ್ಪ toll ಬೆಲೆ ಜಾಸ್ತಿ ಆನಿಸ್ತು ಅಷ್ಟೆ. ನಾವು ಚಿತ್ರದುರ್ಗ by-pass ತಲುಪಿದಾಗ ಬೆಳಗ್ಗೆ 9:35 ಆಗಿತ್ತು. ಅಲ್ಲೇ ಇದ್ದ Reliance A1 restaurant ನಲ್ಲಿ ತಿಂಡಿ ಆಯ್ತು. ಆಲ್ಲಿ ಬಿಟ್ಟೋರು ನಿಲ್ಲಿಸಿದ್ದು ಹುಬ್ಬಳ್ಳಿನಲ್ಲೇ. ಚಿತ್ರದುರ್ಗಕ್ಕೆ ಹೋಗೋ ಮುಂಚೆ, ತುಂಬಾ wind millಗಳಿವೆ. ಆವುಗಳನ್ನ ನೋಡೋಕೆ ತುಂಬಾ ಚೆನ್ನಗಿದೆ. ಹೋಗ್ತ ಹಾಗೇ ಕಾರು ನಿಲ್ಲಿಸಿ ಒಂದು ಪಟ ತೆಗೆದ್ವಿ.





ನಾವೆಲ್ಲಾರೂ ಇದೇ ಮೊದಲು Indigoನಲ್ಲಿ ಟ್ರಿಪ್ ಹೋಗಿದ್ದು. Except slow pick-up in the lower gears, ಸ್ಪೀಡ್ ಬಂದಮೇಲೆ ಎಲ್ಲಾಚೆನ್ನಾಗಿತ್ತು. A/C is good, especially the suspensions!

ಇಷ್ಟುಹೊತ್ತಿಗೆ ನಮಗೆ ಸಕ್ಕತ್ತಾಗಿ ಸೆಕೆ ಆಗಕ್ಕೆ ಶುರು ಆಗಿತ್ತು. ಸರಿ, ನಾವು ಹುಬ್ಬಳ್ಳಿ ಸೇರಿದಾಗ ಊಟದ ಸಮಯ. ದಿನಾ officeನಲ್ಲಿ ಗಂಟೆ 12 ಠಾಂಥೊಡಿತ್ಲೂನುವೆ, ಊಟ-ಊಟ ಅಂತ ಕರೇತಿದ್ದ ಸಹೋದ್ಯೊಗಿಯ ನೆನಪಾಯ್ತು! ಈಗ ಗಂಟೆ 1:30. ಇನ್ನು ತಡಮಾಡೋದೆ? ಸರಿ, ಎಲ್ಲಿ ಹೋಗೋದು. ನಾವು ಅಷ್ಟುಹೊತ್ತಿಗೆ, ಚೆನ್ನಮ್ಮನ ಪುಥ್ಥಳಿ ಧಾಟಿ ಹೋಗಾಗಿತ್ತು. ಹುಬ್ಬಳ್ಳಿ ಅಂತ ಅಲ್ಲಿನ ಲೋಕಲ್ ಊಟ ಮಾಡೊಣ ಅಂತ ಅಲ್ಲಿದ್ದ ಒಬ್ಬ ದಾರಿಹೋಕನ್ನ ಅವರದೇ ಇಷ್ಟೈಲ್ ನಲ್ಲಿ ಮಾತಾಡಿಸೋ ಹುಮ್ಮಸ್ಸಿನಲ್ಲಿ ’ಇಲ್ಲಿ ಛಲೋ ಊಟ ಎಲ್-ಸಿಕ್ದದಪ?’ ಅಂದೆ. ಅವ, ’ನೀವ್ ಹಿಂಗಾ ತಿರುಗ್ ಹೋಗ್ರಿ, ಕಾಮತ್ ಐತ್ರಿ’ ಅಂದ, ಸರಿ ಹೊರೆಟ್ವಿ. U ಟರ್ನ್ ಮಾಡಿದ ತಕ್ಷಣ ’ಹೋಟೆಲ್ ಕಾಮತ’ ಇತ್ತು. ಅಲ್ಲೇ ಕಾರು ನಿಲ್ಲಿಸಿ ಒಳಗೆ ಹೋದ್ವಿ. ನಮಗಾಗ್ಲೆ ಶೆಕೆ, ಒಳಗೆ A/C ಅಂತ ಬರೆದಿದ್ದ ರೂಮ್ ಗೆ ಹೋದ್ವಿ. ಅಲ್ಲಿ ನಮ್ಮದೃಷ್ಟಕ್ಕೆ ನಮ್ಮ ಮುಂದಿದ್ದ AC ಚಾಲೂನೇ ಇರ್ಲಿಲ್ಲ! :( ಹೋತೆಲ್ನವ ’ಅದು ನಡಿತಿಲ್ರಿ’ ಅಂತ ನಕ್ಕ! ನಮ್ಮ ಹಣೇಬರಹ ಅಂತ ಕೂತ್ವಿ. ಮಾಲೀಕಂಗೆ ನಮ್ಮ ಕಷ್ಟ ಗೊತ್ತಾಯ್ತೋ ಏನೊ, ನಡೀತಿದ್ದ AC ನಿಲ್ಲಿಸಿ ನಮ್ಮ AC ಚಾಲೂ ಮಾಡಿದ! ಊಟ ಲೊಕಲ್ ಸಿಗಲಿಲ್ರೀ ಅಲ್ಲಿ. ಬರೇ North Indian, South Indian ಥಾಲಿ, ಅಂದ ಅವ! ನಮ್ಮ ಬೆಂಗಳೂರಿನ ’ಸಾಗರ’ ಗಳೇ ನೆನಪಾದ್ವು. ಹುಬ್ಬಳ್ಳಿನಾಗೂ ಅದೇ ಊಟ! ಸರಿ ಅಯ್ತು. ಈಗ ನನ್ನ ಸರದಿ. ಅಲ್ಲಿನ ಬಿಸಿ ನೋಡಿ ನನ್ನ ಹೆಂಡ್ತಿ ’sunscreen ತಗೊಂಡು ಹೋಗ್ರಿ, ಅಲ್ಲಿಂದ full tan ಆಗಿ ಬರ್ತಿರ ಇಲ್ಲಾಂದ್ರೆ’ ಅಂದಿದ್ದು ಜ್ಞಾಪಕ ಬಂತು. ಇಲ್ಲಿ Health & Glow ಸಿಗುತ್ತಾ ಅಂತ ಕೇಳಿ ನನ್ನ ಉಳಿದೆರಡು ಕಪಿಗಳಿಂದ ಬಯ್ಯಿಸಿಕೊಂಡೆ. ಕೊನೆಗೆ ಒಂದು ಮೆಡಿಕಲ್ ಶಾಪಿನಲ್ಲಿ ಸಿಕ್ತು.

ಹುಬ್ಬಳ್ಳಿಯಿಂದ ಬಿಟ್ಟಾಗ ಮದ್ಯಾನ್ಹ ಸುಮರು 3:30 ಆಗಿತ್ತು. ಅಲ್ಲಿಂದ ಕಲ್ಘಟಗಿ, ಯೆಲ್ಲಾಪುರ ಕಡೆಯಿಂದ NH17 ಅಂಕೋಲ ಸೇರಿದ್ವಿ. ಈ ದಾರಿಯಲ್ಲಿ ಓಡಿಸೋದು ಸ್ವಲ್ಪ ಕಷ್ಟ ಆಯ್ತು, ಬರೇ ಲಾರಿಗಳು. ಈಗ ರಸ್ತಬದಿಯ ಮಣ್ಣು ಕೆಓಪಿತ್ತು. ನಾವು ’ಇಲ್ಲಿಯ ಮಣ್ಣು ಕೆಂಪು, ಇಲ್ಲಿ ಇದು ಬೆಳೀತಾರೆ, ಅದು ಬೆಳೀತಾರೆ’ ಅಂತ ಮಾತಾಡಿದ್ದೇ ಮಾತಾಡಿದ್ದು. ಅಂಕೋಲ ಬಿಟ್ಟು ಸ್ವಲ್ಪ ಮುಂದೆ ಹೋದಾಗ ಗೊತ್ತಯ್ತು ಅದೆಲ್ಲ ಲಾರಿಯಿಂದ ಸಾಗಿಸುತ್ತಿದ್ದ ಅದಿರು ಬಿದ್ದು ಆ ಬಣ್ಣಕ್ಕೆ ಬಂದಿದೆ ಅಂತ!! ;-)

ನಾವು ಕಳೆದ ಬಾರಿ ಗೋವಾಗೆ ಹೋಗುವಾಗ Seabird project ನೋಡಿದ್ದು. ಈಗ ಹೇಗಿರಬಹುದು, ಎಷ್ಟು ನೋಡೋಕೆ ಸಿಗುತ್ತೆ ಅಂತ ಅಂದುಕೊಂಡು ಬಂದ್ವಿ, ಆದ್ರೆ ಸ್ವಲ್ಪ ಹೊಸ ಕತ್ತಡಬಿಟ್ರೆ ಮತ್ತೇನೂ ಹೊಸದು ಕಾಣಲಿಲ್ಲ. ಯಾರೋ ಕಾರವಾರದಲ್ಲಿ ಸೂರ್ಯ ಮುಳುಗೋದು ಸುಂದರವಾಗಿ ಕಾಣುತ್ತೆ ಅಂದದ್ದು ಜ್ಞಾಪಕ, ಸರಿ, ಓಡಿಸುತ್ತಿದ್ದವನಿಗೆ ಹೇಳಿದೆ, ಸೂರ್ಯ ಮುಳುಗೋ ಮುನ್ನ ನಾವು ಕಾರವಾರದಲ್ಲಿರಬೇಕು ಅಂತ. ಪ್ರಯತ್ನ ಪಟ್ಟು ಸಂಜೆ 6:15ಕ್ಕೆ ಕಾರವಾರ ತಲುಪಿದ್ವಿ. ನಮ್ಮ ಕಣ್ಣುಗಳಿಗೆ ಮಾತ್ರ ಸೂರ್ಯ ಕಂಡ, ಆದ್ರೆ ನಮ್ಮ ಕ್ಯಾಮೆರದಲ್ಲಿ ಮಾತ್ರ ಸೆರೆಹಿಡಿಯಕ್ಕಾಗಲಿಲ್ಲ. ಪರವಾಗಿಲ್ಲ, ನಾವಿರೋದೇ ದ್ವೀಪದಲ್ಲಿ, ಅಲ್ಲಿ ತೆಕ್ಕೊಂದ್ರಾಯ್ತು ಅಂತ ಮುಂದುವರೆದ್ವಿ. ಕಳೆದಬಾರಿಯ chaat ನಮ್ಮ ಬಾಯಲ್ಲಿ ನೀರುಬರಿಸಿತು. ಆಗ ಕಾರವಾರದ ರವೀಂದ್ರನಾಥ ಠಾಗೋರ್ ಬೀಚ್ ಈಗಿರೋಹಾಗಿರಲಿಲ್ಲ. ರಸ್ತೆಯ ಬದಿಯಲ್ಲಿ ಸಾಲು ಸಾಲಾಗಿ ಗಾಡಿಯಲ್ಲಿ ಭೇಲ್, ಮಸಾಲ್ ಪುರಿ ಮುಂತಾದೋವೆಲ್ಲಾ ಬೋ ಚೆನ್ನಾಗಿ ಮಾಡಿದ್ರು. ಈಗ ಅವರೆಲ್ಲಾ ಬೀಚ್ ಓಳಗೆ ಹೋಗಿದ್ದಾರೆ. ಬೀಚ್ನಲ್ಲಿ ಸ್ವಲ್ಪ ಹೊತ್ತು ವಿಹರಿಸಿ ತಿನ್ನೋಣ ಅಂದುಕೊಂಡ್ವಿ. ಸಂಜೆ ತುಂಬಾ ಚೆನ್ನಾಗಿತ್ತು! ಮಾನೋ ಮೂರ್ತಿಗಳ ’ಈ ಸಂಜೆ ಯಾಕಾಗಿದೆ, ನೀನಿಲ್ಲದೆ...’ ಅಂತನೂ ಗುನುಗಿ, (ಪ್ರೇಯಸಿಯನ್ನ ನೆನೆದು) chaat ಗಾಡಿಗಳ ಹತ್ರ ಬಂದ್ವಿ. ಆಲ್ಲಿ ಸ್ವಲ್ಪ ಸೇವಿಸಿ, ಅದೇ ಬೀಚ್‍ನಲ್ಲಿ ನಡಿತಿದ್ದ ’ಕಲಾ ವೈಭವ 2008' ಅನ್ನೋ ಕಾರ್ಯಕ್ರಮದಲ್ಲಿ ಯಾರದೋ ಭರತನಾಟ್ಯದ ಪುಗಸಟ್ಟೆ ಮನರಂಜನೆ ತಗೊಂಡು ಸಮಯ ನೋಡಿದ್ರೆ ಆಗ್ಲೇ ರಾತ್ರಿ ಎಂಟಾಗಿತ್ತು.




ರಾತ್ರಿ ಉಳಿದುಕೊಳ್ಳೋಕೆ ವ್ಯವಸ್ಥೆ ಆಗಬೇಕಿತ್ತು. ಸರಿ ಹೋಟೆಲ್ ಹುಡುಕಿ ಹೊರಟೆವು. ರಾತ್ರಿ ಮಲಗೋಕೆ ರೂಮು ಮಾಡಿ ಬೆವರು ತೆಗೆಯೋಕೆ ತಣ್ಣನೆಯ ನೀರಿನಲ್ಲಿ ಒಂದು ಸ್ನಾನ ಮಾಡಿದ್ದಾಯ್ತು. ಒಂದು ಕಪಿ ಮಾತ್ರ ಊಟಮಾಡಿ ಮಲಗೋಕ್ಕೆ ಮುಂಚೆ ಸ್ನಾನ ಮಾಡ್ತಿನಿ, ಈಗ ಮಾಡಲ್ಲ ನೀವು ಬೇಕಾದ್ರೆ ಮಾಡಿ ಅಂತು. ಆಗ ಮೂರ್ಖರ ಪೆಟ್ಟಿಗೆ ನೆನಪುಮಾಡ್ತು IPL ಇವತ್ತಿಂದ ಶುರು ಅಂತ. ನೋಡಿದ್ವಿ. ಬೆಂಗಳೂರಿನವರು ಚೆನ್ನಾಗಿ ಹೊಡೆಸಿಕೊತಿದ್ರು. ಊಟ ಮುಗಿಸಿ ನೋಡುವ ಅಂತ ಹೊರಟ್ವಿ. ಊಟ ಮುಗಿಸಿ ಬರೋ ಹೊತ್ತಿಗೆ ನಮ್ಮವರು ಸೋತು ಹೋಗಿದ್ರು. ಬೆಳಗ್ಗೆ ಬೇಗ ಎದ್ದು ರೆಸಾರ್ಟ್‌ಗೆ ಹೋಗೋಕೆ ಮುಂಚೆ ಬೇರೆಯೇನಾದ್ರೂ ನೋಡ್ಬೇಕು ಬೇಗ ಏಳೋಣ ಅಂತ ಸುಮಾರು 11:30 ಹೊತ್ತಿಗೆ ಮಲಗಿದ್ವಿ. ’ನಿಮ್ ರೂಂಗೆ ಹೋಸ AC ಫಿಟ್ಮಾಡ್ಸಿದ್ದೇನಿ ಸಾರ್’ ಅಂದಿದ್ದ ಮಾಲೀಕನ್ನ ’ಮಗಾ, ಬರೀ ಶಬ್ದ ಮಾಡೊ AC ಹಾಕ್ಸಿ ಹೊಸ್ದು ಅಂತ ಜಾಸ್ತಿ ದುಡ್ಡು ತಕಂಡ್ತಿದಾನೆ ನನ್ಮಗ’ ಅಂತ ಬಯ್ದು ನಿದ್ದೆ ಹೋದ್ವಿ.

ಎರಡು ಕಪಿಗಳೂ ತಮ್ಮ ಅಲಾರ್ಮ್ ಎರಡು-ಮೂರು ಸಲ snooze ಮಾಡಿ ಕೊನೆಗೆ ನಿಲ್ಲಿಸಿದ್ವು. ಎದ್ದು ನೋಡಿದಾಗ ಗಂಟೆ 8!! ಬೇಗ ಏಳ್ರೋ ಅಂತ ಕೂಗಿ ಎಲ್ಲಾರೂ ಸ್ನಾನ ಮಾಡಿ ತಿಂಡಿಗೆ ಹೊರಡೋಹೊತ್ತಿಗೆ 10:30!! ಅಷ್ಟೊತ್ಗೆ ನನ್ನ ಮೊಬೈಲು ಕೆನೆಯಿತು! ಯಾರಿದು ಅಂತ ನೋಡಿದ್ರೆ ಆಕಡೆಯಿಂದ ಒಂದು ಲಲನಾಮಣಿ!! ನಮ್ಮ ರೆಸಾರ್ಟ್ ಕಡೆದು - ಎಷ್ಟ್‌ಹೊತ್ಗೆ ಬರ್ತಿರ ಅಂತ. ನಾವು ಸುಮಾರು 11:30 ಹೊತ್ಗೆ ಬರ್ತಿವಿ ಬೋಟು ಎಷ್ಟುಹೊತ್ತಿಗಿದೆ ಅಂತ ವಿಚಾರಿಸಿ ತಿಂಡಿ ತಿನ್ನೋಕೆ ಹೊರಟ್ವಿ. ತಿಂದು ಅವರು ಕೊಟ್ಟ ಲ್ಯಾಂಡ್‍ಮಾರ್ಕ್ ಕೇಳಿಕೊಂಡು ಅವರ officeಗೆ ಬಂದ್ವಿ. In fact, ನಿನ್ನೆ ನಾವು ಸೂರ್ಯ ಮುಳುಗೋದನ್ನ ಅವರ officeಪಕ್ಕದಲ್ಲೇ ನಮ್ಮ ಕಾರನ್ನ ನಿಲ್ಲಿಸಿ ನೋಡಿದ್ವಿ, ಆದ್ರೂ ಅವರ officeನ ಗಮನಿಸಿರಲಿಲ್ಲ!! (ಎಂಥಾ ಗಾಂಪರು ನಾವು!!) ಆಲ್ಲಿಂದ ನಮ್ಮನ್ನ ಅವರ jettyಗೆ ಕರೆದ್ಕೊಂಡು ಹೋದ್ರು. ಪಕ್ಕದಲ್ಲಿ ನಮ್ಮ ಕಾರು ನಿಲ್ಲಿಸಿ ಒಂದು ಸಣ್ಣ ಬೋಟಿನಲ್ಲಿ ಹೊರಟ್ವಿ. ನಾವು ಹತ್ತಿದ ಜಾಗದಲ್ಲೇ ಕಾಳಿ ನದಿ ಸಮುದ್ರ ಸೇರೋ ಸಂಗಮ ವಂತೆ. ನದಿ ಸೇರೋ ಕಡೆಯಿಂದ ಸಮುದ್ರ ಪ್ರವೇಶ ತುಂಬಾ ಖುಷಿತಂತು ನಮಗೆ.




ನಾವು ಹೋಗ್ತಿದ್ದ ರೆಸಾರ್ಟ್ -
ದ ಗ್ರೇಟ್ ಔಟ್‍ಡೋರ್ ಐಲ್ಯಾಂಡ್ ರೆಸಾರ್ಟ್ ಅಂತ. ಅಲ್ಲಿ ಅವರದ್ದೇ ಆದ water sports ಇವೆ. ನಮಗಾಗಿ ಅಲ್ಲೊಂದು ಗುಡಿಸಲು ಕಾಯ್ತಿತ್ತು. ಸುಮಾರು ದೊಡ್ಡದೇ ಆ ಕುಟೀರ.






ಅದೇ ಹೊತ್ತಿಗೆ ಊಟ ಬಂತು! ಚಪಾತಿ, ಪಲ್ಯ, ದಾಲ್, ಪಲಾವ್, ಮೊಸರನ್ನ.. ಎಲ್ಲಾ ರುಚಿಯಾಗಿತ್ತು (ಹೊಟ್ಟೆ ಕೂಡ ಹಸಿದಿತ್ತು ಅನ್ನಿ!). ತಿಂದು ಅಲ್ಲಿದ್ದ ರೆಸಾರ್ಟ್ನವರೊಂದಿಗೆ ಮಾತಾಡಿದ್ವಿ, ಏನೇನು ಮಾಡಬಹುದು ಅಂತ. ಕೆಲವೊಂದು activities”ಈಗ ಆಗಲ್ಲ, ಹವಾಮಾನ ಸರಿಗಿಲ್ಲ, ಪ್ರಯತ್ನ ಮಾಡೋಣ’ ಅಂದ್ರು. ನಾವು scuba diveಮಾಡಿಯೇಬಿಡೋದು ಅಂತ ಮಾತಾಡಿದ್ವಿ ಮುಂಚೆ! ಆದ್ರೆ, ಅದು ಇಲ್ಲಿ ಮಾಡಿಸೋದೇ ಇಲ್ಲ, ಆಳ ಮತ್ತು ಜನ ಇಲ್ಲ, ಗೋವಾಗೆ ಹೋಗಿ ಅಂದ್ರು. ಸರಿ.. ಒಂದು ನಮ್ಮ ಬಲವಾದ ಆಸೆಯಿದ್ದ ಆಟ ನಮ್ಮ ಕೈ ಬಿಟ್ಟಿತು. ಉಳಿದದ್ದು ಮಾಡೋಣ ಅಂತ ಅಂದುಕೊಂಡ್ವಿ.”ಈಗ ಸ್ವಲ್ಪ ರೆಸ್ಟ್ ತಗೊಳಿ, 4 ಗಂಟೆ ಹೊತ್ತಿಗೆ ಹೋಗಣ’ ಅಂದ್ರು ಚಂದನ್! ಸರಿ, ಉರಿತಿರೊ ನೀರಿಳಿಸೋ ಬಿಸಿಲು, ಚೆನ್ನಾಗಿ ಊಟವಾಯ್ತು, ಮಲಗಕ್ಕೆ ಹೇಳ್ತಿದ್ದಾರೆ, ’ಲೋ ನಾವೆಲ್ಲ ಕುಂಭಕರ್ಣನ ಜಾತಿಗೆ ಸೇರಿರೋರು ಊಟ ಮಾಡಿ ಮಲಗಿದ್ರೆ, ಆಟ-ಗೀಟ ಎಲ್ಲ ಮರೆತುಬಿಡಬೇಕು’ ಅಂತ ಎಚ್ಚರಿಕೆ ಕೊತ್ತುಕೊಂಡು ರೂಮಿಗೆ ಹೋದ್ವಿ. ಒಂದು ಕಪಿ ಮಾತ್ರ ಮಲಗದೆ ಹೊರಗೆ ಏನೋ ಮಾಡ್ತಿತ್ತು.. ನಂಗಂತು ಗೊತ್ತಿಲ್ಲ ಏನೂಂತ; ಪಕ್ಕದ cottageನಲ್ಲಿ ಯಾರಿದ್ರು!!?? ;-)

Friday, May 16, 2008

Coca-Cola??

ಮೊನ್ನೆ officeನಲ್ಲಿ ಊಟಕ್ಕೆ ಹೋದಾಗ ನಾನು Sprite ತಗೊಂಡೆ. ಮಾತು ಶುರುವಾಯ್ತು. ಒಳ್ಳೇದಾ ಕೆಟ್ಟದಾ? ಎಷ್ಟು ಸಕ್ಕರೆ ಇದೆ? ಹೂಂ pesticides?? ಹೀಗೇ...
ನಾನೀಗ ಅದೆಲ್ಲದರ ಬಗ್ಗೆ ಮಾತಾಡಲ್ಲ... ಹೀಗೆ ಮೊನ್ನೆ Internetನಲ್ಲಿ ಈ ಬ್ಲಾಗ್ ನೋಡಿದೆ. ನೀವೂ ನೋಡಿ :)
http://www.pud.com/2008/04/coca-cola-history.html

Quick look here:
Here’s the history of Coca-Cola:

  1. Pemberton’s French Wine Coca (cocaine wine) is invented
  2. Inventor removes the wine (prohibition) and calls it Coca-Cola
  3. Inventor removes the cocaine (prohibition) and people still buy it.
There’s a business lesson here but I’m not sure what it is.

ವ್ಯವಹಾರದ ಹಿನ್ನೆಲೆ ಏನೇ ಇರಲಿ fact ಬದಲಾಗತ್ಯೆ?

Thursday, January 03, 2008

New Year's Resolution

ಸರ್ವರಿಗೂ ಹೊಸ ಆಂಗ್ಲ ವರ್ಷದ ಶುಭಾಶಯಗಳು! ಬೆಂಗಳೂರಿನ ಜನತೆಗೆ ಹೊಸ ಆಂಗ್ಲ ವರ್ಷದ ಉತ್ತಮ ಸಂಕಲ್ಪ ಅಂದ್ರೆ ನಮ್ಮ ಸಂಚಾರ ವ್ಯವಸ್ಥೆ ಉತ್ತಮಪಡಿಸೋಕೆ ಸಹಾಯ ಮಾಡೋದು. ಯಾಕಂದ್ರೆ ನನಗನ್ನಿಸುತ್ತೆ ಇದೊಂದು ಸಾಮಾನ್ಯ ಮನುಷ್ಯ ಮಾಡಬಹುದಾದ ಕೆಲಸ - ನಮ್ಮ ಯಾವುದೆ ಸರ್ಕಾರಕ್ಕೆ ಏನುಮಾಡಬಹುದು ಅಂತ ಕಾಯದೆ! ತುಂಬಾ ವಾಹನಗಳು ಹೆಚ್ಚಾಗಿ ನಮ್ಮ ರಸ್ತೆ ಗಳು ಅದನ್ನ ತಡಕೊಳ್ಳೋಕೆ ಆಗದಿರೊ ಸಂದರ್ಭದಲ್ಲಿ ನಮ್ಮ 'ಅಳಿಲು ಸೇವೆ' ಮಾಡಬಹುದಲ್ಲಾಂತ.

ನಿಜ ಎಲ್ಲಾರಿಗೂ ಅದೊಂದೆ ಪ್ರಶ್ನೆ. ಯಾಕೆ ನಮ್ಮೂರಿನಲ್ಲಿ ಸಂಚಾರ ವ್ಯವಸ್ಥೆ ಇಷ್ಟು ಹದಗೆಟ್ಟಿದೆ ಅಂತ. ಅದು ಎಲ್ಲಾರಿಗೂ ಗೊತ್ತು ಸ್ವಾಮಿ, ಆದ್ರೆ ಅದನ್ನ ಸರಿಪಡಿಸೋಕೆ ಅಂತ ನೀವು ಎಷ್ಟು ಪ್ರಯತ್ನಿಸಿದ್ದೀರ? ಅದನ್ನ ನೀವು ಯಾವತ್ತಾದರೂ ನೇವೇ ಪ್ರಶ್ನಿಸಿ ನೋಡಿದ್ದೀರ? ರಸ್ತೆಯಲ್ಲಿ 'ನಾನೊಬ್ಬನೇ ಅಲ್ಲ ಬೇರೆಯವರೂ ಅದರ ಬಗ್ಗೆ ಯೋಚಿಸಬೇಕು' ಅನ್ನೋ ಉತ್ತರ ನಾನು ತುಂಬ ಕೇಳಿದ್ದೀನಿ. ಈ 'ಬೇರೆಯವರು' ಯಾರು? ನನಗೆ ನೀವು ಬೇರೆಯವರು, ನಿಮಗೆ ನಾನು ಬೇರೆಯವನು. ಹೌದಲ್ವ? ನಾವೆಲ್ಲಾ ರಸ್ತೆಯ ನಿಯಮಗಳನ್ನ ಸಾಧ್ಯವಾದಷ್ಟು (ಬೇರೆಯವರಿಗಿಂತ ಹೆಚ್ಚುಮಾಡೊಕೆ ಪ್ರಯತ್ನ ಪಟ್ಟು) ಪಾಲಿಸಬೇಕು. ಆಗಷ್ಟೇ ನಮ್ಮ ಬೆಂಗಳೂರಿನಲ್ಲಿ ನಾವು ಸ್ವಲ್ಪ ನಿರಾಳವಾಗಿ ಸಂಚರಿಸಬಹುದು.

ನನಗೆ ಈ ರಸ್ತೆ ನಿಯಮ ಅಂದ ತಕ್ಷಣ ನೆನಪಿಗೆ ಕಾಣಿಸೋದು ನಮ್ಮ 'ಪೆಡಂಭೂತ' ಬೆ.ಎಂ.ಟ್.ಸಿ. ಬಸ್ಸುಗಳು. ಅವನ್ನು ನಾನು 'ಭೂತ' ಅಂದಿದ್ದು ಕೇವಲ ಗಾತ್ರ ದಿಂದ ಅಷ್ಟೆ (ಹಲವಾರು ಸಂದರ್ಭದಲ್ಲಿ ಅವು ಭೂತ ಗಳನ್ನ ಸೃಷ್ಟಿ ಮಾಡಿವೆ, ಅದು ನಮ್ಮ ಈಗಿನ ವಿಶಯವಲ್ಲ!). ಸಾಮಾನ್ಯವಾಗಿ, ನಮ್ಮ ರಸ್ತೆಗಳ ಅಗಲಕ್ಕೆ ಒಮ್ಮೆ ಕೇವಲ ಎರಡು ಬಸ್ಸುಗಳು ಹೋಗಬಹುದು. ಆದರೆ ಈ ಬಸ್ಸುಗಳಲ್ಲಿರುವ ಪೈಪೋಟಿನ ಯಾರು ಸರಿ ಮಾಡೊರು? ಒಂದು ಬಸ್ಸು ನಿಂತಿರುವಾಗ ಮತ್ತೊಂದು ಹಿಂದಿನಿಂದ ಬಂದ ಬಸ್ಸು, ಈಗಾಗಲೇ ನಿಂತಿರೋ ಬಸ್ಸಿನ ಹಿಂದೆ ನಿಲ್ಲೋದು ಎಲ್ಲಾರು ಪಾಲಿಸಬೇಕಾದದ್ದು - ಸಂಚಾರ ಸರಾಗವಾಗಿ ನಡೀಬೇಕೂಂದ್ರೆ. ಆದ್ರೆ ಹಾಗಾಗೋದು ನೀವು ನೋಡಿದ್ದೀರ? ಎರಡನೇ ಬಸ್ಸು ಹಾಗೆ ಮಾಡಲ್ಲ. ಅದು diagonalಆಗೇ ನಿಲ್ಲೋದು. ಇಲ್ಲಾ - ನಿಲ್ಲಿಸೋಕೆ ಮುಂಚೆ ಇನ್ನ್ಯಾವುದೋ ವಾಹನನ overtake ಮಾಡಿ ಎಡಗಡೆಗೆ ಕೊಯ್ಮೂಲೆಯಾಗೇ ನಿಲ್ಸೋದು. ಇದು ಬೇರೆ ವಾಹನಗಳಿಗೆ ಎಷ್ಟು ತೊಂದರೆ ಅಂತ ಅವರು ಒಮ್ಮೆಕೂಡ ಯೋಚಿಸಿರ್ತಾರೆ ಅಂತ... ಹಾಗಾಗಿದ್ರೆ ಅವರು ಹೀಗೆ ಮಾಡೊಲ್ಲ. ಇನ್ನೊಂದು ಈ ಬಸ್ಸಿನ ಚಾಲಕರು ಮಾಡುವ ಸಹಾಯ ಅಂದ್ರೆ, ಬಸ್ ಸ್ಟಾಪಿನ ಹತ್ರ ಬಂದಾಗ ಅವರು ಯಾವ laneನಲ್ಲಿರ್ತಾರೋ ಅದೇ ನೇರಕ್ಕೆ ನಿಲ್ಲಿಸಿಬಿಡುತ್ತಾರೆ. ಅಂದರೆ ಬಸ್ ಸ್ಟಾಪಿಗೂ ಈ ಬಸ್ಸಿಗೂ ಹೆಚ್ಚುಕಡಿಮೆ ಮೂರು-ನಾಲ್ಕು ಅಡಿಗಳಷ್ಟು ಅಂತರ ಇರುತ್ತೆ. ನಮ್ಮ ಚಿಕ್ಕ-ಚಿಕ್ಕ ರಸ್ತೆಗಳಲ್ಲಿ ಇರೋ-ಬರೋ ಜಾಗನೆಲ್ಲಾ ಇವರೇ ತಗೊಂಡ್ರೆ ಬೇರೆಯವರ ಸಮಾಚಾರ ಹೇಳಿ!

ಎರಡನೆಯವರು ಅಂದ್ರೆ, ನಮ್ಮ ಆಟೋ ಚಾಲಕರು. ನಮ್ಮ ರಸ್ತೆಗಳೆಲ್ಲಾ ಅವರದ್ದೇ... ಅವರು ರಸ್ತೆಯ ಯಾವ ತುದಿಯಿಂದ ಯಾವತುದಿಗೂ ಹೇಗೆಬೇಕಾದರೆ ಹಾಗೆ ಓಡಿಸಬಹುದು ಆಂದ್ಕೊಂಡಿದ್ದಾರೆ. ಇವರೆಲ್ಲ ಒಂದು ಥರ ಮೋಟಾರು 'ಹಾವು'ಗಳು. ನನ್ನ ಕೇಳಿದ್ರೆ, ಪ್ರಾಣಿ ಹಾವು ಕೂಡ ಸ್ವಲ್ಪ ನಿಯಮಬದ್ಧವಾಗಿ ಚಲಿಸುತ್ತೆ. ಆದ್ರೆ ಇವರಿಗೆ ಯಾವ ನಿಯಮಗಳೂ ಇಲ್ಲ. ಒಟ್ಟಿನಲ್ಲಿ ಇವರು ಸಿಕ್ಕ ಜಾಗವನ್ನು ಬಿಟ್ಟುಬಿಟ್ರೆ ಅವರ ಆಸ್ತಿ ಕಳೆದುಹೋಗ್ತಿದೆ ಅನ್ನೋಥರ ಆ ಜಾಗನ ಓಡಿಸಿಕೊಂಡು ಹೋಗ್ತಾರೆ.. ಇವರು ಒಮ್ಮೆಯೂ ಸರಿಯಾಗಿ indicate ಮಾಡಿರೋದು ನೋಡಿಲ್ಲ. Indicatorಗಳು ಕೆಟ್ಟಿರ್ತ್ವೆ. ಮತ್ತೆ ಕೈ ತೋರಿಸುತ್ತಾರೆ ಬಲಗಡೆ ತಿರುಗೋಕೆ, ಅದು ಆಟೋ ಒಳಗೆ ಕೂತಿರೋರಿಗೆ ಮಾತ್ರ ಕಾಣೋದು. ಅವರ ಹಿಂದಿರೋ ವಾಹನಗಳಿಗಲ್ಲ... ಇನ್ನೂ ಹಸಿರು ಬಣ್ಣ ಬಂದೇಯಿರಲ್ಲ, ಇವರಾಗಲೇ ಮುಂದುವರಿದಿರ್ತಾರೆ... ಒಳಗೆ ಕೂತವರು ಈ ಆಟೊ ಚಾಲಕರಿಗೆ ನಿಯಮ ಪಾಲಿಸಿ ಅಂತ ಹೇಳ್ತಾರ? ಮೊದಲು ಅವರೇ ಪಾಲಿಸ್ತಿರಲ್ಲ ಇನ್ನು ಬೇರೆಯವರಿಗೆ ಏನು ಹೇಳ್ತಾರೆ? ಒಳಗಿರೋರ್ಗೆ ಮೊದಲು ಅವರು ತಲಪಿದ್ರೆ ಸಾಕು ಅಷ್ಟೆ. ಅಥವಾ ನಿಯಮ ಪಾಲಿಸಿ ಅಂತ ಹೇಳಿದರೆ ಅವರು ಕೇಳ್ತಾರೆ ಅಂದ್ಕೊಂಡಿದ್ದೀರ? ನಿಂಗೆ 'ನಾವು rulesಉಅಂತ ಹೋದ್ರೆ ಈ ಊರ್ನಲ್ಲಿ ಹೋದಂಗೆಯ' ಅಂತಾರೆ ಮತ್ತೆ ಅವರ ಚಾಳಿ ಬಿಡಲ್ಲ.. ಏನು ಹೇಳ್ತಿರ ಇವರಿಗೆ.. ಹಾಗಂತ ಒಳ್ಳೆಯ ಆಟೋ ಡ್ರೈವರ್ಗಳಿಲ್ಲ ಅಂತಲ್ಲ.. ಕೆಲವರು ತುಂಬಾ ಚೆನ್ನಾಗಿ ಓಡಿಸ್ತಾರೆ.. ಆದ್ರೆ majority ಇರೋರು ಮೊದಲಿನ categoryನವರೇ...

ನನಗೆ ಮತ್ತೊಂದು ಉತ್ತಮ ಪ್ರಯತ್ನ ಮಾಡಬಹುದಾದಂಥ ವಿಭಾಗ ಅಂದ್ರೆ, ಸರ್ಕಾರಿ ವಾಹನಗಳು - ಕಾರು, ಜೀಪು ಮುಂತಾದವು. ಈ ಕಾರುಗಳಲ್ಲಿ ಓಡಾದೋರೆಲ್ಲ officialಗಳು. ಇವರು ಓಡಾಡೋ ವಾಹನಗಳು ಕೂಡ ಅವೇ. ತುಂಬಾ ಕೆಟ್ಟದಾಗಿ ಓಡಿಸ್ತಿರ್ತಾರೆ ಅವರ ಡ್ರೈವರ್ಗಳು. ಆದರೆ ಈ ಸರ್ಕಾರಿ ನೌಕರರು ಅವರ ಡ್ರೈವರ್ಗಳಿಗೆ ನಿಯಮ ಪಾಲಿಸೋಕೆ ಹೇಳ್ತಾರ? ಇಲ್ಲ.. ನಾನು ನೋಡಿಲ್ಲ.. ನಾನು ನೋಡಿರೋ ಅಷ್ಟೂಸಲ ಅವರು ನಿಂದಿನ ಸೀಟಿನಲ್ಲಿ ಕೂತು ದೈನಂದಿನದಲ್ಲಿ ಮಗ್ನರಾಗಿರ್ತಾರೆ. ಈ ಸರ್ಕಾರಿ ನೌಕರರು ಅವರ ಚಾಲಕರಿಗೆ ಹೇಳೋಕಾಗಲ್ವ? ಅವರ ಪಾಡಿಗೆ ಅವರು ಪೇಪರ್ ಓದ್ತಿದ್ರೆ ಏನು ಮಾಡೋಕೆ ಸಾಧ್ಯ?

ಸಣ್ಣ ದ್ವಿಚಕ್ರ ವಾಹನಗಳು ರಸ್ತೆಯ ಬಲಗಡೆ ಯಾಕೆ ಹೋಗ್ತಾರೋ ಗೊತ್ತಿಲ್ಲ. ಅವರ ಗಾಡಿ ಅವರನ್ನ ಯಳಿಯಲ್ಲ ಆದ್ರೂ ಅವರ ಭಗೀರಥ ಪ್ರಯತ್ನ ಬಿಡಲ್ಲ... ಕೆಲವು ಸಲ ಏನೂ ಮಾಡಕ್ಕಾಗಲ್ಲ ಬಿಡಿ, ಅವರು right turn ಮಾಡ್ಬೇಕಿದ್ರೆ! ಇವರು, ಮತ್ತೆ ಬೇರೆ ದ್ವಿಚಕ್ರ ವಾಹನಗಳಲ್ಲಿರೋರು, ಎಡಕ್ಕೆ ತಿರುಗುವಾಗ ತೀರಾ ಬಲಗಡೆ ನಿಂತಿರ್ತಾರೆ junctionಗಳಲ್ಲಿ, ಮತ್ತೆ ಹೊರಡುವಾಗ, ಎಲ್ಲರಿಗೂ ತೊಂದರೆ, ಯಾಕಂದ್ರೆ ಅವರು ಧಾಟುವತನಕ ಕಾಯ್ಬೇಕಲ್ಲ... ಇವರಷ್ಟೆಅಲ್ಲ, B-segmet ಕಾರು ಇಟ್ಟುಕೊಂಡಿರೋರೆಲ್ಲಾ ತಮ್ಮ laneಬಿಟ್ಟು ಪಕ್ಕಕ್ಕೆ ಹೋಗೋರೇ ಜಾಸ್ತಿ... ಅದಕ್ಕಿಂತ ಕೆಟ್ಟರೀತಿ ಓಡಿಸೋರು ಅಂದ್ರೆ mid-segmet ಗಾಡಿಗಳನಿಟ್ಟುಕೊಂದಿರೋರು. ಹೌದು! ಅದನ್ನಿಟ್ಟುಕೊಂಡಿರೋರು ಚೆನ್ನಾಗೇ ಓದಿರೋರು.. ಓಳ್ಳೆ ಹುದ್ದೆಯಲ್ಲಿರೋರು.. ಹೊರದೇಶಗಳಿಗೆ ಹೋಗಿಬಂದಿರೋರು.. ಆದರೆ, ಅವರು ಹೊರಗಿದ್ದಾಗ ತುಂಬಾ ನಿಯಮ ಬದ್ಧವಾಗಿ ಓಡಿಸೋರು, ಇಲ್ಲಿ ನಮ್ಮ ದೇಶದಲ್ಲಿ ಮಾತ್ರ ಯಾಕೆ ಹಾವಿನಥರ ಓಡಿಸ್ತಾರೆ? ಬಹಳಜನ ಸರಿಯಾಗಿ ಓಡಿಸಲ್ಲ ಇಲ್ಲಿ, ಹಾಗಿರುವಾಗ ನಾವ್ಯಾಕೆ ಸರಿಯಾಗಿ ಓಡಿಸೋದು ಅಂತಿರ್ಬಹುದು... ಅಲ್ವ?

ಪಾದಚಾರಿಗಳೇನು ಕಡಿಮೆಯಲ್ಲ. Foot Path ಇದ್ದರೂ ಕೂಡ ಅವರು ರಸ್ತೆಯಲ್ಲೇ ನಡಿಯಬೇಕು. ಜೊತೆಯಲ್ಲಿ, ಚಿಕ್ಕ ಮಕ್ಕಳಿದ್ದರೆ ಅವರನ್ನು ರಸ್ತೆಯ ಕಡೆಗೆ ಇಟ್ಟುಕೊಂಡು ನಡೆಯಬೇಕು, ರಸ್ತೆಯ pavement ಕಡೆಯಲ್ಲ. ಅವರುತಾನೆ ಏನು ಮಾಡ್ತಾರೆ ಹೆಳಿ ಸ್ವಾಮಿ, ಎಷ್ಟೋ ರಸ್ತೆಗಳಲ್ಲಿ pavements ಇಲ್ಲ. ಎದ್ದರೂ ಅದರಲ್ಲಿ ಬೇಕಾದಷ್ಟುಜನ scooter, bike, Car ಗಳನ್ನ ನಿಲ್ಲಿಸಿರುತ್ತಾರೆ, ಎಲ್ಲಂದ್ರೆ, ಸಣ್ಣ-ಪುಟ್ಟ ವಸ್ತುಮಾರೋ ಗಾಡಿಗಳು, ಇಲ್ಲಾಂದ್ರೆ KEB/BSNL ಅವರ ದೊಡ್ಡ ದಬ್ಬಗಳು.. ಹೀಗಿರುವಾಗ ನಡೆಯುವರಿಗೆ ಎಲ್ಲಿದೆ ಜಾಗ?.. ಅವರು ಒಮ್ಮೆಯಾದರೂ ರಸ್ತೆಗೆ ಬರಲೇ ಬೇಕು. ಹಾಗಾಗಿ ಪಾದಚಾರಿಗಳು ರಸ್ತೆಯಲ್ಲೇ ನಡೆಯೋ ನಿರ್ಧಾರ ಮಾಡಿರಬಹುದು... ಆದರೆ, ಈಗೀಗ ಸಿಗ್ನಲ್ ಹತ್ತಿರದಲ್ಲಿ bikeಸವಾರರು foot pathಮೇಲೇ ಓಡಿಸಿಕೊಂಡು ಹೋಗೋದು ಸಾಮಾನ್ಯ ವಾಗುತ್ತಿದೆ.. ಹೀಗಾದಾಗ, ಪಾದಚಾರಿಗಳು ಹೇಗೆ ಧೈರ್ಯವಾಗಿ ಅಲ್ಲಿ ನಡೆಯೋದು ಹೇಳಿ?

ಇನ್ನೂ ಬರೀಬಹುದು.. ಆದ್ರೆ ವಿಶಯ ಇಷ್ಟೆ. ನಾವೆಲ್ಲಾ ಸಾಧ್ಯವಾದಷ್ಟು ರಸ್ತೆ ನಿಯಮ ಪಾಲಿಸೋಣ. ಬೇಕಾದಷ್ಟು ಜನ ಇದೇ ಬಗ್ಗೆ ಎಷ್ಟೋ ಬರೆದಿದ್ದಾರೆ.. ಆದ್ರೆ ಬೇರೆಯವರ ಮೇಲೆ ಗೂಬೆ ಕೂರಿಸೋದಷ್ಟು ಬಿಟ್ರೆ ಶ್ರೀಸಾಮಾನ್ಯರು ತಮ್ಮ ಪ್ರಯತ್ನ ಮಾಡೇಇಲ್ಲ ಅನ್ನೋದು ನನ್ನಾನಿಸಿಕೆ.. ಹಾಗಿರುವಾಗ, ಈ ವರ್ಷ ಯಾಕೆ ನಾವೆಲ್ಲಾ ಸಂಚಾರಿ ನಿಯಮಗಳನ್ನ ಪಾಲಿಸಬಾರದು? ಸಾಧ್ಯವಾದಷ್ಟು ಬಿ.ಎಂ.ಟಿ.ಸಿ.ನಲ್ಲಿ ಓಡಾಡೋಣ. ನಮ್ಮ personal ವಾಹನಗಳನ್ನ ಕೇವಲ ಅವಶ್ಯಕತೆ ಇರುವಾಗ ಮಾತ್ರ ಉಪಯೋಗಿಸೋಣ.