Sunday, August 05, 2007

ಬ್ಲಾಗಿನ ಬ್ಲಾಗು

ನಾನು ಬಹಳ ದಿನಗಳ ನಂತರ ಕನ್ನಡದ ಬ್ಲಾಗುಗಳನ್ನ ಹುಡುಕಿ ಒದ್ತಾಇದ್ದೆ. ತುಂಬಾನೆ ಖುಷಿಯಾಯ್ತು. ನಾನು ಮೊದಲು ಕನ್ನಡದಲ್ಲಿ ಬರೀಬೇಕು ಅಂತ ಅಂದುಕೊಂಡಾಗ ತುಂಬಾ ಬ್ಲಾಗುಗಳಿರಲಿಲ್ಲ. ಈಗ ಬಹಳವಾಗಿವೆ. ಇವಾಗಿನ ಯುವಕರು ಕನ್ನಡದಲ್ಲಿ ಬರೆಯೋಕೆ ಮುಂದೆಬಂದಿರೋದು ಸಂತಸದ ವಿಷಾಯನೇ ಸರಿ. ಎಷ್ಟೊಂದರಲ್ಲಿ ಅವರ ಆಲೋಚನೆ, ಅವರ ಬರೆಯೋ ವೈಖರಿ, ವಕ್ಕಣೆ ಎಲ್ಲಾತುಂಬಾ ಚೆನ್ನಾಗಿದೆ. ಅವರಿಗೆಲ್ಲಾ ನನ್ನ ವಂದನೆಗಳು.

ಅದಿರ್ಲಿ. ಕೆಲವೊಂದು postಗಳನ್ನ ಓದಿದಾಗ ನನಗನ್ನಿಸಿದ್ದು ಇಷ್ಟೇ. ಕೆಲವರು ಪ್ರಚಲಿತ ವಿಷಯ ತಗೊಂಡು ಅದಕ್ಕೆ ವಿರುದ್ಧವಾಗೇ ಬರೆಯೋಕೆ ಹೊರಟಿದ್ದಾರೆ. ಒಬ್ಬ ಬರಿತಾನೆ IT industry ನಮ್ಮ (ಸಾಮಾನ್ಯ ಮನುಷ್ಯರ) ಜೀವನ ಹಾಳುಮಾಡಿದೆ ಅಂತ (ಇದು ತುಂಬಾ ಹಳೇ ವಿಚಾರ ಬಿಡಿ!). ಮತ್ತೊಬ್ಬ ರವಿ ಬೆಳಗೆರೆ ಮುಂಚಿನಥರ ಇಲ್ಲ, ತುಂಬಾಬದಲಾಗಿದ್ದಾರೆ; ಕಡಕ್ಕಾಗಿ ಬರಿತಿಲ್ಲ ಅಂತ. ಹೌದು, ಯಾರೇ ಆಗ್ಲೀ ಏನಾದ್ರೂ ಹೇಳಿದ್ರೆ ಅದಕ್ಕೆ ವಿರುದ್ಧವಾಗಿ ಹೇಳಬೇಕು ಅನ್ನಿಸೋದು ಮಾನವ ಸಹಜ ಕ್ರಿಯೆ. ಆದ್ರೆ ಸ್ವಲ್ಪ ಯೊಚಿಸಿನೋಡಬೇಕು ಅಲ್ವಾ? ಸ್ವಲ್ಪ ನಿಧಾನವಾಗಿ ಅದೇ ವಿಷ್ಯನ ಬಿಚ್ಚು ಮನಸ್ಸಿನಿಂದಯೋಚಿಸಿದ್ರೆ ಬರೆಯುವ ಮುಂಚಿನ ನಮ್ಮ biased views ಬದಲಾಗಬಹುದು. ನಾನು ಹಾಗಂತ ಅವರೆಲ್ಲಾ ಬರೆದಿರೋದು ತಪ್ಪು ಅಂತ ಹೇಳ್ತಿಲ್ಲ. ಪ್ರತಿಯೊಬ್ಬರ ಅನಿಸಿಕೆ, ಪ್ರಭಾವಶಾಲಿ ಪ್ರತಿಕ್ರಿಯೆ ಏನೇನೋ ಮಾಡಲು ಸಾಧ್ಯ.

"ಒಂದ್ಸಲಾ ಈ ಸಾಫ್ಟ್ ವೇರು ಅನ್ನೋದು ಪೂರ್ತಿ ಬಿದ್ದೋಗ್ಬೇಕು ಆವಾಗ ಬುದ್ದಿ ಬರತ್ತೆ ಇವ್ಕೆ"
ಅಂತ ಇದೆ ಅದರಲ್ಲಿ. ತುಂಬಾ ನಗು ಬಂತುರೀ. :) ಬರೆದಿರುವಾತ ಇನ್ನೂ ಚಿಕ್ಕವನು ಅಂತ ಅಂದ್ಕೋತಿನಿ. ಅವನ e-mail idನಲ್ಲಿ 82 ಅಂತ ಇದೆ. ಅದು ಅವನು ಹುಟ್ಟಿದ ವರ್ಷ ಅಂದ್ಕೊಂಡಿದೀನಿ (ಆದ್ದರಿಂದ್ಲೆ ಇಲ್ಲಿ ಧೈರ್ಯವಾಗಿ ಕೆಲವುಕಡೆ ಏಕವಚನ ಪ್ರಯೋಗಿಸಿದ್ದೀನಿ; ಅಲ್ಲವಾದ ಪಕ್ಷದಲ್ಲಿ ಬದಲಾಯಿಸುತ್ತೀನಿ). ಹಾಗಾದ್ರೆ, ನಿಜ. ಆತ ಕೂಡ IT ಕೆಲಸದಲ್ಲೇ ಇದ್ರೂ ಈ ಉದ್ಯಮದ ಏಳು ಬೀಳುಗಳನ್ನ ನೋಡಿಲ್ಲ. ಯಾಕಂದ್ರೆ ಅವನು ಈ industryಗೆ ಸೇರಿದಾಗ 2003 ಆಗಿತ್ತು. ನಾವೆಲ್ಲಾ ಒಂದು ದೊಡ್ಡ ಗಂಡಾಂತರದಿಂದ ಪಾರಾಗಿದ್ವಿ ಅಷ್ಟುಹೊತ್ಗೆ. ಮರೆತು ಬಿಟ್ರಾ ಸ್ವಾಮಿ 1998-2001ರ downtrend ಹೇಗಿತ್ತು ಅಂತ? ಏನೇನೋ ಅಯ್ತು ಬಿಡಿ ಆಗ. ಈಗ ಅದರ ಮಾತೇಕೆ. ನಾನಿಲ್ಲಿ ಹೇಳೋಕೆ ಹೊರಟಿದ್ದು ಇಷ್ಟೆ. IT ಅನ್ನೋದು ಭಾರತದಲ್ಲಿ, ಮತ್ತೂ ಬೆಂಗಳೂರಿನಲ್ಲಿ, ಈಗ ನೋಡ್ತಿರೋದಷ್ಟೇ ಅಲ್ಲ. ಈಗದರ ಉದ್ಧಾರ ನೋಡಿ ಜನ ಏನೇನೊ ಕಲ್ಪಿಸಿಕೊಳ್ತಾರೆ, ನೆಗೆಟಿವ್ ಆಗೇ ಯೊಚನೆ ಮಾಡ್ತಾರೆ. ಅದರಿಂದ ಏನೂ adverse effect ಇಲ್ಲ ಅಂತ ನಾನೂ ಹೇಳೋದಿಲ್ಲ. ಪ್ರತಿಯೊಂದಕ್ಕೂ ಅದರ ಒಳ್ಳೆಯ ಮತ್ತು ಅಷ್ಟೇನೂ ಒಳ್ಳೆಯದಲ್ಲದ ಮುಖಗಳು ಇದ್ದೇ ಇರುತ್ತೆ ಅಂತ. ಎಷ್ಟು ಜನಕ್ಕೆ ಗೊತ್ತು ಭಾರತದಲ್ಲಿ ಈಗ boom ಅಗಿರೋ IT industry ಶುರುವಾಗಿದ್ದು 1968ರಲ್ಲಿ ಅಂತ? ಹ್ಹೂಂ. ತುಂಬಾ ಹಳೇ ಇಂಡಸ್ಟ್ರೀನೆ ಸ್ವಾಮಿ ಇದು. ತುಂಬಾಜನ ಅಂದುಕೊಂದಿರೋ ಹಾಗೆ ಅದು ಕಳೆದ ಐದು-ಹತ್ತು ವರುಷಗಳಿಂದ ಬಂದು ಇದ್ದಕ್ಕಿದ್ದಂತೆ ಗೆದ್ದಿಲ್ಲ ಅದು. ಅದು ತನ್ನದೇ ಆದ ಏಳು-ಬೀಳುಗಳನ್ನ ನೋಡಿದೆ. ಪ್ರಪಂಚದಲ್ಲೆಲ್ಲಾ ಐಟಿ ಬಳಕೆ ಆಗ್ತಿರೋದ್ರಿಂದನೇ ಅದು ಗೆದ್ದಿದ್ದು.

ಮತ್ತೊಂದು ವಿಚಾರ ಅದೇ ಬ್ಲಾಗ್ ನಿಂದ -

"ಅಷ್ಟಕ್ಕೂ ಈ ಸಾಫ್ಟ್ ವೇರು ಅಂದ್ರೆ ಏನಂತ ಅಂದ್ಕಂಡಿದಿರಾ? ಇದೊಂದು ಕೂಲಿ ಕೆಲಸ."
ಸ್ವಾಮಿ ಹೀಗಂದ್ರೆ ನೀವು ಐಟಿನೋರ್ನ ಹೀಯಾಳಿಸಿದಂಗೆ ಅಂತ ಅಂದುಕೊಂಡ್ರ? ತಪ್ಪು. ಯಾಕಂದ್ರೆ IT ನಲ್ಲಿರೋರು ತಮ್ಮ ಕೆಲಸ ಮಾಡ್ತಿದ್ದಾರೆ ಅಷ್ಟೆ. ಕೂಲಿ ಮಾಡೊದು ತಪ್ಪಾ ನಿಮ್ಮ ಅರ್ಥದಲ್ಲಿ? ಅದೂ ಸಹ ಒಂದು ಕಾಯಕ ಸ್ವಾಮಿ. ಪ್ರತಿಯೊಂದು ಕೆಲಸ ಮಾಡೋಕೂ ಜನ ಬೇಕು. ನನಗೆ ನನ್ನಮ್ಮ ನಾನು ಚಿಕ್ಕವನಾಗಿರುವಾಗ ಹೇಳ್ತಿದ್ದ ಮಾತು ನೆನಪಿಗೆ ಬರುತ್ತೆ: ಎಲ್ಲಾರೂ ಪಲ್ಲಕ್ಕಿಯ ಮೇಲೇನೆ ಕೂತ್ಕೊಂಡು ಹೋಗೊಕೆ ಆಸೆ ಪಟ್ರೆ ಅದನ್ನ ಹೊರೋರು ಯಾರು? :) ನೀವೂ ಕಾಯ್ತಿರ್ತಿರ, ಪಲ್ಲಾಕ್ಕಿನೂ ಅಲ್ಲೀ ಇರುತ್ತೆ. ಮುಂದೆ ಹೇಗೆ ಹೋಗೊದು ಮತ್ತೆ? ಯಾವಾಗಲೂ ನಿಧಾನ ವಾಗಿ ಮೇಲೆ ಹೋಗಣ ಅಲ್ವ? ಹಾಗಂತ ಭಾರತೀಯ IT companyಗಳು ಬರೀ ಈ ಕೂಲಿ ಕೆಲಸ ಮಾಡ್ತಿಲ್ಲ ಗುರು. ನಾವುಗಳೂ ನಮ್ಮದೇ ಆದ ಸ್ಥಾನ ಪಡೆದುಕೊಂದಿದ್ದೀವಿ. ನಮ್ಮದೇ innovations ಇವೆ. ಮೊದಲು ಈ outsourcing ಪ್ರಾರಂಭವಾದಾಗ ನಾವು - ಭಾರತೀಯರು - ಅಮೇರಿಕನ್ನರಿಗೆ ಸಿಕ್ಕಿದ್ವಿ. ಹೌದು ನಾವು ಅವರಿಗಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ವಿ - ಈಗಲೂ ಮಾಡ್ತಿದ್ದೀವಿ. ಆದ್ರೆ ಈಗ ಭಾರತಾನ ಮುಂಚಿನಥರಾನೇ ನೋಡ್ತಿಲ್ಲ. ಯಾಕಂದ್ರೆ ನಾವು ಈಗ ಜಾಸ್ತಿ ದುಡ್ಡು ಕೇಳ್ತಿದ್ದೆವಿ. ಅವರೇ ಬರೆದಿರೋಹಾಗೆ ಕಂಪನಿಗಳು ಜಾಸ್ತಿಆದಂಗೆ ಅದನ್ನ ಬದಲಿಸೋ ಜನಾ ಕೂಡ ಜಾಸ್ತಿಯಾಗಿದ್ದಾರೆ. ಆದ್ದರಿಂದ ಒಳ್ಳೆಯ ಜನನ್ನ ಉಳಿಸಿಕೋಬೇಕಂದ್ರೆ ಅವರಿಗೆ ಜಾಸ್ತಿ ಸಂಬಳ ಕೊಡಬೇಕು. ಹಾಗಾಗಿ ಈಗ ತುಂಬಾ ಬೇಕಿದ್ದ ಭಾರತೀಯ ಕಂಪನಿಗಳಿಂದ ಬೇರೆ ಕಡಿಮೆ ಸಂಬಳ ತಗೋ ದೇಶಗಳಿಗೆ ಹೋಗ್ತಿದೆ projectಗಳು. BRIC (Brazil, Russia, India, and China) ಅನ್ನೊ ಪದ ಕೇಳಿದ್ದೀರ? ಅದರಲ್ಲಿ ಎಷ್ಟೊಜನ ನಂ. 1 ಸ್ಥಾನದಲ್ಲಿದ್ದ ಭಾರತನ ಕೆಳಗೆ ಹಾಕ್ತಿದ್ದಾರೆ ಈಗ. ಬೇರೆಯವರಿಗೆ ಭಾರತದ ಜೊತೆ technology & ಆಂಗ್ಲ ಭಾಷೆಯಲ್ಲಿ ಸ್ಪರ್ಧಿಸಿ ಮುಂದೆ ಬರೋಕ್ಕೆ ಸ್ವಲ್ಪ ಸಮಯ ಹಿಡೀಬಹುದು ಆದ್ರೆ ತುಂಬಾ ದೂರ ಇರಲಿಕ್ಕಿಲ್ಲ. ಆಗ ನೋಡಿ ಗೊತ್ತಾಗತ್ತೆ!! ಬರೇ ನಾವು ಕೂಲಿ ಕೆಲ್ಸ ಮಾಡ್ತಿದ್ದೀವಿ ಅಂತ ಹೇಳ್ಕೊಳ್ಳೋದು ಬಿಟ್ಟು ಒಂದು product idea ಹೇಳು ಗುರು. ಆದು ಕೂಲಿ ಕೆಲಸ ಬಿಡಿಸಿ ನಿನ್ನ ಸಿಂಹಾಸನದ ಮೇಲೆ ಕೂರಿಸುತ್ತೆ! ಬೇಜಾರ್ಮಾಡ್ಕೊ ಬೇಡ, ನಿನ್ನ ಕೂಲಿ ಕೆಸದಿಂದ ನಿನ್ನ ಹೇಗೆ ಹೊರಗೆ ತರೋದು ಅಂತ ಸುಲಭಬಾಗಿ ಒಂದು optionಕೊಟ್ಟೆ ಅಷ್ಟೆ.

"ಈ ಸಾಫ್ಟ್ ವೇರ್ ಕಂಪನಿ ಜನರು ಇವರೆಲ್ಲಾ ಒಂಥರಾ ಅರ್ಧ ತುಂಬಿದ ಮಡಕೆಗಳು"

??!! ಅದು ತಪ್ಪು ಅಭಿಪ್ರಾಯ ಕಣಮ್ಮ. ಈಗ ನಿನ್ನನ್ನೇ ತಗೊ. ನೀನು ಎಷ್ಟು ಚಂದ ಬರೆದಿದ್ದೀಯ. ಏನೇನೋ ಯೊಚನೆ ಮಾಡ್ತಿದ್ದೀಯ. :) Generalize ಮಾಡ್ಬೇಡ್ವೋ ತಮ್ಮ. ಅದು ತಪ್ಪು. ಈ ಸಾಫ್ಟ್ ವೇರ್ ನಲ್ಲಿ ತುಂಬಿದ ಕೊಡಗಳೂ ಇವೆ. ಆದ್ರೆ ಆ ತುಂಬಿದ ಕೊಡಗಳು ಪ್ರಾಚಾರಕ್ಕೆ ಬರಲ್ಲ. ’ಎಲೆ ಮರೆ ಕಾಯಿ’ ಥರ ತಮ್ಮ ಪಾಡಿಗೆ ಇರ್ತಾವೆ. ಈನು ಮಾಡೊದು? ನಿನ್ನಂಥವರೇ ಅವರನ್ನ ಬಡಿದೆಬ್ಬಿಸಬೇಕು. ಮಾಡ್ತಿರ ಬಿಡ್ರಪ್ಪ!! :)

"ನಮ್ ಸಮಾಜಕ್ಕೆ ಏನಾದ್ರೂ ಕೈಲಾದಷ್ಟು ಮಾಡ್ಬೋದಾ ನೋಡ್ರಯ್ಯ, ನೀವು ನಮ್ ದೇಶದ ಪ್ರಜೆಗಳು ಅಲ್ವಾ"
ಅಂದ್ರೆ ಎಲ್ಲಾರೂ ನಂದೇ ನಂಗೆ ಅನ್ನಲ್ಲಪ್ಪ. ಸಮಾಜಕ್ಕೆ ಒಬ್ಬರಿಂದ ಏನೂ ಆಗಲ್ಲ. ಅದನ್ನ ಪಾಲಿಸುತ್ತಿರೋ ರಾಜಕಾರಣಿಗಳು ತಮ್ಮ ಕೈಜೋಡಿಸಬೇಕು. ಒಂದು ಉದಾಹರಣೆ ಕೊಡ್ತಿನಿ. ಸರ್ಜಾಪುರದ ರಸ್ತೆ ಗೆ PPP ಪಾಲಸಿ ಹಾಕಿದ್ರು ಕೆಲವ ವರ್ಶಗಳಹಿಂದೆ. ಜ್ಞಾಪಕ ಇದ್ಯ? ಅದಕ್ಕೆ ವಿಪ್ರೊ ತಾನು ಹಣ ಕೊಡೋಕೆ ಮುಂದೆ ಬಂತು (ಅದರ ಸ್ವಾರ್ಥ ಜೊತೆಗೆ ಬೇರೆಯವರಿಗೂ ಸಹಾಯ ಆಗ್ತಿತ್ತು ಅನ್ನೋದೆ ಮುಖ್ಯ ಇಲ್ಲಿ). ಆದ್ರೆ ಅದು ಸರ್ಕಾರನ ಕೇಳಿದ್ದು ಇಷ್ಟೆ. ನಾನು ಕೊಡೊ ಹಣಕ್ಕೆ ಕಾಸು ಕಾಸಿಗೆ ಲೆಕ್ಕಾಬೇಕು ಹೆಂಗೆ ಕರ್ಚಾಯ್ತು ಅಂತ. ಅದಕ್ಕೆ ನಮ್ಮ ಸರ್ಕಾರ ’ನಿಮ್ಮ ದುಡ್ಡೇ ಬೆಡ. ನಮಗೆ ಅವಮಾನ ಮಾಡ್ತಿದ್ದಾರೆ’ ಅಂತು. ಸ್ವಾಮಿ ಸರ್ಕಾರಕ್ಕೆ ಅಷ್ಟು ಭರವಸೆ ಇದ್ದಿದ್ರೆ ಲೆಕ್ಕ ಕೊಡೊಕೆ ತಯಾರಾಗಿರಬೇಕಿತ್ತು ಅಲ್ವ?

ನನಗೂ ಸಹ basic science ತಗೊಳೋ ಹುಡುಗರ ಸಂಖ್ಯೆ ಕಡಿಮೆಯಾಗ್ತಿರೋದು ಸಂಕಟತರುತ್ತೆ. ಆದನ್ನ HN ನಾನು collegeನಲ್ಲಿ ಓದಬೇಕಾದಾಗ್ಲೇ ಹೇಳ್ತಿದ್ರು. ಅದು ಹದಿನೈದು ವರ್ಷಗಳ ಹಿಂದೆನೇ. ಜನಕ್ಕೆ ಎಲ್ಲರಂತೆ ನಾನೂ ಜೀವನ ಸಾಗಿಸಬೇಕು ಅನ್ನೊ ಆಸೆ. ಅದೇ ಕಾರಣದಿಂದ್ಲೆ UGC ತನ್ನ ಸಂಬಳ ಜಾಸ್ತಿ ಮಾಡಿದ್ದು ಉಪನ್ಯಾಸಕರಿಗೆ. ಇದೂ ಅಷ್ಟೆ IT ನಿಂದ ಪರೋಕ್ಷವಾಗಿ ಆಗಿರೊ ಸಹಾಯ. :)

ಹೊರದೇಶಗಳಿಗೆ ಹೋಗಿಬಂದು ಬೇರೇಥರನೇ ವರ್ತಿಸೊ ಭಾರತೀಯರಬಗ್ಗೆ ನಮಗೂ ಬೇಜಾರಿದೆ. ಅದಕ್ಕೆ ನನ ಬೇರೋಂದು ಬ್ಲಾಗಿನಲ್ಲಿ ಹೇಳಿದ್ದೀನಿ.

ಇನ್ನು ರವಿ ಬಗೆಗಿನ ಮಾತು. ನಾನೇನು ಅವರ ತುಂಬಾ ಬರಹಗಳನ್ನು ಓದಿಲ್ಲ. ಹಾಗಾಗಿ ಅವರ ಇತ್ತೀಚಿನ ಬರವಣಿಗೆಯ ಬಗ್ಗೆ ಸ್ವಾಮಿ ಅವರೂ ಕೂಡ ನಮ್ಮ-ನಿಮ್ಮಂತೆ ಸಾಧಾರಣ ಮನುಷ್ಯರು. ಆವರಿಗೂ ಬದಲಾವಣೆ ಇರುತ್ತೆ ಅಲ್ವ? ಸಮಯ ಸಂದರ್ಭ ಎಲ್ಲರನ್ನೂ ಸ್ವಲ್ಪ ಬದಲಾಗಿಸಬಹುದು. ಯಾಕಂದ್ರೆ ಅವರೇನೂ ಅತಿಮಾನವರಲ್ಲ. ಅಲ್ವೆ? ಸ್ವಲ್ಪ ಸಮಯ ಕೊಡಿ ಅವರ ಇತ್ತೀಚಿನ ಬರಹಗಳು ಜೊಳ್ಳು ಅನ್ನಿಸಿದರೆ. ಯಾಕೆಂದ್ರೆ ರವಿಯವರೇ ಹೇಳೋ ಹಾಗೆ ಅವರೂ ಸಹ ತಮ್ಮ ಬರವಣಿಗೆಯನ್ನು ಓದಿ ಅವಲೋಕಿಸುತ್ತಿರುತ್ತಾರೆ. ಅವರಿಗೇ ಹಾಗನಿಸಿದರೆ ಅವರು ಮತ್ತೆ ’ಅವರದೇ ಶೈಲಿ’ಗೆ ಬರುತ್ತಾರೆ. ಕಾಯಬೇಕು ಅಲ್ವ? ಯಾಕಂದ್ರೆ ಏನೇ ಆಗಲಿ ಅದಕ್ಕೆ ತನ್ನದೇ ಸಮಯ-ಕಾಲ ಆಂತಿರತ್ತೆ. ಅದು ಬರಲೇಬೇಕು.

ಹಿತೋಪದೇಷಗಳನ್ನ ಬೇಡಾನ್ಬೇಡಪ್ಪ. ಅದು ಎಲ್ಲಾರಿಗೂ ಬೇಕು. ಎಷ್ಟುಜನಕ್ಕೆ ಅದು ಸಹಾಯ ಮಡುತ್ತೊ ಗೊತ್ತಿಲ್ಲ. ಜೊತೆಗೆ, ಅದು ಅವರಿಗೆ ಓದುಗರಿದ್ದಾರೆ ಅಂತ ಗೊತ್ತಿರೋದ್ರಿಂದ್ಲೇ ಅದು ಬರ್ತಿರೋದು. ಇಲ್ಲದಿದ್ರೆ ಅವರು ಜನ ಓದದೇ ಇರೋದು ಬರೆದು ಲಾಸುಮಾಡ್ಕೊಳ್ಳೋಲ್ಲ. ಅಲ್ವ?

ಹುಂ?? :)

4 comments:

ವಿಕಾಸ್ ಹೆಗಡೆ/ Vikas Hegde said...

ನಮಸ್ಕಾರ,

ನನ್ನ ಬ್ಲಾಗ್ ಓದಿ ಅದಕ್ಕೆ ಇನ್ನೊಂದು ಬ್ಲಾಗ್ ಬರ್ದಿದಿರಾ. ಬಹಳ ಖುಷಿ ಆಯ್ತು ನೋಡಿ. ನಿಮಗೆ ಧನ್ಯವಾದಗಳು.
ಆದರೆ ಇಲ್ಲಿ ನೀವು ಹೇಳಿರೋ ವಿಷ್ಯಗಳಿಗೆ ಉತ್ತರ ಕೊಡೋದು ನನ್ ಕರ್ತವ್ಯ ಅಂತ ಅನ್ಕೊಂಡಿದಿನಿ. (ನೀವು ಅಪೇಕ್ಷಿಸದಿದ್ದರೂ).

ಪ್ರಚಲಿತ ವಿಷಯ ತಗೊಂಡು ಅದಕ್ಕೆ ವಿರುದ್ಧವಾಗೇ ಬರೆಯೋಕೆ ಹೊರಟಿದ್ದಾರೆ. ಒಬ್ಬ ಬರಿತಾನೆ IT industry ನಮ್ಮ (ಸಾಮಾನ್ಯ ಮನುಷ್ಯರ) ಜೀವನ ಹಾಳುಮಾಡಿದೆ ಅಂತ (ಇದು ತುಂಬಾ ಹಳೇ ವಿಚಾರ ಬಿಡಿ!).

ಪ್ರಚಲಿತ ವಿಷ್ಯ ಅಂತೀರಾ, ಆದ್ರೆ ಹಳೆ ವಿಷ್ಯ ಅಂತೀರಾ, ಜೀವನ ಹಾಳು ಮಾಡಿದ್ದು ಹೌದು ಅಂತ ನೀವೇ ಹೇಳ್ತೀರಾ ಆದ್ರೆ ಕೊನೆಗೆ ಅದು ಹಾಳಲ್ಲ ಅಂತ ಸಮರ್ಥನೆ ಕೊಡ್ತೀರಾ !! ಗೊಂದಲ ಆಯ್ತು :(. ಆದರೆ ನೀವು ಕೇವಲ ಕೆಲವು ವಾಕ್ಯಗಳನ್ನು ಮಾತ್ರ ತೆಗೆದುಕೊಂಡು ಅದರ ವಿಶ್ಲೇಷಣೆ ಮಾಡಿದ್ದಿರ. ಪೂರ್ತಿ ವಿಷಯವನ್ನಲ್ಲ.

ನೀವು ಹೇಳಿದ ಇನ್ನುಳಿದ ವಿಷಯ/ಪ್ರಶ್ನೆಗಳಿಗೆ ದಯವಿಟ್ಟು ನೀವು ನನ್ನ ಬ್ಲಾಗಿನ ಕೊನೆಯ ಪ್ಯಾರಾಗಳನ್ನು ಮತ್ತು ಲೇಖನಕ್ಕೆ ಬಂದ ಕಮೆಂಟುಗಳಿಗೆ ನಾನು ಬರೆದ ಉತ್ತರಗಳನ್ನು ನೋಡಿ.

ಈ ಕೆಳಗಿನದು ನಿಮ್ಮದೇ ಬ್ಲಾಗಿನಿಂದ (AMERICAN BEGGERS) ತೆಗೆದುಕೊಂಡ ಒಂದು ವಾಕ್ಯ.

PS: You must be thinking didn't I get anything good to write about America.

APPLY THIS SENTENCE TO MY BLOG ABOUT SOFTWARE. :)

ಹೌದು, ನಾನು ೮೨ ನಲ್ಲಿ ಹುಟ್ಟಿದವನು, ಇನ್ನೂ ಚಿಕ್ಕವನು. ತಿಳಿದುಕೊಳ್ಳೋ ಹಂತದಲ್ಲಿ ತಪ್ಪುಗಳಾಗ್ಬೋದು. ತಿದ್ಕೋತಿನಿ.

ಪ್ರೀತಿ ಇರಲಿ
-ವಿಕಾಸ್

ಶ್ರೀ said...

ವಿಕಾಸ್ ಅವರೆ,

ನನ್ನ ಸಾಲುಗಳು ಗೊಂದಲ ಉಂಟು ಮಾಡಿದ್ದರೆ ಕ್ಷಮಿಸಿ. ನಿಮ್ಮ ಅನಿಸಿಕೆ ನನಗೆ ಕೊಟ್ಟಿದ್ದಕ್ಕೆ ನಾನು ಕೂಡ ಸಂತೋಷ ಪಡುತ್ತಿದ್ದೇನೆ. ನಿಮ್ಮ ಗೊಂದಲ ಬಿಡಿಸೋಕೆ ಪ್ರಯತ್ನಿಸುತ್ತೀನಿ:

೧. ನಾನು ’ಪ್ರಚಲಿತ ವಿಷಯ’ ಅಂದಿದ್ದು ಈಗಿನ ಜನ ಮಾತೆತ್ತಿದರೆ ಐಟಿ ಜನನ್ನ ಮತ್ತೆ ಅವರ ಬಗ್ಗೆನೇ ಮಾತಾಡೋದು. ಹಾಗಾಗಿ ಅದು ನನ್ನ ಪ್ರಕಾರದಲ್ಲಿ ’ಪ್ರಚಲಿತ ವಿದ್ಯಮಾನ’ಗಳಿಗೇ ಸೇರೋದು. ಮತ್ತೆ ಸಾಕಷ್ಟು ದಿನಗಳಿಂದ ಇದೇ ಮಾತುಕತೆ ನಡೀತಿದೆ; ಯಾವುದೇ ಪತ್ರಿಕೆ ನೋಡಿ. ಕೆಲವುದಿನಗಳಿಂದ ಇನ್ನೂ ಮುಗಿಯದೇ ಇರೋದ್ರಿಂದ ಇದು ಇನ್ನೂ ’current' ಆಗಿದ್ರೂ ಸ್ವಲ್ಪ ಹಳೆಯ ವಿಷಯನೇ.

೨. ಕ್ಷಮಿಸಿ! ನಾನು ನನ್ನ ಬ್ಲಾಗಿನಲ್ಲಿ ಐಟಿ ನಮ್ಮ ಜೀವನ ಹಾಳುಮಾಡಿದೆ ಅಂತ ಬರೆದಿಲ್ಲ. ಓಹ್! ನೀವು ’adverse effect' ಬಗ್ಗೆ ಮಾತಾಡ್ತಿದ್ದೆರ? ನಾನು ಹೇಳಿದ್ದು ಇಷ್ಟೆ: ಯಾವುದೇ ಒಳ್ಳೆಯ ಸಿಸ್ಟಂ ತಗೊಳಿ ಅದರ ಜೊತೆಗೆ ಸ್ವಲ್ಪನಾದ್ರೂ ’ಬೇಡವಾಗಿತ್ತು’ ಅನ್ನಿಸುವಂಥಹ ವಿಚಾರಗಳು/ಘಟನೆಗಳು ಇದ್ದೇ ಇರುತ್ವೆ. ನನ್ನ ಪ್ರಕಾರ ಈ ಐಟಿ ನಿಂದ ಕೆಡಕಿಗಿಂತ ಒಳ್ಳೆಯದೇ ಹೆಚ್ಚು ಆಗಿದೆ ಅಂತ.

೩. ಹೌದು ನಾನು ನಿಮ್ಮ ಬ್ಲಾಗಿನ ಕೆಲವು ಸಾಲುಗಳನ್ನು ಮಾತ್ರ ತೆಗೆದುಕೊಂಡೆ ಯಾಕೆಂದ್ರೆ ಅವುಗಳಿಗೆ ಮಾತ್ರ ನನ್ನ ಅನಿಸಿಕೆ ಹೇಳಬೇಕಿತ್ತು. ನಿಮ್ಮ ಬ್ಲಾಗಿನಲ್ಲಿ ಎಲ್ಲಾರೂ ಒಪ್ಪೋ ಕೆಲವು ವಿಚಾರ ಬರೆದಿದ್ದೀರ. ಆವುಗಳನ್ನ ನಾವೆಲ್ಲಾ ಒಪ್ಪಲೇಬೇಕು. ಆದ್ರೆ ಎಲ್ಲವೂ ಒಪ್ಪಲೇಬೇಕಾದವಲ್ಲ ಅಂತ ನನಗನಿಸಿತು. ಹಾಗಾಗಿ ನನಗನಿಸಿದಷ್ಟೆ ನಾನು ಬರೆದಿರೋದು.

೪. ನಾನು ನಿಮ್ಮ ಕೊನೆಯ ಪ್ಯಾರಾಗ್ರಾಫ್ ಓದಿದ್ದೇನೆ. ನಾನು ಇಲ್ಲಿ ಬರೆದದ್ದು ನಿಮ್ಮ ಬ್ಲಾಗನ್ನು ವಿಮರ್ಷಿಸಿ ಅಲ್ಲ. ನಿಮ್ಮ ಬ್ಲಾಗಿನಲ್ಲಿರುವ ಕೆಲವು ವಿಚಾರಗಳು ’ಸಾಮಾನ್ಯವಾಗಿ’ ಎಲ್ಲರಮನಸ್ಸಿನಲ್ಲಿರೋದೇ. ಹಾಗಾಗಿ ನನ್ನ ಬ್ಲಾಗು ಆ ವಿಚಾರಗಳಿಗೆ ಉತ್ತರದಂತೆ ಭಾವ ತರುವುದು. ಕೆಲವು ವಿಶಯಗಳು ತಿಳಿದಿರಲಿ - ಮುಕ್ತವಾಗಿ ಯೋಚಿಸೋಣ ಅಂತಷ್ಟೆ.

೫. ನೀವು ನನ್ನದೇ ವಾಕ್ಯ ತಗೋಡಿರೋದು ಒಳ್ಳೇದೇ. ನನ್ನ ಈ ಬ್ಲಾಗಿನಲ್ಲಿ ಮೊದಲೇ ನಾನು ಹೇಳಿದ್ದೀನಿ: ’ಮೊದಲು’ ವಿರುದ್ಧವಾಗಿ ಯೋಚಿಸುವುದು ಮಾನವ ಸಹಜ ಗುಣ ಅಂತ. :) ಹಾಗಂತ ನಾನು ನಿಮ್ಮ ವಿಚಾರಕ್ಕೆ ವಿರುದ್ಧವಾಗಿ ಬರೆಯಲು ಹೋಗಿಲ್ಲ - ಗಮನಿಸಿ. ಬೇರೊಂದು ಕೋಣದಿಂದ ನೋಡೋದು ಮುಖ್ಯ ಅಂತ ತಿಳಿಸೋದಷ್ಟೆ.

೬. ಮತ್ತೆ ನೀವು ’ತಪ್ಪುಗಳಾಗ್ಬೋದು’ ಅಂತ ಬರೆದಿದ್ದೀರ. ನಾನು ನಿಮ್ಮ ಬ್ಲಾಗಿನಬಗ್ಗೆ ಬರೆಯೋಕೆ ಮುಂಚೆನೇ ಬರೆದಿದ್ದೀನಿ ನಾನು ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನ ’ತಪ್ಪು’ ಅನ್ನುತ್ತಿಲ್ಲ ಅಂತ. ನಾನು ಸರಿ ನೀವು ತಪ್ಪು ಅಂತ ನಾನು ಯಾವತ್ತೂ ಹೇಲೋದಿಲ್ಲ ವಿಕಾಸ್. ಯಾರಿಗೂ ಕೂಡ. ಯಾಕಂದ್ರೆ ನಾನು ಕೂಡ ಬಹಲಷ್ಟು ತಿಳಿಯೋದು ಇದೆ.

ನಾನು ನಿಮ್ಮ ಬ್ಲಾಗಿನಲ್ಲಿ ಯಾಕೆ ನನ್ನ ಅನಿಸಿಕೆ ತಿಳಿಸಲಿಲ್ಲ ಅಂದ್ರೆ ಇದೇ ವಿಚಾರಕ್ಕಾಗಿ. ನಾನು ನಿಮಗೆ ಗೊತ್ತಿಲ್ಲದವ. ನನ್ನ ಅಭಿಪ್ರಾಯ ಬೇರೆಯದೇ ಅರ್ಥ ಬರಬಹುದು ಅಂತ. ಹಾಗಾಗಿ ಸ್ವಲ್ಪ ದೂರದಲ್ಲಿರೋಣ ಅಂತ ನನ್ನ ಬ್ಲಾಗಿನಲ್ಲಿ ಬರೆದೆ. ನಿಜವಾಗಿ ನಾನು ನಿಮ್ಮ ಬೇರೆ ಬ್ಲಾಗುಗಳನ್ನು ಓದಿ ಇಷ್ಟ ಪತ್ತಿದ್ದೇನೆ. ಇಲ್ಲದಿದ್ದರೆ ನಾನು ನಿಮ್ಮ ಬ್ಲಾಗಿಗೊಂದು ಬ್ಲಾಗನ್ನು ಬರೆಯುವ ಪ್ರಯಾಸ ಮಾಡುತ್ತಿರಲಿಲ್ಲ. ಜೊತೆಗೆ ಇದೊಂದು ನನ್ನ ’ಬರವಣಿಗೆ’ಯ ಮಿತ್ರರನ್ನು ಭೇಟಿಮಾಡೊಕ್ಕೆ ಅನುಕೂಲಮಾಡಿದೆ ಅಂದ್ಕೋತಿನಿ.

ನನ್ನ ಅನಿಸಿಕೆ ವಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಆದು ಕೇವಲ information ಆಗಿರಬೇಕಷ್ಟೆ. ವಿಚಾರ ವಿನಿಮಯಮಾಡೋಣ. ಏನಂತಿರಿ?

ವಿಶ್ವಾಸಿ,
ಶ್ರೀ

ವಿಕಾಸ್ ಹೆಗಡೆ/ Vikas Hegde said...

ವೈಯಕ್ತಿಕವಾಗಿ ಏನು ತೆಗೆದುಕೊಂಡಿಲ್ಲ , ನೀವು ಹೇಳಿದಂತೆ ವಿಚಾರ ವಿನಿಮಯ ಅಷ್ಟೆ.

ವಿವರಣೆಗೆ ಧನ್ಯವಾದಗಳು .ಖುಷಿ ಆಯಿತು.

-ವಿಕಾಸ್

Madhu said...

Search in kannada by typing in kannada.

http://www.yanthram.com/kn/

Add kannada search to your blog with onestep.

http://kannadayanthram.blogspot.com

Add Kannda Search to your iGoogle page.

http://www.google.com/ig/adde?hl=en&moduleurl=http://hosting.gmodules.com/ig/gadgets/file/112207795736904815567/kannada-yanthram.xml&source=imag