ಕೆರೆಗಳು ತುಂಬಾ ಚೆನ್ನಾಗಿರುತ್ತೆ ಅಲ್ವಾ? ಅದರಲ್ಲೂ ಸಂಜೆಯ ವೇಳೆ ಅದರ ದಂಡೆಯಲ್ಲಿ ಕೂತು ತಣ್ಣಾಗಿನ ಗಾಳಿ ಅನುಭವಿಸುವುದೇ ಒಂದು ಸುಂದರ ಅನುಭವ. ಇದೇ ದಿನಾ ನಾನು BTM Layoutನ ಕೆರೆ ಮುಂದೆ ಹೋಗುವಾಗ ಅಂದ್ಕೊಳ್ಳೋದು. ಎಷ್ಟು ದೊಡ್ಡ ಜಾಗ, ಎಷ್ಟು ಸುಂದರ ಪ್ರಕೃತಿ! BTM Layoutನ ಕೆರೆ ಅಂದ ತಕ್ಷಣ ನನಗನ್ನಿಸೋದು ಇಷ್ಟು ಚೆನ್ನಾಗಿರೋ ಜಾಗನ ನಾವು ಕಡೆಗಾಣಿಸಿದ್ದೇವಲ್ಲ ಅಂತ. ಇತ್ತೆಚೆಗೆ ಸರ್ಕಾರದವರು ಸ್ವಲ್ಪ ಗಮನ ಕೊಟ್ಟಿರೋಹಾಗಿದೆ. ಕೆರೆಯ ಒಂದು ಭಾಗವನ್ನ ಉದ್ಯಾನವನವಾಗಿಮಾಡುತ್ತಿದ್ದಾರೆ. ಬಹಳ ದಿನಗಳಿಂದ ಕೆಲಸ ನಡೆಯುತ್ತಿದ್ದರೂ ಮಾಡೋಕೆ ತುಂಬಾ ಇದೆ ಅನ್ನಿಸಿತು. ಕಳೆದ ಶನಿವಾರ ಸಂಜೆ ಅದರ ಮುಂದೆ ಹಾದುಹೋಗುವಾಗ ಬಹಳ ಜನಗಳು ಅದರ ಸುಖಾನುಭವ ಕಾಣುತ್ತಿದ್ದರು. ಅದನ್ನ ನೋದಿ ಇನ್ನೂ ಡೆವೆಲಪ್ ಮಾಡಿದ್ರೆ ಜನಗಳು ಅಲ್ಲಿಗೆ ಬರುತ್ತಾರೆ, ಆನಂದ ಪಡುತ್ತಾರೆ ಅನ್ನಿಸ್ತು. ಇನ್ನೊಂದು ವಿಶೇಷ ಈ ಕೆರೆಯದು ಅಂದ್ರೆ ಇದರ ಮಧ್ಯದಲ್ಲಿ ಒಂದು ದ್ವೀಪವಿದೆ. ವೀಕ್ಷಕರಿಗೆ ಅಲ್ಲಿಗೆ ಹೋಗೋ ಅವಕಾಶವಿದ್ರೆ ಹೇಗಿರುತ್ತೆ? ಅಥವಾ ಆ ದ್ವೀಪದಲ್ಲಿ ಒಂದು ಸುಂದರ ರೆಸ್ಟೋರೆಂಟ್ ಇದ್ರೆ? ಹಾಗಿದ್ರೆ ಪ್ರಣಯಿಗಳಿಗೆ ಅದಕ್ಕಿಂತ ಸುಂದರ ತಾಣ ಬೆಂಗಳೂರಿನಲ್ಲಿ ಬೇರೆಯಿರುತ್ತದೆಯೆ? ಹಾಳುಮಾಡದೇ ಉಳಿಸಿಕೊಳ್ಳಬೇಕಷ್ಟೇ! ಇಷ್ಟೇ ದೊಡ್ಡ ಕೆರೆ ಅಮೇರಿಕದಲ್ಲಿದ್ದಿದ್ರೆ ಅದಕ್ಕೆ ಎಷ್ಟೊಂದು ಬೆಲೆ ಕೊಡುತ್ತಿದ್ದರು ಅನ್ನಿಸುತ್ತೆ. ಅದನ್ನ ಒಂದು ಪ್ರವಾಸ ತಾಣವಾಗಿ ಮಾಡಿಬಿಡುತ್ತಿದ್ರು. ಆದ್ರೆ ನಮ್ಮ ಮಾಡಿವಾಳ ಕೆರೆ ಕಲೆಗಳಿಂದ, ಕೆಟ್ಟುನಿಂತಿರೋ ವಾಹನಗಳಿಗೆ, ಕೆಲ ಜನರ ಮಲ-ಮೂತ್ರ ವಿಸರ್ಜಿಸೋ ಜಾಗವಾಗಿದೆ! ಇದನ್ನ ನೋಡಿದ್ರೆ ಬೇಸರವಾಗೋಲ್ವೇ? ಅಷ್ಟೇ ಅಲ್ಲ, ಕೆಮಿಕಲ್ ತ್ಯಾಜ್ಯಕೂಡ ಅದರಲ್ಲಿ ವಿಸರ್ಜಿತವಾಗ್ತಿದೆಯಂತೆ!
ಒಮ್ಮೆ ಈ ಕೆರೆ ಹಲವು ಪಕ್ಷಿಗಳಿಗೆ ತಾಣವಾಗಿತ್ತಂತೆ. ಆದ್ರೆ ಈಗಲೂ ಈ ಪಕ್ಷಿಗಳು ಇಲ್ಲಿಗೆ ಬರುತ್ತಿವೆಯೇ? Times of India 2001 ರಲ್ಲಿ ಒಂದು ಲೇಖನ ಪ್ರಕಾಶಿಸಿತ್ತು. ಅದರಲ್ಲಿ ಬಹಳಷ್ಟು ವಿಷಯಗಳಿದೆ ಈ ಕೆರೆಯಬಗ್ಗೆ.
ಹಾಗೆ ಇಂಟೆರ್‌ನೇಟ್‌ನಲ್ಲಿ ಈ ಕೆರೆಯ ಬಗ್ಗೆ ಹುಡುಕಿದಾಗ, ಮುರಳಿ ಅಲಗಾರ್ ಅವರ ಕೆಲವು ಸುಂದರ photographs ಸಿಕ್ಕವು. ಮತ್ತೊಂದು ಲೇಖನ ಮತ್ತು ಫೋಟೋಗಳು. ನೀವೂ ನೋಡಿ ಆನಂದಿಸಿ! ಇಂಥಾ ಪಕ್ಷಿಗಳು ಇನ್ನೂ ಇಲ್ಲಿಗೆ ಬರುತ್ತಿವೆಯೇ? ಹೌದು ಅನ್ನಿಸತ್ತೆ: ಈ ಲೇಖನ ಓದಿ. ಇನ್ನೂ ಮುಂದೆಯೂ ಹಿಂದಿನಷ್ಟೇ ಪಕ್ಷಿಗಳು ಬರುತ್ತವೆಯೇ? ಈ ಪ್ರಶ್ನೆ ಗೆ ನನ್ನಲ್ಲಿ ಉತ್ತರವಿಲ್ಲ. ಕಂಡುಕೊಳ್ಳಲು ಪ್ರಯತ್ನಿಸಬೇಕಷ್ಟೆ!
ನಮ್ಮ ಘನ ಸರ್ಕಾರ ಬೆಂಗಳೂರಿನ ಹಲವು ಇಂಥಾ ಕೆರೆಯಗಳನ್ನ ಜೀರ್ಣೋಧ್ಧಾರ ಮಾಡಿ ಸುಂದರ ತಾಣಗಳನ್ನು ಉಳಿಸಿಕೊಳ್ಳಳಿ ಅನ್ನೋದೇ ನನ್ನ ಆಸೆ!
Subscribe to:
Post Comments (Atom)
No comments:
Post a Comment