"ಫೂಂಕ್ ಗೆ ಭಾನುವಾರಕ್ಕೆ ಟಿಕೆಟ್ ಸಿಕ್ಕಿದೆ"
"ಹೂಂ, ನಾನು ಬರಲ್ಲ.. ನೀವು ಬೇಕಾದ್ರೆ ಹೋಗಿ"
"ಅಯ್ಯೋ! ಅದ್ರಲ್ಲಿ ಏನೂ ಇರಲ್ಲ, ನಿಂಗೆ ಭಯ ಆದ್ರೆ, ಶಾಪಿಂಗ್ ಮಾಡ್ತಿರು!!"
"ನಾನೂ ನೋಡ್ತೀನಿ ಕಂಡ್ರಿ, ಅದರಲ್ಲೇನಿದೆ ಅಂತ, ನಡೀರಿ ಹೋಗಣ.."
ಅಂತೂ ನಾನು ನನ್ನ ಹೆಂಡ್ತಿ ಹೊರಟ್ವಿ. ಶನಿವಾರದ ಒಂದು ad ನಲ್ಲಿ ನೋಡಿದ ಒಂದು scene, ನನಗ್ಯಾಕೋ ಇದು ಕನ್ನಡದ ಹಳೆಯ remake ಇರಬೇಕು ಅನ್ನಿಸ್ತು. ಸರಿ ಇನ್ನೇನು, ನೋಡಿದಾಗ ಗೊತ್ತಾಗತ್ತೆ ಅಂತ ಹೊರಟೆ. ೨ ಗಂಟೆಗೆ ಸರಿಯಾಗಿ show ಶುರುವಾಯ್ತು. ನೋಡ್ತಾ ನೋಡ್ತಾ, ಹೌದು.. ಇದು mordern 'ತುಳಸಿ ದಳ' ನೆ!! ಶರತ್ ಬಾಬು, ಬೇಬಿ ರೇಖಾ, ಸುಂದರ್ ರಾಜ್, ತಾರ [ನನ್ನ ನೆನಪು ಸರಿಯಿದ್ದರೆ ಅವರು ಬೆಳ್ಳಿಪರದೆಯ ಜೀವನ ಪ್ರಾರಂಭಿಸಿದ್ದು ಈ ಚಿತ್ರದಿಂದ] (ಎಲ್ಲಾರೂ ಜ್ಞಾಪಕದಲ್ಲಿಲ್ಲ) ನಟಿಸಿದ್ದ ೮೦ರ ದಶಕದ ಕನ್ನಡ ಪಿಕ್ಚರ್ ನ modern ಅವತಾರನೇ ಇದು. ಅದನ್ನೇ ನನ್ನ ಹೆಂಡತಿಗೆ ಹೇಳ್ದೆ. ಸಿನೆಮಾ ನೋಡ್ತ ಅವಳೂ ಹೆದರಲಿಲ್ಲ.. :)
RGV ಅವರು ಈ ಸಿನೆಮಾನ ಒಬ್ಬರೇ ನೋಡಿದ್ರೆ ೫ ಲಕ್ಷ ಕೊಡ್ತೀನಿ ಅಂತ ಹೇಳಿದರಂತೆ. ಸಿನೆಮಾನ ನೋಡ್ತಸುಲಭವಾಗಿ ೫ ಲಕ್ಷ ಕಳೆದು ಕೊಂಡೆ ಅನ್ನಿಸ್ತು. ಚಿತ್ರ, ಕೆಲವು ವಿಮರ್ಷಕರುಹೇಳಿದಂತೆ ತುಂಬಾ ಕಳಪೆಏನಲ್ಲ. ಜೊತೆಗೆ ನಮ್ಮ ಕಿಚ್ಚ ಸುದೀಪ್ ಚೆನ್ನಾಗೇ ಮಾಡಿದ್ದಾರೆ. ಅವರ ಛಾಯೆ ಚೆನ್ನಾಗೇ ಮೂಡಿದೆ. ನಾನು ತುಳಸಿ ದಳ ನೋಡಿದಾಗ, ನಾನು ಚಿಕ್ಕವನಿದ್ದೆ. ನಿಜವಾಗಿ ಅದನ್ನ ದೊಡ್ಡ ಪರದೆಯ ಮೇಲೆ ನೋಡಿದಾಗ ಭಯಗೊಂಡಿದ್ದೆ. ನಿಜವಾಗಿ ಅ ಚಿತ್ರದಲ್ಲಿ 'ವಾಮಾಚಾರ'ದ ಭಯಂಕರ ನೋಟ ತೋರಿಸಿದ್ದಾರೆ ನಿರ್ದೇಶಕರು. ಹೊಸ ಚಿತ್ರದಲ್ಲಿ special effects ಹೊಸ ತಂತ್ರಜ್ಞಾನದಲ್ಲಿ ಜೋರಾಗಿ ಚಿತ್ರಿಸಿದ್ದಾರೆ.. ಏನೇ ಆಗಲೀ, ನಿಜವಾದ ವಾಮಾಚಾರದ ಭಯ ತುಳಸಿ ದಳದಲ್ಲೇ ಆಗೋದು.
ಈ ವಾಮಾಚಾರ ಅಂದ್ರೆ ಜ್ಞಾಪಕಕ್ಕೆ ಬಾರೋ ಇನ್ನೊಂದು ಹಳೆಯ ಕನ್ನಡ ಚಿತ್ರ ಅಂದ್ರೆ 'ಏಟು ಎದುರೇಟು' (ಶ್ರೀನಾಥ್, ಲಕ್ಷ್ಮಿ, ಸುಂದರ ಕೃಷ್ಣಾ ಅರಸ್). ಅಬ್ಬ! ನಿಜವಾಗಿ ಭಯ ಆಗಲ್ವ? ಈಗ TV ನಲ್ಲಿ ಅದನ್ನ ನೋಡಿ ಭಯ ಹೋಗಿರಬಹುದು ಆದ್ರೆ ಮೊದಲು ನೋಡಿದಾಗ ನನಗಂತೂ ಭಯವಾಗಿತ್ತು. :)
------------------------------
ಅದನ್ನ ಮುಗಿಸಿಕೊಂಡು ಹೊರಡುವಾಗ ನನ್ನ ಮೊಬೈಲ್ ಕೂಗ್ತು.. "ಎಲ್ಲಿದ್ದೀಯ? ಬರ್ತಿಯಾ?" ಅಂತ ಅತ್ತ ಕಡೆಯಿಂದ ನನ್ನ ಮಾವ ಕೇಳಿದ್ರು. "ಹೂಂ, ಬರ್ತಿದ್ದೀನಿ, function ಶುರುವಾಯ್ತ ಆಗ್ಲೇ?" ಅಂತ ಹೇಳಿ ನನ್ನ ಹಳೆಯ ಕಾಲೇಜಿನ ಕಡೆ ನನ್ನ ಕಾರನ್ನ ತಿರುಗಿಸಿದೆ - ನ್ಯಾಷನಲ್ ಕಾಲೇಜ್, ಜಯನಗರ.. ಅಲ್ಲಿನ H.N. ಕಲಾಕ್ಷ್ಟೇತ್ರ ದಲ್ಲಿ ನಮ್ಮ ದೊಡ್ಡಪ್ಪ, H. C. ರಾಮಾಶಾಸ್ತ್ರಿ, ಅವರಿಗೆ ಸನ್ಮಾನ ಸಮಾರಂಭ ಇತ್ತು. ನಮ್ಮ ದೊಡ್ಡಪ್ಪ ಏನೆಲ್ಲಾ ಮಾಡಿದ್ದಾರೆ - ಕನ್ನಡ ಮತ್ತು ಸಂಸ್ಕೃತ ಕ್ಷೇತ್ರಗಳಲ್ಲಿ ಅಂತ ನಮಗೆ ಸಂಪೂರ್ಣವಾಗಿ ಅರಿವಾದದ್ದೆ ನಿನ್ನೆಯ ಸಮಾರಂಭದಲ್ಲಿ. ಅವರು ಸಂಸ್ಕೃತದಲ್ಲಿ ವಿದ್ವಾಂಸರು ಅಂತ ಗೊತ್ತಿತ್ತು, ನಮ್ಮ ಮೈಸೂರು ಮಹಾರಾಜರಲ್ಲಿ ಕೈ ಕಡಗ ಪಡೆದಂಥವರು ಅಂಥ ನನ್ನಮ್ಮ ಹೇಳುತ್ತಿದ್ದುದು ನೆನೆಪಿಗೆ ಬಂತು. ಆದರೂ ವಿಶ್ವ ಸಂಸ್ಕೃತ ಪ್ರತಿಷ್ಠಾನ ದವರು ಸನ್ಮಾನಿಸುವುದು ನಮಗೆ ಅಲ್ಪದ ವಿಷಯವಲ್ಲ - ಬಹು ದೊಡ್ಡದು. ನಾನಂತೂ ಹೆಮ್ಮೆಯಿಂದ ಬೀಗಿದೆ! ಅದೇ ವಿಷಯ ಹೇಳಬೇಕು ಅಂತಾನೆ ನನ್ನ ಬ್ಲಾಗಿನಲ್ಲಿ ಅವರ ವಿಷಯ ಬರೆದಿಡೋದು.. ನನ್ನ ದೊಡ್ಡಪ್ಪನ ಹೆಸರಿನಲ್ಲಿ ನಾನು ಸ್ವಲ್ಪ show-off ಮಾಡ್ತಿದ್ದೀನಿ ಅಷ್ಟೆ!! :)
ಪ್ರತಿಷ್ಠಾನ ದ website ಇರಬಹುದೆಂದು ಹುಡುಕಿದೆ. ಅವರದ್ದು ಪುಸ್ತಕದಲ್ಲೂ ತಡಕಾಡಿದೆ, ಎಲ್ಲೂ ಸಿಗಲಿಲ್ಲ! ಆದರೆ, ಇವತ್ತಿನ ವಿಜಯ ಕರ್ನಾಟಕದಲ್ಲಿನ 'ಉದ್ಯಾನ ನಗರಿ'ಯ ಒಂದನೇ ಪುಟದಲ್ಲಿ ಎಡಭಾಗದ ಕಾಲಂನಲ್ಲಿ ಮೊದಲನೆ ಚಿತ್ರದಲ್ಲಿ ದೊಡ್ದಪ್ಪನವರಿಗೆ ಸನ್ಮಾನಿಸಿದ ಬಗ್ಗೆ ಬರೆದಿದೆ.