Monday, October 08, 2007

ಕೋಪ...

ಮೊನ್ನೆ ಮನೆಯಲ್ಲಿ ಯಾವುದೋ ವಿಷಯಕ್ಕೆ ಕೋಪಿಸಿಕೊಂಡು ನನ್ನ ಸ್ನೇಹಿತನಜೊತೆ ಹೊರಗೆ ಹೋಗಿದ್ದೆ. ಅಲ್ಲಿ ಅವನಜೊತೆ ಏನೇನೋ ತಿನ್ನುವಾಗ, ಒಂದೆರಡು ಜೋಡಿಗಳು ಬಂದು ತಿನ್ನುತ್ತಿದ್ದುದು ಕಣ್ಣಿಗೆ ಬಿತ್ತು. ನನ್ನ ಸ್ನೇಹಿತನ ಜೊತೆ ಖುಷಿಯಾಗಿ ತಿನ್ನುತ್ತಿರೋಹಾಗೆ ಸುಳ್ಳು ಸೋಗೆ ಮುಖದಲ್ಲಿ ಹಾಕಿದ್ದರೂ, ಒಳಗಿದ್ದ ನೋವು ನನಗೆ ಮಾತ್ರ ಗೊತ್ತಿತ್ತು. ನಾನಂದುಕೊಂಡೆ - ನಾನೂ ಸಹ ನನ್ನ ಹೆಂಡತಿ ಜೊತೆ ಇಲ್ಲಿ ಅವರಹಾಗೇನೇ ತಿನ್ನುತ್ತಿದ್ದರೆ ಹೇಗಿತ್ತು ಅಂತ. ಖುಷಿಯಾಗಿ ಅವಳಜೊತೆ ತಿನ್ನುವ ಆನಂದವೇ ಬೇರೆ! ಆದ್ರೆ ಇದ್ದ ಕೋಪ?!! ಸರಿ, ಅವನೊಂದಿಗೆ ತಿಂದು ಎಷ್ಟೋ ಆನಂದಿಸಿ ಹೊರಟೆ. ಸ್ವಲ್ಪ ಹೊತ್ತು ಹೊರಗೆ ಸುತ್ತಾಡಿ ನಂತರ ಮನೆ!

ನಾನು ಬಹಳಬಾರಿ ಯೋಚಿಸಿದ್ದೇನೆ. ನಾವೇಕೆ ಕೋಪಿಸಿಕೊಳ್ಳುತ್ತೇವೆ? ಅದರಲ್ಲೂ ನಾವು ಇಷ್ಟಪಡುವವರ ಮೇಲೆಯೇ? ನಾನು ಗಮನಿಸಿರೋ ಹಾಗೆ ಹೆಚ್ಚಾಗಿ ನಾನು ಕೋಪಿಸಿಕೊಳ್ಳೋದು ಅಮ್ಮನಮೇಲೆ. ಯಾಕೇಂದ್ರೆ ಅವರೇ ತಾನೆ ಸುಲಭವಾಗಿ ಮಕ್ಕಳಿಗೆ ಸಿಗೋರು! ಮತ್ತೆ ಅಷ್ಟೇಬೇಗ ಅದು ಹೋಗುತ್ತೆ. ಬೇಜಾರಾಗುತ್ತೆ, ನಂತರ ಪಶ್ಚಾತ್ತಾಪ. ಅದು ಅಮ್ಮಂದಿರಿಗೂ ಗೊತ್ತು ಅನ್ನಿಸುತ್ತೆ. ಅದಕ್ಕೇ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಆವರಿಗೂ ಗೊತ್ತು, ನಾನು ಇಷ್ಟವಿಲ್ಲದೆ ಬಯ್ಯುತ್ತಿಲ್ಲ, ಕೇವಲ ಕ್ಷಣಿಕ ಕೋಪ. ಅದೇನೇ ಆಗಲಿ, ಕೋಪ ಕೋಪವೇ ಅಲ್ಲವೇ? ಆದು ಒಳ್ಳೆಯದಲ್ಲ ಅಂತ ನನಗೆ ಗೊತ್ತಿದೆ. ಆದರೂ ಯಾಕೆ ಅದನ್ನ ಸರಿ ಪಡಿಸಿಕೊಂಡಿಲ್ಲ? ಸಂಯಮ ಏಕೆ ಕಂಡು ಬರುತ್ತಿಲ್ಲ? ಅದರಲ್ಲೇ ಗೊತ್ತಾಗುತ್ತೆ ನಾನಿನ್ನೂ ಪಕ್ವವಾಗಿಲ್ಲ ಅಂತ :( ಒಮ್ಮೆ ಕೋಪಿಸಿಕೊಂಡು ಅದರ ಬಗ್ಗೆ ಪಶ್ಚಾತಾಪ ಪಟ್ಟಮೇಲೂ ಅದನ್ನು ಸಂಪೂರ್ಣವಾಗಿ ಬಿಟ್ಟಿಲ್ಲ ಅಂದ್ರೇನರ್ಥ??

ನನ್ನನ್ನ ಬಹಳವರ್ಷ ನೋಡಿದ ನನ್ನ ಸ್ನೇಹಿತ ಒಮ್ಮೆ ನನ್ನ ಕೋಪ ನೋಡಿ ಹೇಳಿದ - ’ನೀನು ಇಷ್ಟು ಕೋಪ ಮಾಡಿಕೊಂಡಿದು ನಾನು ನೋಡಿಲ್ಲ. controlಮಾಡಿರ್ತಿಯ ಆದ್ರೆ ಈಗೀಗ ಯಾಕೆ ಹೇಗಾಗಿದ್ದೀಯ?’ ಅಂತ. ಅದಕ್ಕೆ ಉತ್ತರ ನನ್ನಲ್ಲಿರಲಿಲ್ಲ. ನಾನು ಕಂಡಂತೆ ನಾನು ಕಿಂಚಿತ್ತು ಸಂಯಮ ಗಳಿಸಿದ್ದೇನೆ (ಪ್ರಯತ್ನಿಸಿದ್ದೇನೆ ಅನೋದು ಸರಿಯಿರಬಹುದು). ಬೇಗ ಕೋಪಿಸಿಕೊಳ್ಳೋದಿಲ್ಲ. ತಕ್ಷಣ ಬಂದ ಕೋಪನ ತಡೆಯುತ್ತೀನಿ. ಕೋಪ ಬಂದಾಗ ಮೂಲ ಯೋಚನೆಗೆ ತದ್ವಿರುದ್ಧವಾಗಿ ಯೋಚಿಸಲು ಪ್ರಾರಂಭಿಸಿತ್ತೀನಿ. ಆಗ ನನಗೆ ಹಿಂದಿನ ಅನಿಸಿಕೆ ತಪ್ಪು ಅನ್ನಿಸೋಕೆ ಶುರುವಾಗತ್ತೆ. ಆಗ ಅಂದುಕೋತಿನಿ - ನಾನು ಯಾರು ತಪ್ಪು ಅಂತ ತಿಳ್ಕೊಂಡು ಕೋಪಮಾಡಿಕೊಂಡಿದ್ದೆ ಅದು ಅವರಕಡೆಯಿಂದ ತಪ್ಪಲ್ಲ. ಹಾಗೇ ಒಂದುವೇಳೆ ಅಲ್ಲದಿದ್ದರೆ, ನನಗನ್ನಿಸಿದುದನ್ನು ಸರಿಯಾದ ರೀತಿಯಲ್ಲಿ ಹೇಳಬೇಕು (ನಾನು ಹಾಗೆ ಅಂದುಕೊಂಡು ಮತ್ತೆ ನನ್ನ ಸೌಮ್ಯಕ್ಕೇಏಟುಬಿದ್ದು ಕೋಪಿಸಿಕೊಂಡ ಸಮಯಗಳಿವೆ). ನನಗೆ ಕೋಪಬಂದಾಗ ಬೇರೇ ರೀತಿಯಲಿ ಯೋಚಿಸಕ್ಕೆ ಪ್ರಯತ್ನ ಪಾಡುತ್ತೇನೆ. ಏನೇಆದ್ರೂ ನಾವು ನಮ್ಮ ಕೋಪ ತಡಿಯದೆ ಏನೇನೋ ಮಾತಾಡಿ ನಂತರ ಪಶ್ಚಾತಾಪಪಟ್ಟರೆ ಅದು ಎಷ್ಟು ಸಮ? ಅದು ಯಾವರೀತಿಯಲ್ಲೂ ಸಹಾಯ ಮಾಡುವುದಿಲ್ಲ. ’ಕೋಪದಲ್ಲಿ ಕುಯ್ದ ಮೂಗು ಮತ್ತೆ ಶಾಂತವಾದಾಗ ಬರುವುದಿಲ್ಲ’ ಅನ್ನೋ ಮಾತು ನಿಜ! ಕೋಪದಲ್ಲಿ ನಾವಾಡುವ ಮಾತು ತುಂಬಾ ನೋವುಂಟುಮಾಡುತ್ತದೆ. ಅದಕ್ಕೇ ಏನೇ ಮಾತಾಡುವಾಗಲೂ ಅದು ಬೇರೆಯವರಿಗೆ ಎಂಥಹ ಪರಿಣಾಮಬೀರಬಹುದು ಅಂತ ಸ್ವಲ್ಪ ಯೋಚಿಸಿದರೆ ಉತ್ತಮ. ಹೀಗೇ ಯೋಚಿಸಲು ಪ್ರಾರಂಭಿಸಿದರೆ, ಆ ಸಮಯದಲ್ಲೀ ಬಹಳಷ್ಟು ವೇಳೆ ನಮ್ಮ ಕೋಪ ತಣ್ಣಾಗಾಗಬಹುದು. ಮುಂದಾಗುವ ಹಾನಿಯನ್ನು ತಡೆಯಬಹುದು. ಇಲ್ಲಾ, ’ಮೌನೇ ಕಲಹಂ ನಾಸ್ತಿ’ ಅನ್ನೋ ಸಂಸ್ಕೃತದ ನುಡಿಯನ್ನ ಪಾಲಿಸಬೇಕು.

ನಾನು ಗಮನಿಸಿರೋ ಮತ್ತೊಂದು ವಿಷಯ ಅಂದ್ರೆ, ಮನೆಯವರ ಮೇಲೆ ಬೇಗ ಕೋಪಿಸಿಕೊಳ್ಳುವ ಎಷ್ಟೋಮಂದಿ ಮನೆಯ ಹೊರಗಿನವರ ಮೇಲೆ ಮಾಡೊದಿಲ್ಲ. ಅಲ್ಲಿ ಬಹಳಷ್ಟು ಸಮಾಧಾನವಾಗಿ ಮಾತಾಡುತ್ತಾರೆ. ಒಂದು t-shirtನ ಮೇಲೆ ಓದಿದ ನೆನಪು: "you always hurt the ones you love" ಅಂತ! :) ಹಾಂ! ಬೇರೆಯವರ ಬಗ್ಗೆ ತಲೆಯಾಕೆ ಕೆಡಿಸಿಕೊಳ್ಳೊಡು ಉಅಂತಿರ್ಬೇಕು ಅಲ್ವೆ? ಅವರು ಏನು ಮಾಡಿದರೆ ನನಗೇನು, ಸರಿಯಾದ್ರೂ ಆಗ್ಲಿ, ತಪ್ಪಾದ್ರು ಆಗ್ಲಿ.. ಅದೇ ಮನೆಯವರಲ್ಲಿ/ಗೊತ್ತಿರುವವರಲ್ಲಿ??? ಇನ್ನೊಂದು ಸಾಲು ನೆನಪಿಗೆ ಬರುತ್ತಿದೆ ’ಪ್ರೀತಿಯಿದ್ದಲ್ಲಿ ಕೋಪವಿರುತ್ತೆ’ ಅಂತ!! ಅಥವ ಇದೊಂದು ಕೇವಲ ಕೋಪಮಾಡಿಕೊಳ್ಳೋದಕ್ಕೆ ಕೊಡೊ excuseಏ?

ನಾವೆಷ್ಟೇ ಓದಿರಲಿ, ಏನೆಲ್ಲಾ ಸಾಧಿಸಿರಬಹುದು, ಆದ್ರೆ ಕೋಪ ನಿಗ್ರಹಮಾಡಿರದೆದ್ದಲ್ಲಿ ಏನು ಪ್ರಯೋಜನ. ಯಾವುದಾದರೊಮ್ಮೆ, ಬಂದ ಕೋಪ ಅದೆಲ್ಲವನ್ನೂ ನೀರಿನ ಮೇಲೆ ಹೋಮ ಮಾಡಿದಂತೆ ಮಾಡುತ್ತದೆ. ನೀವು ಯಾರಿಗೇ ಎಷ್ಟೇ ಸಹಾಯ ಮಾಡಿರಿ, ಒಂದು ಕೋಪದ ಮಾತು ಅದೆಲ್ಲವನ್ನೂ ಬೆಲೆಯಿಲ್ಲದಂತೆ ಮಾಡುತ್ತದೆ. ನಮ್ಮ ಸಮಾಧಾನ ಎಲ್ಲರಲ್ಲಿ ಒಳ್ಳೆಯ ಅಭಿಪ್ರಾಯ ತರುತ್ತೆ.

ತುಂಬಾಜನ ’ನಾನು ಅವನನ್ನು ನೋಡಿಲ್ಲ, ಮಾತಾಡಿಸಿಲ್ಲ, ಆದ್ರೂ ಯಾಕೋ ಅವನ್ನ ಕಂಡ್ರೆ ನಂಗೆ ಕೋಪಬರುತ್ತೆ’ ಅಂತ ಹೇಳೋದು ಕೇಳಿದ್ದೀನಿ. ಯಾರೋ ಯಾಕೆ, ನಾನೇ ಹಾಗೆ ಹೇಳಿರೋದು (ಹಲವು ಹರ್ಷಗಳ ಹಿಂದೆ) ನೆನಪಿದೆ. ಅದಕ್ಕೆ ಕಾರಣ, ನಾವು ಅವರ ಬಗ್ಗೆ ನಮಗಿಷ್ಟವಿಲ್ಲದ, ಕೋಪಬರಿಸುವ ಗುಣಹೋದಿರೋರು ಅಂತಷ್ಟೇ ನಮ್ಮ ಮನಸ್ಸಿನಲ್ಲಿ ಯೋಚಿಸಿ ನಮ್ಮದೇ ಆದ ಕಲ್ಪನೆಯಲ್ಲಿ ಅವರನ್ನು ಕೆಟ್ಟವರನ್ನಾಗಿ ಮಾಡಿ ಕೋಪಿಸಿಕೊಳ್ಳುತ್ತೇವೆ. ಅಲ್ರೀ, ಅವರು ಗೊತ್ತೇಇಲ್ಲ ಅಂದಮೇಲೆ ಅವರು ಕೆಟ್ಟವರು ಹೇಗೆ ಆಗ್ತಾರೆ ಸ್ವಾಮಿ? ವಿಚಿತ್ರ ಅಲ್ವೆ? ಯಾರೇ ಆಗಲಿ, ಅವರಲ್ಲಿ ಒಳ್ಳೆಯದನ್ನು ಹುಡುಕಬೇಕು. ಅವರಲ್ಲಿ ಓಳ್ಳೆಯ ಗುಣಗಳನ್ನಷ್ಟೇ ಗಮನಿಸಬೇಕು. ಆಗಷ್ಟೇ ನಾವು ಎಲ್ಲರಲ್ಲೂ ಚೆನ್ನಾಗಿರಲು ಸಾಧ್ಯ. ಬೇರೆಯವರನ್ನು ಹೊಗಳೋದು ಬೇಡ, ತೆಗಳೋದುಕೂಡ ಯಾಕೆ? ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಒಳ್ಳೆಯ ಗುಣ ಇದ್ದೇ ಇರುತ್ತೆ, ಅದು ಎಲ್ಲರಿಗೂ ಗೊತ್ತಿರಲೇಬೇಕಿಲ್ಲ. ಹಾಗಾಗಿ, ನನಗಿಷ್ಟವಿಲ್ಲದಿದ್ದರೆ ನಾನು ಸುಮ್ಮನಿರಬೇಕೇ ಹೊರತು ಅವರಬಗ್ಗೆ ಕೋಪದಲ್ಲಿ ಏನೋ ಹೇಳುವುದು ಎಷ್ಟು ಸರಿ?

ಸರಿ. ಮತ್ತೆ ಏನೇನೋ ಬರಿಯುತ್ತಿದ್ದೆನಿ ಅನ್ನಿಸ್ತಿದೆ... ನಾನು ಈಥದ ಮಾತಾಡೋವಾಗೆಲ್ಲಾ ನನ್ನ ಹೆಂಡತಿ ’ನೀವು ತೊಂಬತ್ತು ವರ್ಷದವರಂತೆ ಮಾತಾಡ್ತಿರ ಈಗ್ಲೆ, ಮುಂದೆ ನನ್ನ ಗತಿಯೇನು’ ಅಂತ ಅವಳ ಮುದ್ದಾದ ಮುಖದಲ್ಲಿ ಆತಂಕತುಂಬಿ ಹೇಳೋದು ನೋಡಿ ತುಂಬಾಸಲ (ಒಳಗೊಳಗೇ) ನಕ್ಕಿದ್ದೇನೆ. ನಿಜವಾಗ್ಲೂ ನಂಗೆ ತೊಂಬತ್ತು ಅಲ್ಲಾರಿ... :(

7 comments:

Anonymous said...

"ಇನ್ನೊಂದು ಸಾಲು ನೆನಪಿಗೆ ಬರುತ್ತಿದೆ ’ಪ್ರೀತಿಯಿದ್ದಲ್ಲಿ ಕೋಪವಿರುತ್ತೆ’ ಅಂತ!! ಅಥವ ಇದೊಂದು ಕೇವಲ ಕೋಪಮಾಡಿಕೊಳ್ಳೋದಕ್ಕೆ ಕೊಡೊ excuseಏ?"


I liked those lines very much.Nan prakaara namman defend maaDkoLo vidhaana adu.Yes!Its an excuse.
Its more like taking someone for granted.Yaavaglu work aagalla adu.Kelv jana kopa bandaaga baig bandhang maathaaDthaare aamele thaavenu maaDe illa anno haag irthaare.Himse aagatthe.

ಶ್ರೀ said...

Thank you, anonymous, for the comment!

ಅವರು ಮಾತಾಡಿದ್ದೆಲ್ಲಾ ನಿಜವಾಗಿ ಮರೆತಿದ್ದಾರೆಂದರೆ - ಅನ್ನಿಸಿಕೊಂದವರಿಗೆ ಅವೆಲ್ಲಾ ’ಆರದ ಗಾಯ’ ವಾಗಿಲ್ಲದಿದ್ದಲ್ಲಿ - ಅದು ಒಳ್ಳೆಯದೇ ಅಲ್ಲವೆ? ನಾವು ಯಾವಾಗಲೂ ಕಹಿ ನೆನಪುಗಳನ್ನು ಮರೆತು ಮುಂದೆ ಹೋಗಬೇಕು. ಎಲ್ಲಾವುದಕ್ಕೂ ಅಪವಾದಗಳಿರೋಹಾಗೇ, ಇದಕ್ಕೂ ಕೂಡ, ಮಾತಿನ ತೀಕ್ಷ್ಣತೆ ಮಿತಿಮೀರಿಹೋದಾಗ ಮರೆಯುವುದು ಸ್ವಲ್ಪ ಕಷ್ಟ ಅನ್ನೋದು ನನ್ನ ಅನಿಸಿಕೆ.

Pradeep said...

"ನಾವು ಅವರ ಬಗ್ಗೆ ನಮಗಿಷ್ಟವಿಲ್ಲದ, ಕೋಪಬರಿಸುವ ಗುಣಹೋದಿರೋರು ಅಂತಷ್ಟೇ ನಮ್ಮ ಮನಸ್ಸಿನಲ್ಲಿ ಯೋಚಿಸಿ ನಮ್ಮದೇ ಆದ ಕಲ್ಪನೆಯಲ್ಲಿ ಅವರನ್ನು ಕೆಟ್ಟವರನ್ನಾಗಿ ಮಾಡಿ ಕೋಪಿಸಿಕೊಳ್ಳುತ್ತೇವೆ"

ಅತ್ಯುತ್ತಮ ಸಾಲುಗಳು ಶ್ರೀ, ನನ್ನ ಅನುಭವದಂತೆ ನೂರಕ್ಕೆ ನೂರರಷ್ಟು ನಿಜ!!!

-ಪ್ರದೀಪ್

ಶ್ರೀ said...

ಪ್ರದೀಪ್, ಧನ್ಯವಾದಗಳು! ನಾನು ಈ blog ಬರೆಯುವಾಗ ನಿಮ್ಮನ್ನು ಬಹಳಷ್ಟು ನೆನಪಿಸಿಕೊಂಡಿದ್ದೇನೆ. ನಮ್ಮ ಒಂದು late night ಮಾತುಕತೆ ನನ್ನ ನೆನಪಿನಿಂದ ಹೋಗಿಲ್ಲ. :)

Anonymous said...

World Of Warcraft gold for cheap
wow power leveling,
wow gold,
wow gold,
wow power leveling,
wow power leveling,
world of warcraft power leveling,
world of warcraft power leveling
wow power leveling,
cheap wow gold,
cheap wow gold,
buy wow gold,
wow gold,
Cheap WoW Gold,
wow gold,
Cheap WoW Gold,
world of warcraft gold,
wow gold,
world of warcraft gold,
wow gold,
wow gold,
wow gold,
wow gold,
wow gold,
wow gold,
wow gold
buy cheap World Of Warcraft gold t3l6q7gx

Anonymous said...

runescape money runescape gold as runescape money buy runescape money runescape gold runescape gold runescape money buy runescape money runescape money runescape gold wow power leveling wow powerleveling Warcraft Power Leveling Warcraft PowerLeveling buy runescape gold buy runescape money runescape itemsrunescape accounts runescape gp dofus kamas buy dofus kamas Guild Wars Gold buy Guild Wars Gold lotro gold buy lotro gold lotro gold buy lotro gold lotro gold buy lotro gold runescape money

Anonymous said...

wow gold
wow gold
wow gold
wow gold
wow power leveling
wow power leveling
wow power leveling
wow power leveling
World of Warcraft Gold
wow gold
wow power leveling
wow gold
wow gold
wow gold
wow power leveling
wow power leveling
Rolex Replica
rolex
Rolex Replica
rolex
Rolex
租房
租房
北京租房
北京租房
changyongkuivip